ನನ್ನನ್ನು 'ಸರ್' ಎನ್ನುವ ಬದಲು 'ರಾಹುಲ್' ಎಂದು ಕರೆಯುವಿರಾ? : ವಿದ್ಯಾರ್ಥಿನಿಗೆ ರಾಹುಲ್ ಮನವಿ

Update: 2019-03-14 12:17 GMT

ಚೆನ್ನೈ, ಮಾ.14: "ಸರ್ ಬದಲಿಗೆ ನನ್ನನ್ನು ರಾಹುಲ್ ಅಂತ ಕರೆಯಬಹುದೆ? ರಾಹುಲ್ ಎಂದು ಕರೆದರೆ ನನಗೆ ಹಿತವಾಗುತ್ತದೆ" ಚೆನ್ನೈನ ಕಾಲೇಜು ವಿದ್ಯಾರ್ಥಿಯನಿಯರಲ್ಲಿ ಹೀಗೆಂದವರು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ.

ಚೆನ್ನೈನ ಸ್ಟೆಲ್ಲಾ ಮ್ಯಾರಿಸ್ ಕಾಲೇಜಿನಲ್ಲಿ ವಿದ್ಯಾರ್ಥಿನಿಯರೊಂದಿಗೆ ಬುಧವಾರ ಸಂವಾದ ನಡೆಸಿದ ರಾಹುಲ್ ಗಾಂಧಿ ವಿದ್ಯಾರ್ಥಿನಿಯರ ಪ್ರಶ್ನೆಗಳಿಗೆ ಉತ್ತರಿಸಿದರು. 

ಸಂವಾದ ವೇಳೆ ಹಾಝ್ರ ಎಂಬ ವಿದ್ಯಾರ್ಥಿನಿ  'ರಾಹುಲ್ ಸರ್' ಎಂದು ಸಂಬೋಧಿಸಿ ಪ್ರಶ್ನೆ ಕೇಳಲು ಮುಂದಾಗುತ್ತಿದ್ದಂತೆ “ನನ್ನನ್ನು ಸರ್ ಎಂದು ಕರೆಯಬೇಡಿ ರಾಹುಲ್ ಅಂತ ಕರೆಯಿರಿ. ಹೀಗೆಂದರೆ ನನಗೆ ಹಿತವಾಗುತ್ತದೆ" ಎಂದರು.

ಫೈನ್ ಆರ್ಟ್ಸ್ ವಿದ್ಯಾರ್ಥಿನಿ ಹಾಝ್ರ ಬಳಿಕ ಪ್ರಶ್ನೆಯನ್ನು ಮುಂದುವರಿಸಿ “ಟಾಟಾ ಸಂಶೋಧನಾ ಸಂಸ್ಥೆ ಹಣದ ಕೊರತೆ ಎದುರಿಸುತ್ತಿದೆ. ಇದಕ್ಕೆ ನಾವೇನು ಮಾಡಬಹುದು?” ಎಂದು ಪ್ರಶ್ನಿಸಿದಳು. ಭಾರತದಲ್ಲಿ ಶಿಕ್ಷಣಕ್ಕೆ ಅತ್ಯಂತ ಕಡಿಮೆ ಖರ್ಚು ಮಾಡುತ್ತೇವೆ. ಅದನ್ನು ಶೇಕಡಾ 6ಕ್ಕೆ ಹೆಚ್ಚಿಸಬೇಕು. ಶಿಕ್ಷಣದಲ್ಲಿ ಸ್ವತಂತ್ರತೆ ಬರಬೇಕು. ಸ್ಪರ್ಧೆಯೊಡ್ಡುವ ರೀತಿಯಲ್ಲಿ ಶಿಕ್ಷಣ ಸಂಸ್ಥೆಗಳು ಇರಬೇಕು ’’ ಎಂದು ಅಭಿಪ್ರಾಯಪಟ್ಟರು.
ಮಹಿಳಾ ಸಬಲೀಕರಣದ ಬಗ್ಗೆ ವಿದ್ಯಾರ್ಥಿನಿಯ ಪ್ರಶ್ನೆಗೆ ಉತ್ತರಿಸಿದ ರಾಹುಲ್ “2019ರಲ್ಲಿ ನಾವು ಮಹಿಳಾ ಮೀಸಲಾತಿ ವಿಧೇಯಕವನ್ನು ಮಂಡಿಸುತ್ತೇವೆ. ಉದ್ಯೋಗ ರಂಗದಲ್ಲಿ ಶೇ 33ರಷ್ಟು ಮೀಸಲಾತಿಯನ್ನು ಪಡೆಯಲು ಇದರಿಂದ ಸಾಧ್ಯವಾಗುತ್ತದೆ’’ ಎಂದರು.

ನಿಮ್ಮ ತಾಯಿ ಸೋನಿಯಾ ಗಾಂಧಿಯಿಂದ ನೀವು ಏನು ಕಲಿತಿದ್ದೀರಿ? ಎಂಬ ಪ್ರಶ್ನೆಗೆ "ಅವರು ನನಗೆ ಪ್ರೀತಿ ಮತ್ತು ಮಾನವೀಯತೆಯನ್ನು ಕಲಿಸಿದರು. ಇತರರನ್ನು ಹೇಗೆ ಗೌರವಿಸಬೇಕೆಂದು ನನಗೆ ಕಲಿಸಿದರು ಎಂದು ಮಾಜಿ ಕಾಂಗ್ರೆಸ್ ಅಧ್ಯಕ್ಷೆ ಮತ್ತು ಯುಪಿಎ ಅಧ್ಯಕ್ಷರ ಬಗ್ಗೆ ಹೇಳಿದರು.

ಸಾಮಾಜಿಕ ಜಾಲತಾಣಗಳಲ್ಲಿ ಸಂವಾದದ ವೀಡಿಯೊ ವೈರಲ್ ಆಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News