ತುಂಡಾದ ರಥದ ಹಗ್ಗ: ನಂಜನಗೂಡು ಶ್ರೀಕಂಠೇಶ್ವರ ಸ್ವಾಮಿ ರಥೋತ್ಸವ ವಿಳಂಬ

Update: 2019-03-19 05:47 GMT

ಮೈಸೂರು, ಮಾ.19:  ದಕ್ಷಿಣ ಕಾಶಿ ಎಂದೇ ಪ್ರಸಿದ್ದಿ ಪಡೆದಿರುವ ನಂಜನಗೂಡು ಶ್ರೀ ಶ್ರೀಕಂಠೇಶ್ವರ ಜಾತ್ರಾ ಮಹೋತ್ಸವದ ವೇಳೆ ರಥದ ಹಗ್ಗ ತುಂಡಾಗಿದ್ದರಿಂದ ರಥೋತ್ಸವ ವಿಳಂಬವಾದ ಘಟನೆ ಇಂದು ಬೆಳಗ್ಗೆ ನಡೆದಿದೆ. 

ಇಂದು ಬೆಳಿಗ್ಗೆ 6:45ರಿಂದ 7 ಗಂಟೆಯ ಒಳಗೆ ಜರುಗಬೇಕಿದ್ದ ರಥೋತ್ಸದ ರಥದ ಹಗ್ಗ ತುಂಡಾಗಿದ್ದರಿಂದ ಸುಮಾರು ಎರಡು ಗಂಟೆಗೂ ಅಧಿಕ ಸಮಯ ರಥೋತ್ಸವ ವಿಳಂಬವಾಗಿ ನೆರವೇರಿತು.

ನಂಜನಗೂಡು ದೊಡ್ಡ ಜಾತ್ರೆಗೆ ಜಿಲ್ಲಾಡಳಿತದ ಸೂಚನೆ ಮೇರೆಗೆ ಜಾತ್ರಾ ಮಹೋತ್ಸವ ಪ್ರಾರಭಕ್ಕೂ ಎರಡು-ಮೂರು ತಿಂಗಳ ಮುಂಚೆಯೇ ಮೊಂಜಾಗ್ರತಾ ಕ್ರಮಗಳನ್ನು ವಹಿಸಲಾಗುತ್ತದೆ. ಅಂತಹದರಲ್ಲಿ ರಥೋತ್ಸವದಲ್ಲಿ ಪ್ರಮುಖವಾಗಿರುವ ಹಗ್ಗ ತುಂಡಾಗುವ ಪ್ರಮಾದ ಏಕೆ ಉಂಟಾಯಿತು? ಈ ಬಗ್ಗೆ ದೇವಾಲಯದ ಆಡಳಿತ ಮಂಡಳಿ ಸೂಕ್ತ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿಲ್ಲ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.


ರಥದ ಹಗ್ಗ ತುಂಡಾಗಿದ್ದರಿಂದ ರಥೋತ್ಸವ ಸ್ವಲ್ಪ ವಿಳಂಬವಾಗಿ ನೆರವೇರಿದೆ ಎಂದು ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್ ತಿಳಿಸಿದ್ದಾರೆ.

ಶ್ರೀಶ್ರೀಕಂಠೇಶ್ವರ ಸ್ವಾಮಿ ರಥೋತ್ಸವದ ವಿಳಂಬವಾಗಿರುಬ ಬಗ್ಗೆ ದೂರವಾಣಿ ಮೂಲಕ 'ವಾರ್ತಾಭಾರತಿ'ಯೊಂದಿಗೆ ಮಾತನಾಡಿದ ಜಿಲ್ಲಾಧಿಕಾರಿ, ರಥೋತ್ಸವಕ್ಕೆ ಹಾಕಲಾಗಿದ್ದ ಹಗ್ಗ ತುಂಡಾಗಿತ್ತು. ತಕ್ಷಣ ಬೇರೆ ಹಗ್ಗವನ್ನು ಬಳಸಲಾಯಿತಾದರು ಅದೂ ಸಹ ತುಂಡಾಗಿದ್ದರಿಂದ ಸಮಸ್ಯೆ ಉಂಟಾಗಿತ್ತು. ಹಾಗಾಗಿ ಸಮಯಕ್ಕೆ ಜರುಗಬೇಕಿದ್ದ ರಥೋತ್ಸ ವಿಳಂಬವಾಗಿದೆ. ನಂತರ ಮತ್ತೊಂದು ಹಗ್ಗ ಬಳಸಿ ರಥೋತ್ಸವ ಸುಸೂತ್ರವಾಗಿ ಜರುಗಲು ವ್ಯವಸ್ಥೆ ಮಾಡಲಾಯಿತು ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News