ಬಾಂಗ್ಲಾದೇಶ-ನ್ಯೂಝಿಲೆಂಡ್ 3ನೇ ಟೆಸ್ಟ್ ಕ್ರಿಕೆಟ್ ಪಂದ್ಯ ರದ್ದು

Update: 2019-03-15 05:25 GMT

 ಕ್ರೈಸ್ಟ್‌ಚರ್ಚ್, ಮಾ.15: ಕ್ರೈಸ್ಟ್‌ಚರ್ಚ್‌ನ ಮಸೀದಿಯೊಂದರಲ್ಲಿ ಬಂದೂಕುಧಾರಿಯೊಬ್ಬ ನಡೆಸಿದ ಗುಂಡಿನ ದಾಳಿಯಲ್ಲಿ ಹಲವು ಮಂದಿ ಸಾವನ್ನಪ್ಪಿರುವ ಹಿನ್ನೆಲೆಯಲ್ಲಿ ಶನಿವಾರ ಹಾಗ್ಲೆ ಓವಲ್‌ನಲ್ಲಿ ಆತಿಥೇಯ ನ್ಯೂಝಿಲೆಂಡ್ ಹಾಗೂ ಬಾಂಗ್ಲಾದೇಶ ಮಧ್ಯೆ ನಡೆಯಬೇಕಾಗಿದ್ದ ಮೂರನೇ ಟೆಸ್ಟ್ ಪಂದ್ಯವನ್ನು ರದ್ದುಪಡಿಸಲಾಗಿದೆ.

3ನೇ ಟೆಸ್ಟ್ ಪಂದ್ಯವನ್ನು ರದ್ದುಪಡಿಸಲಾಗಿದೆ ಎಂದು ನ್ಯೂಝಿಲೆಂಡ್ ಕ್ರಿಕೆಟ್ ಮುಖ್ಯಸ್ಥ ಡೇವಿಡ್ ವೈಟ್ ತಿಳಿಸಿದ್ದಾರೆ.

 ‘‘ಕ್ರೈಸ್ಟ್‌ಚರ್ಚ್‌ನಲ್ಲಿ ನಡೆದ ಘಟನೆಯಲ್ಲಿ ಸಂತ್ರಸ್ತರಾದ ಕುಟುಂಬದವರು ಹಾಗೂ ಸ್ನೇಹಿತರಿಗೆ ಹೃದಯಪೂರ್ವಕ ಸಂತಾಪವನ್ನು ಸೂಚಿಸುತ್ತೇವೆ. ನ್ಯೂಝಿಲೆಂಡ್ ಕ್ರಿಕೆಟ್ ಮಂಡಳಿ ಹಾಗೂ ಬಾಂಗ್ಲಾ ಕ್ರಿಕೆಟ್ ಮಂಡಳಿ ಜಂಟಿಯಾಗಿ 3ನೇ ಟೆಸ್ಟ್ ಪಂದ್ಯವನ್ನು ರದ್ದಪಡಿಸಲು ನಿರ್ಧರಿಸಿದೆ. ಎರಡೂ ತಂಡಗಳು ಹಾಗೂ ಸಹಾಯಕ ಸಿಬ್ಬಂದಿ ಸುರಕ್ಷಿತರಾಗಿದ್ದಾರೆ. ನಾವು ಇನ್ನಷ್ಟೇ ಬಾಂಗ್ಲಾದೇಶ ಆಟಗಾರರೊಂದಿಗೆ ಮಾತನಾಡಬೇಕಾಗಿದೆ. ಅವರೆಲ್ಲರೂ ನಮ್ಮ ಸಂಪರ್ಕದಲ್ಲಿದ್ದಾರೆ’’ಎಂದು ವೈಟ್ ತಿಳಿಸಿದ್ದಾರೆ.

"ಗನ್‌ಧಾರಿಯೊಬ್ಬ ಗುಂಡಿನ ಹಾರಾಟ ನಡೆಸಿದ ವೇಳೆ ಬಾಂಗ್ಲಾದೇಶ ಕ್ರಿಕೆಟ್ ತಂಡದ ಸದಸ್ಯರು ಮಸೀದಿಯಲ್ಲಿದ್ದರು. ಘಟನೆಯಿಂದ ತಂಡದ ಆಟಗಾರರು ಆಘಾತಗೊಂಡಿದ್ದು, ಅದೃಷ್ಟವಶಾತ್ ಎರಡೂ ತಂಡಗಳ ಸದಸ್ಯರು ಅಪಾಯದಿಂದ ಪಾರಾಗಿದ್ದಾರೆ. ನಾನು ಘಟನೆಯ ಬಗ್ಗೆ ಐಸಿಸಿಗೆ ಮಾಹಿತಿ ನೀಡಿದ್ದೇನೆ'' ಎಂದು ವೈಟ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News