ಅತ್ಯಾಚಾರ: ಬಿಷಪ್ ವಿರುದ್ಧ ಹೇಳಿಕೆ ನೀಡಿದ ಕ್ರೈಸ್ತ ಸನ್ಯಾಸಿಗೆ ಜೀವ ಬೆದರಿಕೆ

Update: 2019-03-17 04:11 GMT

ಕೊಚ್ಚಿನ್, ಮಾ. 17: ಕ್ರೈಸ್ತ ಸನ್ಯಾಸಿನಿಯ ಅತ್ಯಾಚಾರ ಪ್ರಕರಣದಲ್ಲಿ ಬಿಷಪ್ ಫ್ರಾಂಕೊ ವಿರುದ್ಧ ಹೇಳಿಕೆ ನೀಡಿದ ಸಿಸ್ಟರ್ ಲಿಸ್ಸಿ ವಡಕ್ಕೆಲ್, ಮುವತ್ತುಪುಳ ಫ್ರಾನ್ಸಿಸ್ಕನ್ ಕ್ಲಾರಿಸ್ಟ್ ಕಾಂಗ್ರಗೇಶನ್ (ಎಫ್‌ಸಿಸಿ) ಕಾನ್ವೆಂಟ್‌ನಲ್ಲಿ ತಮಗೆ ಜೀವ ಬೆದರಿಕೆ ಇದೆ ಎಂದು ಬಹಿರಂಗಪಡಿಸಿದ್ದಾರೆ. ಈ ಕಾನ್ವೆಂಟ್ ನಲ್ಲಿ ಲಿಸ್ಸಿಯವರನ್ನು ಗೃಹಬಂಧನದಲ್ಲಿಡಲಾಗಿದೆ ಎಂದು ಹೇಳಲಾಗುತ್ತಿದೆ.

"ಕಾಂಗ್ರೆಗೇಶನ್ ಸದಸ್ಯರು ನನಗೆ ಬಹಿಷ್ಕಾರ ಹಾಕಿದ್ದು, ಮೂಲಭೂತ ಅಗತ್ಯಗಳನ್ನೂ ಪೂರೈಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ತೀರಾ ಅಗತ್ಯವಾದ ಔಷಧ ಮತ್ತು ಆಹಾರವನ್ನು ಕೂಡಾ ಸಮಯಕ್ಕೆ ಸರಿಯಾಗಿ ನೀಡುತ್ತಿಲ್ಲ. ನನ್ನ ಪ್ರತಿಯೊಂದು ಚಲನ ವಲನಗಳ ಮೇಲೂ ನಿಗಾ ಇಡಲಾಗಿದೆ" ಎಂದು ಲಿಸ್ಸಿ ವಿವರಿಸಿದ್ದಾರೆ.

"ಬಲವಂತವಾಗಿ ನನ್ನನ್ನು ವಿಜಯವಾಡ ಎಫ್‌ಸಿಸಿ ಕಾನ್ವೆಂಟ್‌ನಲ್ಲಿ ಇಡಲಾಗಿದೆ. ಪೊಲೀಸರಿಗೆ ಯಾವುದೇ ಹೇಳಿಕೆ ನೀಡಲು ಅವಕಾಶ ನೀಡುತ್ತಿಲ್ಲ. ಪ್ರಕರಣವನ್ನು ಮುಚ್ಚಿಹಾಕುವ ದೃಷ್ಟಿಯಿಂದ, ಮತ್ತೆ ಯಾವುದೇ ಹೇಳಿಕೆಗಳನ್ನು ನೀಡದಂತೆ ಸಹೋದ್ಯೋಗಿಗಳು ನಿರಂತರ ಕಿರುಕುಳ ನೀಡುತ್ತಿದ್ದಾರೆ" ಎಂದು ಆಪಾದಿಸಿದ್ದಾರೆ.

ಈ ಸಂಬಂಧ ಸೇವ್ ಅವರ್ ಸಿಸ್ಟರ್ ಕ್ರಿಯಾ ಮಂಡಳಿ ಮತ್ತು ಲಿಸ್ಸಿ ಅವರ ಸಹೋದರ ನೀಡಿದ ದೂರಿನ ಆಧಾರದಲ್ಲಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ಲಿಸ್ಸಿ ಬಿಷಪ್ ಫ್ರಾಂಕೊ ವಿರುದ್ಧ ಪೊಲೀಸರಿಗೆ ಹೇಳಿಕೆ ನೀಡಿದ ಬಳಿಕ ವಿಜಯವಾಡಕ್ಕೆ ವರ್ಗಾವಣೆ ಆದೇಶ ನೀಡಲಾಯಿತು ಎಂದೂ ಆಪಾದಿಸಲಾಗಿದೆ. ಆದರೆ ಪ್ರಾಂತೀಯ ಸುಪೀರಿಯರ್ ಸಿಸ್ಟರ್ ಅಲ್ಫೋನ್ಸಾ ಹೇಳುವಂತೆ ಸಿಸ್ಟರ್ ಲಿಸ್ಸಿ ಕೇರಳ ಕಾನ್ವೆಂಟ್‌ನಲ್ಲಿ 14 ವರ್ಷಗಳಿಂದ ಅಕ್ರಮವಾಗಿ ವಾಸವಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News