ಹನೂರು ಸಮೀಪದ ಚಿಂಚಹಳ್ಳಿಯಲ್ಲಿ ಗೂಡ್ಸ್ ಆಟೋ ಪಲ್ಟಿ; ಹಲವು ಮಂದಿಗೆ ಗಾಯ

Update: 2019-03-18 04:33 GMT

ಹನೂರು : ಹನೂರು ಪಟ್ಟಣಕ್ಕೆ ಗೂಡ್ಸ್ ಆಟೋದಲ್ಲಿ ಸುಮಾರು 30ಕ್ಕೂ ಹೆಚ್ಚು ಮಂದಿ ಮದುವೆ ಕಾರ್ಯಕ್ರಮವನ್ನು ಮುಗಿಸಿ ನಂತರ ಅದೇ ಆಟೋದಲ್ಲಿ ಸ್ವಗ್ರಾಮಕ್ಕೆ ಹಿಂತಿರುಗುತ್ತಿದ್ದ ವೇಳೆ ಚಿಂಚಳ್ಳಿ ಗ್ರಾಮದ ಕಾಮಾನು ಗೇಟ್ ಬಳಿ ಅಪಘಾತಕ್ಕೀಡಾದ ಘಟನೆ ರವಿವಾರ ರಾತ್ರಿ ನಡೆದಿದೆ.

ಅಪಘಾತದಿಂದ ಸುಮಾರು 15 ಮಂದಿ ಗಾಯಗೊಂಡಿದ್ದಾರೆ. ಅಲ್ಲದೆ ಆಟೋದಲ್ಲಿದ್ದ ಮಕ್ಕಳೂ ಗಾಯಗೊಂಡಿದ್ದಾರೆ.

ಮಾಹಿತಿ ಅರಿತ ತಕ್ಷಣ ಸ್ಥಳಕ್ಕೆ ಆಗಮಿಸಿದ ಪೊಲೀಸರು ಗಾಯಾಳುಗಳನ್ನು ಕಾಮಗೆರೆ, ಕೊಳ್ಳೇಗಾಲ ಹಾಗು  ಮೈಸೂರಿನ ಆಸ್ಪತ್ರೆಗೆ ದಾಖಲಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News