ಲೋಕಸಭಾ ಚುನಾವಣೆ:ರಾಜ್ಯ ಬಿಜೆಪಿಯ ಸಂಭಾವ್ಯ ಅಭ್ಯರ್ಥಿಗಳ ಪಟ್ಟಿ

Update: 2019-03-17 14:31 GMT

ಬೆಂಗಳೂರು,ಮಾ.17: ಬಿಜೆಪಿ ಕೋರ್ ಕಮಿಟಿ ಸಭೆಯಲ್ಲಿ ಚುನಾವಣಾ ನಿರ್ವಹಣಾ ಸಮಿತಿ ಮತ್ತು ರಾಜ್ಯದ 28 ಕ್ಷೇತ್ರಗಳ ಆಕಾಂಕ್ಷಿಗಳ ಬಗ್ಗೆ ಚರ್ಚಿಸಿದ್ದು, ಅಂತಿಮ ಪಟ್ಟಿ ಸಿದ್ದಪಡಿಸಲಾಗಿದೆ. ಇಂದು ರಾತ್ರಿ ಅಥವಾ ನಾಳೆ ಬೆಳಗ್ಗೆ ಕೇಂದ್ರ ಚುನಾವಣಾ ಸಮಿತಿ ಸಭೆಯಲ್ಲಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರ ಬಳಿ ಚರ್ಚಿಸಿದ ಬಳಿಕ ಅಭ್ಯರ್ಥಿಗಳ ಪಟ್ಟಿ ಪ್ರಕಟಿಸಲಾಗುವುದು ಎಂದು ತಿಳಿಸಲಾಗಿದೆ.

ಸಂಭಾವ್ಯ ಅಭ್ಯರ್ಥಿಗಳ ಪಟ್ಟಿ: ಕೋಲಾರ-ಡಿ.ಎಸ್.ವೀರಯ್ಯ, ಚಿಕ್ಕಬಳ್ಳಾಪುರ -ಬಿ.ಎನ್.ಬಚ್ಚೇಗೌಡ, ಬೆಂ.ದಕ್ಷಿಣ-ತೇಜಸ್ವಿನಿ ಅನಂತಕುಮಾರ್, ಬೆಂ.ಕೇಂದ್ರ- ಪಿ.ಸಿ.ಮೋಹನ್, ಬೆಂ.ಉತ್ತರ-ಸದಾನಂದ ಗೌಡ/ಎಚ್.ಎಂ.ಚಂದ್ರಶೇಖರ್, ಬೆಂ. ಗ್ರಾಮಾಂತರ-ಸಿ.ಪಿ.ಯೋಗೇಶ್ವರ್/ರುದ್ರೇಶ್.
ಚಾಮರಾಜನಗರ-ವಿ.ಶ್ರೀನಿವಾಸ ಪ್ರಸಾದ್, ಮೈಸೂರು-ಪ್ರತಾಪ್ ಸಿಂಹ, ತುಮಕೂರು-ಜಿ.ಎಸ್.ಬಸವರಾಜು, ಚಿತ್ರದುರ್ಗ -ಎ.ನಾರಾಯಣಸ್ವಾಮಿ/ ಮಾನಪ್ಪ ವಜ್ಜಲ್, ದಕ್ಷಿಣ ಕನ್ನಡ-ನಳೀನ್ ಕುಮಾರ್ ಕಟೀಲ್, ಹಾಸನ- ಎ.ಮಂಜು, ಉಡುಪಿ-ಚಿಕ್ಕಮಗಳೂರು-ಶೋಭಾ ಕರಂದ್ಲಾಜೆ, ಶಿವಮೊಗ್ಗ-ಬಿ.ವೈ. ರಾಘವೇಂದ್ರ.
ದಾವಣಗೆರೆ-ಜಿ.ಎಂ.ಸಿದ್ದೇಶ್ವರ್, ಉತ್ತರ ಕನ್ನಡ-ಅನಂತ್ ಕುಮಾರ್ ಹೆಗ್ಡೆ, ಧಾರವಾಡ-ಪ್ರಹ್ಲಾದ್ ಜೋಶಿ, ಹಾವೇರಿ-ಶಿವಕುಮಾರ್ ಉದಾಸಿ, ಬಳ್ಳಾರಿ -ದೇವೆಂದ್ರಪ್ಪ/ವೆಂಕಟೇಶ್ ಪ್ರಸಾದ್, ಕೊಪ್ಪಳ-ಸಂಗಣ್ಣ ಕರಡಿ, ಬೀದರ್-ಭಗವತ್ ಖೂಬಾ, ರಾಯಚೂರು-ತಿಪ್ಪರಾಜು ಹವಾಲ್ದಾರ್/ಅಮರೇಶ್ ನಾಯಕ್/ ಫಕೀರಪ್ಪ, ಕಲಬುರ್ಗಿ-ಡಾ.ಉಮೇಶ್ ಜಾಧವ್.
ವಿಜಯಪುರ-ರಮೇಶ್ ಜಿಗಜಿಣಗಿ, ಬಾಗಲಕೋಟೆ-ಪಿ.ಸಿ.ಗದ್ದಿಗೌಡರ್, ಬೆಳಗಾವಿ-ಸುರೇಶ್ ಅಂಗಡಿ, ಚಿಕ್ಕೋಡಿ-ಪ್ರಭಾಕರ್ ಕೋರೆ/ರಮೇಶ್ ಕತಿ ಅವರ ಹೆಸರನ್ನು ಬಹುತೇಕ ಅಂತಿಮಗೊಳಿಸಿದ್ದು, ಒಂದೆರಡು ಕ್ಷೇತ್ರಗಳಲ್ಲಿ ಆಕಾಂಕ್ಷಿಗಳು ಹೆಚ್ಚಿದ್ದು, ಕೇಂದ್ರ ಚುನಾವಣಾ ಸಮಿತಿ ಪಟ್ಟಿ ಅಂತಿಮಗೊಳಿಸಲಿದೆ ಎಂದು ಗೊತ್ತಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News