ಪಶ್ಚಿಮಬಂಗಾಳ ಲೋಕಸಭಾ ಚುನಾವಣೆ: 25 ಅಭ್ಯರ್ಥಿಗಳ ಪಟ್ಟಿ ಬಿಡುಗಡೆಗೊಳಿಸಿದ ಎಡರಂಗ

Update: 2019-03-16 04:44 GMT

 ಕೋಲ್ಕತಾ, ಮಾ.15: ಸಿಪಿಐ ನೇತೃತ್ವದ ಎಡರಂಗ ಮುಂಬರುವ ಲೋಕಸಭಾ ಚುನಾವಣೆಗೆ ಪಶ್ಚಿಮ ಬಂಗಾಳದಲ್ಲಿ 25 ಕ್ಷೇತ್ರಗಳಿಗೆ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಶುಕ್ರವಾರ ಬಿಡುಗಡೆ ಮಾಡಿದೆ. ಕಾಂಗ್ರೆಸ್‌ಗೆ 17 ಸೀಟುಗಳನ್ನು ಬಿಟ್ಟುಕೊಟ್ಟಿದೆ. ಮೊದಲ ಪಟ್ಟಿಯಲ್ಲಿ ನಾಲ್ವರು ಮಹಿಳೆಯರು ಹಾಗೂ ಐದು ಮುಸ್ಲಿಂ ಅಭ್ಯಥಿಗಳಿಗೆ ಅವಕಾಶ ಕಲ್ಪಿಸಲಾಗಿದೆ.

ಕೋಲ್ಕತಾದ ಮಾಜಿ ಮೇಯರ್ ಹಾಗೂ ಸಿಪಿಐನ ಮುಖಂಡ ಬಿಕಾಸ್ ರಂಜನ್ ಭಟ್ಟಾಚಾರ್ಯರನ್ನು ಜಾದವ್‌ಪುರ್ ಲೋಕಸಭಾ ಕ್ಷೇತ್ರಕ್ಕೆ ನಾಮನಿರ್ದೇಶನ ಮಾಡಿದೆ. ಭಟ್ಟಾಚಾರ್ಯ ಖ್ಯಾತ ಚಿತ್ರನಟಿ, ತೃಣಮೂಲ ಕಾಂಗ್ರೆಸ್(ಟಿಎಂಸಿ)ಅಭ್ಯರ್ಥಿ ಮಿಮಿ ಚಕ್ರವರ್ತಿ ವಿರುದ್ಧ ಸ್ಪರ್ಧಿಸಲಿದ್ದಾರೆ.

ರಾಜ್ಯ ಕಾಂಗ್ರೆಸ್ ನಾಯಕತ್ವ ಪುರುಲಿಯಾ ಹಾಗೂ ಬರಾಸತ್ ಕ್ಷೇತ್ರಗಳಲ್ಲಿ ಸ್ಪರ್ಧಿಸಲು ಆಸಕ್ತಿ ತೋರಿದೆ. ಇದೇ ವೇಳೆ ಮೊದಲ ಬಾರಿ ಎಡರಂಗ, ತನ್ನ ಒಂದು ಕಾಲದ ಬದ್ಧ ಎದುರಾಳಿ ಕಾಂಗ್ರೆಸ್‌ನೊಂದಿಗೆ ಪಶ್ಚಿಮಬಂಗಾಳದ ಲೋಕಸಭಾ ಚುನಾವಣೆಯಲ್ಲಿ ಸೀಟು ಹಂಚಿಕೆ ಮಾಡಿಕೊಂಡಿದೆ.

"ರಾಯ್‌ಗಂಜ್ ಹಾಗೂ ಮುರ್ಷಿದಾಬಾದ್ ಸಹಿತ 25 ಲೋಕಸಭಾ ಸೀಟುಗಳಿಗೆ ಬೇಗನೆ ಅಭ್ಯರ್ಥಿ ಘೋಷಿಸಲಾಗುತ್ತಿದೆ. ಉಳಿದ 17 ಸೀಟುಗಳಲ್ಲಿ ಕೆಲವು ಕಡೆಗಳಲ್ಲಿ ಕಾಂಗ್ರೆಸ್ ಹಾಗೂ ಇನ್ನೂ ಕೆಲವು ಕಡೆ ಎಡರಂಗ ಸ್ಪರ್ಧಿಸಲಿದೆ. ಕೆಲವು ಕ್ಷೇತ್ರಗಳ ಅಭ್ಯರ್ಥಿಗಳಿಗೆ ಕಾಂಗ್ರೆಸ್ ಹಾಗೂ ಎಡರಂಗ ಜಂಟಿಯಾಗಿ ಬೆಂಬಲ ನೀಡಲಿದೆ'' ಎಂದು ಪಶ್ಚಿಮಬಂಗಾಳದ ಎಡರಂಗದ ಅಧ್ಯಕ್ಷ ಬಿಮನ್ ಬೋಸ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News