ನೆದರ್‌ಲ್ಯಾಂಡ್ಸ್: ರೈಲಿನಲ್ಲಿ ಗುಂಡು ಹಾರಾಟ; ಒಂದು ಸಾವು

Update: 2019-03-18 17:19 GMT

ಆ್ಯಮ್‌ಸ್ಟರ್‌ಡ್ಯಾಮ್ (ನೆದರ್‌ಲ್ಯಾಂಡ್ಸ್), ಮಾ. 18: ನೆದರ್‌ಲ್ಯಾಂಡ್ಸ್‌ನ ಮಧ್ಯಭಾಗದ ನಗರ ಅಟ್ರೆಕ್ಟ್‌ನಲ್ಲಿ ರೈಲು ಟ್ರಾಮ್ (ಬೋಗಿ) ಒಂದರಲ್ಲಿ ಸೋಮವಾರ ನಡೆದ ಗುಂಡು ಹಾರಾಟದಲ್ಲಿ ಓರ್ವ ವ್ಯಕ್ತಿ ಮೃತಪಟ್ಟಿದ್ದಾರೆ ಹಾಗೂ ಹಲವಾರು ಮಂದಿ ಗಾಯಗೊಂಡಿದ್ದಾರೆ. ಇದು ಭಯೋತ್ಪಾದಕ ಘಟನೆಯಾಗಿರಬಹುದು ಎಂಬ ಇಂಗಿತವನ್ನು ಪೊಲೀಸರು ವ್ಯಕ್ತಪಡಿಸಿದ್ದಾರೆ.

ಬಂದೂಕುಧಾರಿಯು ತಪ್ಪಿಸಿಕೊಂಡಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ. ಹಾಗಾಗಿ, ಅಟ್ರೆಕ್ಟ್ ರಾಜ್ಯದಲ್ಲಿ ಭಯೋತ್ಪಾದನೆ ಬೆದರಿಕೆಯ ಮಟ್ಟವನ್ನು ಪೊಲೀಸರು ಗರಿಷ್ಠ ಮಟ್ಟಕ್ಕೆ ಏರಿಸಿದ್ದಾರೆ.

ಶಾಲೆಗಳನ್ನು ಮುಚ್ಚುವಂತೆ ಆದೇಶ ನೀಡಲಾಗಿದೆ. ವಿಮಾನ ನಿಲ್ದಾಣಗಳು ಮತ್ತು ಇತರ ಮಹತ್ವದ ಸ್ಥಳಗಳಲ್ಲಿನ ಭದ್ರತೆಯನ್ನು ಹೆಚ್ಚಿಸಲಾಗಿದೆ. ಮಸೀದಿಗಳಲ್ಲಿನ ಭದ್ರತೆಯನ್ನು ಬಿಗಿಗೊಳಿಸಲಾಗಿದೆ.

‘‘ರೈಲಿನ ಟ್ರಾಮ್ ಒಂದರಲ್ಲಿ ಹಲವಾರು ಸುತ್ತು ಗುಂಡುಗಳನ್ನು ಹಾರಿಸಲಾಗಿದೆ. ಹೆಲಿಕಾಪ್ಟರ್‌ಗಳನ್ನು ನಿಯೋಜಿಸಲಾಗಿದೆ. ಈವರೆಗೆ ಯಾವುದೇ ಬಂಧನವಾಗಿಲ್ಲ’’ ಎಂದು ಪೊಲೀಸ್ ವಕ್ತಾರ ಜೂಸ್ಟ್ ಲ್ಯಾನ್‌ಶಾಗ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News