ಚುನಾವಣೆಗೆ ವಿಜಯಪುರ ಸನ್ನದ್ಧ: 17,75,839 ಮತದಾರರು, 2,101 ಮತಗಟ್ಟೆ

Update: 2019-03-11 06:06 GMT

ವಿಜಯಪುರ, ಮಾ.11: ಲೋಕಸಭಾ ಚುನಾವಣೆಗೆ ವಿಜಯಪುರ ಜಿಲ್ಲಾಡಳಿತ ಸಂಪೂರ್ಣವಾಗಿ ಸನ್ನದ್ಧವಾಗಿದೆ ಎಂದು ವಿಜಯಪುರ ಜಿಲ್ಲಾಧಿಕಾರಿ ವೈ.ಎಸ್ ಪಾಟೀಲ ತಿಳಿಸಿದ್ದಾರೆ.

 ವಿಜಯಪುರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಮಾತನಾಡಿದ ಅವರು, ಲೋಕಸಭಾ ಚುನಾವಣೆ ಶಾಂತಿಯುತವಾಗಿ ಹಾಗೂ ವ್ಯವಸ್ಥಿತವಾಗಿ ನಡೆಸಲು ಸೂಕ್ತ ಕ್ರಮಗಳನ್ನು ಕೈಕೊಳ್ಳಲಾಗಿದೆ. ವಿಜಯಪುರ ಲೋಕಸಭಾ ಕ್ಷೇತ್ರದಲ್ಲಿ ಒಟ್ಟು  17,75,839 ಮತದಾರರು ಇದ್ದಾರೆ. ಇದರಲ್ಲಿ 9,11,667 ಪುರುಷ ಮತದಾರರು, 8,63,930 ಮಹಿಳಾ ಮತದಾರರಾಗಿದ್ದಾರೆ. 16,097 ವಿಕಲಚೇತನರನ್ನು ಗುರುತಿಸಲಾಗಿದೆ ಎಂದವರು ವಿವರಿಸಿದರು.

ಒಟ್ಟು 2,101 ಮತಗಟ್ಟೆಗಳನ್ನು ಸ್ಥಾಪಿಸಲಾಗುವದು. ಈಗಾಗಲೇ ಚುನಾವಣೆ ಪ್ರಕ್ರಿಯೆ ಹದ್ದಿನ ಕಣ್ಣಿಡಲು 8 ಜನ ಸಹಾಯಕ ನಿರ್ವಾಚರಣಾಧಿಕಾರಿಗಳು ಕಾರ್ಯನಿರ್ವಹಿಸುತ್ತಿದ್ದಾರೆ. ಮುಕ್ತ ಚುನಾವಣೆ ನಡೆಸಲು ಲೆಕ್ಕಪತ್ರ, ತನಿಖಾ ಠಾಣೆ, ಸಂಚಾರಿ ಹೀಗೆ ವಿವಿಧ ಜಾಗೃತ ದಳದ ತಂಡಗಳನ್ನು ಈಗಾಗಲೇ ರಚಿಸಲಾಗಿದೆ ಎಂದವರು ತಿಳಿಸಿದರು.

ಚುನಾವಣೆ ಸಂಹಿತೆ ತಕ್ಷಣದಿಂದ ಜಾರಿಗೆ ಬಂದಿದೆ. ಸಿಬ್ಬಂದಿ ವ್ಯವಸ್ಥೆ ಚುನಾವಣಾ ಕಾರ್ಯಕ್ಕೆ ಸಿಬ್ಬಂದಿಯನ್ನು ನಿಯೋಜಿಸ ಲಾಗುವದು. ಇದರಲ್ಲಿ  ಮತಗಟ್ಟೆಯ ನಿಗಾ ಅಧಿಕಾರಿ, ಮತಗಟ್ಟೆ ಅಧ್ಯಕ್ಷಾಧಿಕಾರಿ, ಸಹಾಯಕ ಅಧ್ಯಕ್ಷಾಧಿಕಾರಿ ಹಾಗೂ  ಪೋಲಿಂಗ್ ಆಫೀಸರ್ ಸೇರಿದಂತೆ ಒಟ್ಟು ಸಿಬ್ಬಂದಿ ಕರ್ತವ್ಯನಿತರಾಗಿರಲಿದ್ದಾರೆ.

ಜಿಲ್ಲಾ ಎಸ್ಪಿ ಪ್ರಕಾಶ ನಿಕ್ಕಂ ಮಾತನಾಡಿ, ಶಸ್ತ್ರಾಸ್ತ್ರಗಳನ್ನು ಹೊಂದಿರುವ ವ್ಯಕ್ತಿಗಳು ಅವುಗಳನ್ನು ಪೊಲೀಸ್ ಠಾಣೆಗೆ ಒಪ್ಪಿಸುವಂತೆ ಸೂಚಿಸಲಾಗಿದೆ. ಇನ್ನು ಜಿಲ್ಲೆಯಲ್ಲಿ 1,200 ರೌಡಿಶೀಟರ್ ಗಳಿದ್ದು, ಅವರಿಂದ ಚುನಾವಣೆಯಲ್ಲಿ ಅಹಿತಕರ ಘಟನೆ ನಡೆಸದಂತೆ ಮಚ್ಚಳಿಕೆ ಬರೆಸಿಕೊಳ್ಳಲಾಗುವುದು ಎಂದು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News