ಕ್ರಿಕೆಟ್ ಪಂದ್ಯಾವಳಿ: ಹನೂರು ನೇತಾಜಿ ಕ್ರಿಕೆಟರ್ಸ್‌ಗೆ ಪ್ರಶಸ್ತಿ

Update: 2019-03-19 08:30 GMT

ಹನೂರು, ಮಾ.19: ನೇತಾಜಿ ಸುಭಾಶ್ಚಂದ್ರ ಭೋಸ್ ಅವರ 122ನೇ ಜಯಂತೋತ್ಸವದ ಅಂಗವಾಗಿ ಹನೂರಿನ ಮಲೈಮಹದೇಶ್ವರ ಕ್ರೀಡಾಂಗಣದಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಕ್ರಿಕೆಟ್ ಪಂದ್ಯಾವಳಿಯಲ್ಲಿ ನೇತಾಜಿ ಕ್ರಿಕೆಟರ್ಸ್‌ ತಂಡ ಪ್ರಶಸ್ತಿ ಗಳಿಸಿದೆ.
   
ಹನೂರು ಮತ್ತು ಕೂಳ್ಳೇಗಾಲ ತಾಲೂಕು ಮಟ್ಟದ ಈ ಪಂದ್ಯಾವಳಿಯಲ್ಲಿ ಕೂಳ್ಳೇಗಾಲದ ಭೀಮ ವಾರಿಯರ್ಸ್‌, ಯುವ ದೇವಾಂಗ, ಸ್ಪೀಡ್ ಬಾಯ್ಸ್ ಕೂಳ್ಳೇಗಾಲ, ಲಕ್ಕಿ ಬಾಯ್ಸಿ ಕೂಳ್ಳೇಗಾಲ ಮಂಗಲ, ಕಾಮಗೆರೆ, ದೂಡ್ಡಿಂದುವಾಡಿ, ಲೋಕ್ಕನಹಳ್ಳಿ, ಭಗೀರಥ ಕ್ರಿಕೆಟರ್ಸ್‌, ಜೈಭೀಮ್, ಹುತ್ತೂರು, ಚಿಂಚಳ್ಳಿ, ಹನೂರು ಪಟ್ಟಣದ ಬಿಆರ್‌ಎ ತಂಡ, ಬಾಬು ಜಗಜ್ಜೀವನರಾಮ್ ತಂಡ, ನೇತಾಜಿ ಕ್ರಿಕೆಟರ್ಸ್‌ನ 5 ತಂಡಗಳು, ಕೌದಳ್ಳಿ, ದಿನ್ನಳ್ಳಿ ಸಹಿತ ವಿವಿಧ ಗ್ರಾಮಗಳ ತಂಡಗಳು ಭಾಗವಹಿಸಿದ್ದವು. ಫೈನಲ್ ಪಂದ್ಯದಲ್ಲಿ ಹನೂರಿನ ನೇತಾಜಿ ಮತ್ತು ಕೊಳ್ಳೇಗಾಲದ ಲಕ್ಕಿಬಾಯ್ಸಿ ತಂಡ ಪರಸ್ಪರ ಸೆಣಸಿದವು. ಅಂತಿಮವಾಗಿ ಹನೂರು ಪಟ್ಟಣದ ನೇತಾಜಿ ಕ್ರಿಕೆಟರ್ಸ್‌ ವಿಜಯಿಯಾಯಿತು. ಕೂಳ್ಳೇಗಾಲದ ಲಕ್ಕಿ ಬಾಯ್ಸಿ ತಂಡ ರನ್ನರ್ ಅಪ್ ಪ್ರಶಸ್ತಿಗೆ ತೃಪ್ತಿಪಟ್ಟಿತು.

 ಟೂರ್ನಿಯಲ್ಲಿ ಉತ್ತಮ ಬ್ಯಾಟ್ಸ್‌ಮ್ಯಾನ್ ಪ್ರಶಸ್ತಿಗೆ ಕುಮಾರ್ ಪಾತ್ರರಾದರು. ಪ್ರತಿ ಪಂದ್ಯದಲ್ಲೂ ಹನೂರು ತಂಡದ ರಮೇಶ್‌ಮಾಸ್ಟರ್, ರಿಯಾಝ್, ಶಶಿ, ಅಪ್ಪು, ರಿಝ್ವುನ್, ರಫಿ, ಮುತ್ತು, ದಿನೇಶ್, ಶಿವು, ಅಭಿ, ಕೂಳ್ಳೇಗಾಲದ ಸೈಫುಲ್ಲಾ, ಅನೀಸ್, ಅದ್ದು ಉತ್ತಮ ಪ್ರದರ್ಶನ ನೀಡಿದರು.

ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ತಾಪಂ ಸ್ಥಾಯಿ ಸಮಿತಿಯ ಮಾಜಿ ಅಧ್ಯಕ್ಷ ಹಾಗೂ ಕ್ರಿಕೆಟ್ ಆಟಗಾರ ಜಾವೆದ್ ಅಹ್ಮದ್, ಜೆಡಿಎಸ್ ಮುಖಂಡ ಮಂಜುನಾಥ್, ರೋಟರಿ ಅಧ್ಯಕ್ಷ ಗಿರೀಶ್, ಪಪಂ ಮಾಜಿ ಅದ್ಯಕ್ಷ ರಾಜು ಗೌಡ, ಮುಖಂಡರಾದ ಮಂಜೇಶ್, ಮಹೇಶ್, ಮಹದೇಶ್ವರ ಬೋರ್‌ವೆಲ್ ಮಾಲಕ ಆನಂದ್, ಬಾಬು, ಆರಿಫ್, ನಾಗಪ್ಪ, ರಸ್ತೆ ಬದಿ ವ್ಯಾಪಾರಿಗಳ ಸಂಘದ ಅಧ್ಯಕ್ಷ ಸುರೇಶ್, ಒಕ್ಕಲಿಗ ಯುವ ಸಮಿತಿಯ ಅಧ್ಯಕ್ಷ ಸಂತೋಷ್ ಹಾಗೂ ಆಯೋಜಕರಾದ ಸತೀಶ್, ಚೇತನ್, ರವಿ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News