ದಾಖಲೆಗಳಿಲ್ಲದೆ ಸಾಗಿಸುತ್ತಿದ್ದ 5 ಲಕ್ಷ ರೂ. ಜಪ್ತಿ

Update: 2019-03-14 12:41 GMT

ದಾವಣಗೆರೆ,ಮಾ.14: ದಾಖಲೆ ಇಲ್ಲದ 5 ಲಕ್ಷ ರೂ.ಗಳನ್ನು ಕಾರಿನಲ್ಲಿ ಸಾಗಿಸುತ್ತಿದ್ದಾಗ ಹರಿಹರ ತಾಲೂಕಿನ ಹಲಸಬಾಳು ಚೆಕ್ ಪೋಸ್ಟ್ ಬಳಿ ಪತ್ತೆ ಮಾಡಿ, ಅಧಿಕಾರಿಗಳು ತಮ್ಮ ವಶಕ್ಕೆ ಪಡೆದಿದ್ದಾರೆ.

ಹರಿಹರ ತಾಲೂಕಿನ ಹಲಸಬಾಳು ಚೆಕ್ ಪೋಸ್ಟ್ ಬಳಿ ಅಧಿಕಾರಿಗಳು ವಾಹನ ತಪಾಸಣೆ ನಡೆಸುತ್ತಿದ್ದಾಗ ಬೆಂಗಳೂರು ಮೂಲದ ಕೆಎ 01 ಎಂಎನ್ 5729 ಸಂಖ್ಯೆಯ ಕಾರಿನಲ್ಲಿ 5 ಲಕ್ಷ ರೂ. ಪತ್ತೆಯಾಗಿವೆ. ಕಾರಿನಲ್ಲಿದ್ದ ವ್ಯಕ್ತಿಗಳು ಹಣ ಹೊಂದಿರುವ ಬಗ್ಗೆ, ಅದನ್ನು ಸಾಗಿಸುತ್ತಿದ್ದ ಬಗ್ಗೆ ಯಾವುದೇ ದಾಖಲೆಗಳನ್ನು ಹಾಜರುಪಡಿಸದ ಹಿನ್ನೆಲೆಯಲ್ಲಿ ನಗದು ವಶಕ್ಕೆ ಪಡೆಯಲಾಗಿದೆ. ನಂತರ ಹಣವನ್ನು ಖಜಾನೆಯ ವಶಕ್ಕೆ ಒಪ್ಪಿಸಲಾಗಿದೆ ಎಂದು ಹರಿಹರ ತಹಸೀಲ್ದಾರ್ ಯು. ನಾಗರಾಜ ತಿಳಿಸಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News