ಹಿಂದು ಮಹಾಸಾಗರದಲ್ಲಿ ಚೀನಾದ ಹೆಚ್ಚುತ್ತಿರುವ ಉಪಸ್ಥಿತಿ ಭಾರತಕ್ಕೆ ಸವಾಲು: ನೌಕಾಪಡೆ ಮುಖ್ಯಸ್ಥ

Update: 2019-03-14 14:31 GMT

ಲಂಡನ್,ಮಾ.14: ಹಿಂದು ಮಹಾಸಾಗರದ ಉತ್ತರ ಭಾಗದಲ್ಲಿ ಚೀನಾದ ಹೆಚ್ಚುತ್ತಿರುವ ಉಪಸ್ಥಿತಿ ಭಾರತಕ್ಕೆ ಸಾವಲಾಗಿದೆ. ಆದರೆ ಭಾರತ ಸರಕಾರ ಈ ಪ್ರದೇಶದಲ್ಲಿ ಚೀನಾದ ಹಡಗುಗಳು ಮತ್ತು ಜಲಾಂತರ್ಗಮಿಗಳ ನಿಯೋಜನೆಯ ಮೇಲೆ ಸೂಕ್ಷ್ಮ ಕಣ್ಣಿಟ್ಟಿದೆ ಎಂದು ನೌಕಾಪಡೆ ಮುಖ್ಯಸ್ಥ ಅಡ್ಮಿರಲ್ ಸುನಿಲ್ ಲಾಂಬಾ ತಿಳಿಸಿದ್ದಾರೆ. ನಾಲ್ಕು ದಿನಗಳ ಬ್ರಿಟನ್ ಭೇಟಿಯಲ್ಲಿರುವ ಲಾಂಬಾ, ಹಡಗು ನಿರ್ಮಾಣದಲ್ಲಿ ಚೀನಾದಷ್ಟು ಹೆಚ್ಚು ಹೂಡಿಕೆ ಮಾಡಿದ ಮತ್ತೊಂದು ರಾಷ್ಟ್ರವಿಲ್ಲ ಎಂದು ಅಭಿಪ್ರಾಯಿಸಿದ್ದಾರೆ.

ಹಿಂದು ಮಹಾಸಾಗರದಲ್ಲಿ ಜಿಬೌತಿಯಲ್ಲಿ ಚೀನಾ ಈಗಾಗಲೇ ಸಾರಿಗೆ ನೆಲೆಯನ್ನು ಸ್ಥಾಪಿಸಿದೆ. ಜೊತೆಗೆ ಶ್ರೀಲಂಕ ದ ಹಂಬಂತೋಟ ಬಂದರನ್ನು 99 ವರ್ಷಗಳ ಕಾಲ ಲೀಸ್‌ಗೆ ಸ್ವಾಧೀನಪಡಿಸಿಕೊಂಡಿದೆ. ಇದು ಭಾರತದ ಪಾಲಿಗೆ ಆತಂಕದ ವಿಷಯವಾಗಿದೆ ಎಂದು ಲಾಂಬಾ ತಿಳಿಸಿದ್ದಾರೆ. ಪೂರ್ವ ಚೀನ ಸಮುದ್ರದಲ್ಲಿ ಚೀನಾ ಜಪಾನ್‌ನೊಂದಿಗೆ ಜಲವಿವಾದವನ್ನು ಹೊಂದಿದೆ. ಈ ಭಾಗದಲ್ಲಿ ವಿಯೇಟ್ನಂ, ಫಿಲಿಪಿನ್ಸ್, ಮಲೇಶ್ಯಾ, ಬ್ರುನೈ ಹಾಗೂ ತೈವಾನ್ ಕೂಡಾ ಪಾಲುದಾರ ರಾಷ್ಟ್ರಗಳಾಗಿವೆ ಎಂದು ಲಾಂಬಾ ತಿಳಿಸಿದ್ದಾರೆ.

ಹಿಂದು ಮಹಾಸಾಗರದಲ್ಲಿ ಚೀನಾದ ಆರರಿಂದ ಎಂಟು ನೌಕಾ ಹಡಗುಗಳ ಮತ್ತು ಜಲಾಂತರ್ಗಮಿಗಳು ಹಾಜರಿರುವುದನ್ನು ಲಾಂಬಾ ಬೆಟ್ಟು ಮಾಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News