ಜೆಡಿಎಸ್‌ನ ಹಿರಿಯ ನಾಯಕ ದಾನಿಶ್ ಅಲಿ ಬಿಎಸ್ಪಿಗೆ ಸೇರ್ಪಡೆ

Update: 2019-03-16 07:46 GMT

ಹೊಸದಿಲ್ಲಿ, ಮಾ.16: ಜಾತ್ಯತೀತ ಜನತಾದಳದ ಹಿರಿಯ ನಾಯಕ ದಾನಿಶ್ ಅಲಿ ಶನಿವಾರ ಬಿಎಸ್ಪಿಗೆ ಸೇರ್ಪಡೆಯಾದರು.

 ಜೆಡಿಎಸ್‌ನ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಅಲಿ ಬಹುಜನ ಸಮಾಜವಾದಿ ಪಕ್ಷ(ಬಿಎಸ್ಪಿ)ಅಖಿಲ ಭಾರತ ಪ್ರಧಾನ ಕಾರ್ಯದರ್ಶಿ ಸತೀಶ್ ಮಿಶ್ರಾ ಸಮ್ಮುಖದಲ್ಲಿ ಪಕ್ಷ ಸೇರ್ಪಡೆಯಾದರು. ಮಿಶ್ರಾ ಅವರು ಹೂಗುಚ್ಛ ನೀಡಿ ಅಲಿಯವರನ್ನು ಪಕ್ಷಕ್ಕೆ ಬರಮಾಡಿಕೊಂಡರು.

ಇತ್ತೀಚೆಗಷ್ಟೇ ಕರ್ನಾಟಕದಲ್ಲಿ ಕಾಂಗ್ರೆಸ್-ಜೆಡಿಎಸ್ ಸೀಟು ಹಂಚಿಕೆ ಬಗ್ಗೆ ರಾಹುಲ್ ಗಾಂಧಿ ಜೊತೆ ಮಾತನಾಡಿ ಅಂತಿಮಗೊಳಿಸಿದ್ದ ಅಲಿ ಜೆಡಿಎಸ್‌ನ ಹಿರಿಯ ನಾಯಕನಾಗಿದ್ದರು.

ಅಲಿ ಉತ್ತರಪ್ರದೇಶದಲ್ಲಿ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುವ ಸಾಧ್ಯತೆಯಿದೆ ಎನ್ನಲಾಗಿದೆ. ಯಾವ ಕ್ಷೇತ್ರ ಎಂದು ಇನ್ನೂ ಅಂತಿಮವಾಗಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News