ಕಾಂಗ್ರೆಸನ್ನು ನಿಂದಿಸುವುದನ್ನು ನಿಲ್ಲಿಸಿ, ನಿಮ್ಮ ಸಾಧನೆ ಏನೆಂದು ಹೇಳಿ: ಪ್ರಿಯಾಂಕಾ

Update: 2019-03-19 09:33 GMT

ಭದೋಹಿ(ಉತ್ತರಪ್ರದೇಶ), ಮಾ.19: ಈ ಹಿಂದಿನ ಕಾಂಗ್ರೆಸ್ ನೇತೃತ್ವದ ಸರಕಾರವನ್ನು ನಿಂದಿಸುವುದನ್ನು ನಿಲ್ಲಿಸಿ, ಕಳೆದ ಐದು ವರ್ಷಗಳಲ್ಲಿ ಮೋದಿ ಸರಕಾರ ಏನು ಸಾಧನೆ ಮಾಡಿದೆ ಎನ್ನುವುದರ ಬಗ್ಗೆ ಮಾತನಾಡಿ ಎಂದು ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರದ ವಿರುದ್ಧ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ವಾಗ್ದಾಳಿ ನಡೆಸಿದರು.

‘‘ಕಳೆದ 70 ವರ್ಷಗಳಲ್ಲಿ ಅವರು(ಕಾಂಗ್ರೆಸ್) ಏನು ಮಾಡಿದ್ದಾರೆಂಬ ಬಿಜೆಪಿಗರ ವಾದ ಮುಗಿದು ಹೋಗಿರುವ ವಿಚಾರ. ಇದೀಗ ನೀವು(ಬಿಜೆಪಿ)ಅಧಿಕಾರಕ್ಕೆ ಬಂದ ಬಳಿಕ ಕಳೆದ 5 ವರ್ಷಗಳಲ್ಲಿ ಏನು ಮಾಡಿದ್ದೀರೆಂದು ಹೇಳಬೇಕು’’ ಎಂದು ಪ್ರಿಯಾಂಕಾ ಹೇಳಿದ್ದಾರೆ.

‘‘ಮೋದಿ ಸರಕಾರದಿಂದ ಯಾರೂ ತೃಪ್ತರಾಗಿಲ್ಲ. 2019ರಲ್ಲಿ ಜನರು ಈಗಿನ ಸರಕಾರವನ್ನು ಬದಲಿಸಲು ಬಯಸಿದ್ದಾರೆ. ರೈತರು, ಯುವಕರು, ಉದ್ಯೋಗಸ್ಥರು ಸರಕಾರದ ಬಗ್ಗೆ ಅಸಮಾಧಾನ ಹೊಂದಿದ್ದಾರೆ. ಅವರೆಲ್ಲರೂ ಒಟ್ಟಾಗಿ ಸರಕಾರವನ್ನು ಬದಲಿಸಲಿದ್ದಾರೆ ’’ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News