ಹನೂರು: ಬೆಟ್ಟಳ್ಳಿ ಮಾರಮ್ಮನ ಜಾತ್ರಾ ಮಹೋತ್ಸವಕ್ಕೆ ಚಾಲನೆ

Update: 2019-03-12 18:55 GMT

ಹನೂರು,ಮಾ.12: ಪಟ್ಟಣದ ಇತಿಹಾಸ ಪ್ರಸಿದ್ದ ಗ್ರಾಮ ದೇವತೆ ಶ್ರೀ ಬೆಟ್ಟಳ್ಳಿ ಮಾರಮ್ಮನ ಜಾತ್ರಾ ಮಹೋತ್ಸವಕ್ಕೆ ಮಂಗಳವಾರ ತಮಟೆ ಬಾರಿಸುವ ಮೂಲಕ ಚಾಲನೆ ನೀಡಲಾಯಿತು.

ಹನೂರು ತಾಲೂಕು ಕೇಂದ್ರ ಸ್ಥಾನದಲ್ಲಿರುವ ಬೆಟ್ಟಳ್ಳಿ ಮಾರಮ್ಮ ದೇವಸ್ಥಾನವು ಸುಮಾರು 230 ವರ್ಷದ ಇತಿಹಾಸ ಹೊಂದಿದ್ದು, ಹಿಂದಿನಿಂದಲೂ ಕೋಮು ಸೌಹರ್ದತೆಯ ಹಾಗೂ ಸಾಮರಸ್ಯತೆಯ ಸಂಕೇತವಾಗಿ ಈ ಜಾತ್ರಾ ಮಹೋತ್ಸವವು ನಡೆದುಕೊಂಡು ಬಂದಿದೆ. ದೇಗುಲದಲ್ಲಿ ಪ್ರತಿ ನಿತ್ಯ ಪೂಜೆ ಪುನಸ್ಕಾರಗಳು ನಡೆದುಕೊಂಡು ಬರುತ್ತಿದೆ. 

ನಾಲ್ಕು ದಿನ ನಡೆಯುವ ಜಾತ್ರೆ: ಜಾತ್ರೆಯು ಮಾ.25 ಸೋಮವಾರದಂದು ಜಾಗರ(ಪಚ್ಚೆ ಪೈರು)ಕಾರ್ಯಕ್ರಮದಿಂದ ಪ್ರಾರಂಭವಾಗಿ ಮಾ.26 ರ ಮಂಗಳವಾರ ತಂಪುಜ್ಯೋತಿ, ಬುಧವಾರ ಭಕ್ತರಿಂದ ಸಣ್ಣ ಮತ್ತು ದೊಡ್ಡ ಬಾಯಿ ಬೀಗ ಕಾರ್ಯಕ್ರಮ, ಗುರುವಾರ ಬೆಳಗಿನ ಜಾವ ಸೂರ್ಯ ಉದಯದ ಸಮಯದಲ್ಲಿ ಅಗ್ನಿ ಎತ್ತಿ ಸೂರ್ಯದೇವನಿಗೆ ನಮಸ್ಕಾರ ಮತ್ತು ಶುಕ್ರವಾರ ರಾತ್ರಿ ಆರ್‍ಎಸ್ ದೂಡ್ಡಿ ಕೆರೆಯಲ್ಲಿ ತೆಪೋತ್ಸವದ ಮೂಲಕ ಜಾತ್ರೆ ಮುಕ್ತಾಯಗೊಳ್ಳಲಿದೆ ಎಂದು ಸಭೆಯ ಬಳಿಕ ಸುದ್ದಿಗಾರರಿಗೆ ಮುಖಂಡರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News