20 ಪಿಯು ಕಾಲೇಜುಗಳು ಸ್ಥಗಿತ: ಪ್ರವೇಶ ಪಡೆಯದಂತೆ ಸೂಚನೆ

Update: 2019-03-19 17:09 GMT

ಧಾರವಾಡ, ಮಾ.19: ಧಾರವಾಡ ಜಿಲ್ಲೆಯ 20 ಖಾಸಗಿ ಪದವಿ ಪೂರ್ವ ಕಾಲೇಜುಗಳ ಆಡಳಿತ ಮಂಡಳಿಯವರು ಇಲಾಖೆಯ ಅನುಮತಿ ಇಲ್ಲದೇ ಕಾಲೇಜಿನ ಶೈಕ್ಷಣಿಕ ಚಟುವಟಿಕೆಗಳನ್ನು ನಿಲ್ಲಿಸಿ ಕಾಲೇಜನ್ನು ಸ್ಥಗಿತಗೊಳಿಸಿದ್ದಾರೆ. ಆದುದರಿಂದ, 2019-20ನೇ ಸಾಲಿನಿಂದ ಈ ಕಾಲೇಜುಗಳಿಗೆ ದಾಖಲಾತಿ ಪಡೆಯಬಾರದು ಎಂದು ಪದವಿ ಪೂರ್ವ ಶಿಕ್ಷಣ ಹಾಗೂ ವೃತ್ತಿ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಎಲ್.ಎಸ್.ಪಾಟೀಲ್ ತಿಳಿಸಿದ್ದಾರೆ. 

ಸ್ಥಗಿತಗೊಂಡಿರುವ ಕಾಲೇಜುಗಳು: ಹುಬ್ಬಳ್ಳಿಯ ಸೇಂಟ್ ಮೈಕೆಲ್ ಪಿಯು ಕಾಲೇಜ್, ರಾಜೀವ್ ನಗರ ವೈಷ್ಣವಿ ಚೇತನ ಪಿಯು ಕಾಲೇಜು, ವಿದ್ಯಾನಗರದ ಸಿದ್ದೇಶ್ವರ ಪಾರ್ಕ್‌ನ ಸೆಂಟ್ ಅಂಥೋನಿ ಪಿಯು ಕಾಲೇಜು, ನವನಗರದ ವಿದ್ಯಾ ಚೈತನ್ಯ ಪಿಯು ಕಾಲೇಜು.

ಕೇಶ್ವಾಪೂರದ ನ್ಯೂ ನಲಂದ ಪಿಯು ಕಾಲೇಜು, ಕೆಎಂಸಿ ಎದುರಿನ ವಿಶ್ವಚೇತನ ಪಿಯು ಕಾಲೇಜು, ಗೋಕುಲ ತಾರಿಹಾಳ ರಸ್ತೆಯ ಶಬ ಪಿಯು ಕಾಲೇಜು, ಉಣಕಲ್ ಕ್ರಾಸ್‌ನ ಮೇಧಾ ಪಿಯು ಕಾಲೇಜು, ಅಂಚಟಗೇರಿ ಶಿವಾಲಯ ನಗರದ ಐಎನ್‌ಎ ರಾಂರಾವ್ ಪಿಯು ಕಾಲೇಜು.

ಗೋಕುಲ್ ರಸ್ತೆಯ ಸಂಸ್ಕೃತಿ ಪಿಯು ಕಾಲೇಜು, ನವನಗರ ರೋಟರಿ ಪಿಯು ಕಾಲೇಜು, ಈಶ್ವರ ನಗರದ ಶ್ರೀ ಮೈತ್ರಿ ಪಿಯು ಕಾಲೇಜು, ಕಲಘಟಗಿ ತಾಲೂಕಿನ ಕಾಡನಕೊಪ್ಪದ ಆಶಾ ಮೆಮೋರಿಯಲ್ ಪಿಯು ಕಾಲೇಜು, ಮಿಶ್ರಿಕೋಟಿಯ ಪರಿವರ್ತನಾ ಎಲೈಟ್ ಪಿಯು ಕಾಲೇಜು.

ಧಾರವಾಡದ ಎನ್‌ಎಚ್-4 ಟೋಲ್‌ಗೇಟ್ ಹತ್ತಿರದ ವೈಷ್ಣವಿ ಚೇತನಾ ಪಿಯು ಕಾಲೇಜು, ಕಲ್ಯಾಣ ನಗರದ ಸಂದೇಶ್ ಎಜುಕೇಶನ್ ಸೊಸೈಟಿ ಪಿಯು ಕಾಲೇಜು, ಹಳಿಯಾಳ ರಸ್ತೆಯ ಶ್ರೀನಗರದ ಎಸ್‌ಕೆಎಸ್ ಪಿಯು ಕಾಲೇಜು, ರೀಗಲ್ ವೃತ್ತದ ಹತ್ತಿರ ಆರ್‌ಜಿಇಎಸ್ ಪಿಯು ಕಾಲೇಜು.

ಬಾರಾಕೊಟ್ರಿ ಹತ್ತಿರದ ಪವನ್ ಪಿಯು ಕಾಲೇಜು, ಸಪ್ತಾಪೂರದ ಶ್ರೀ ಸತ್ಯಸಾಯಿ ಮಹಿಳಾ ಪಿಯು ಕಾಲೇಜುಗಳಿಗೆ ಬರುವ ಶೈಕ್ಷಣಿಕ ವರ್ಷದಲ್ಲಿ ದಾಖಲಾತಿ ಪಡೆಯದಂತೆ ವಿದ್ಯಾರ್ಥಿಗಳು, ಪೋಷಕರು ಹಾಗೂ ಸಾರ್ವಜನಿಕರಿಗೆ ತಿಳಿಸಲಾಗಿದೆ. ಆಡಳಿತ ಮಂಡಳಿಯವರು ಸಕಾಲದಲ್ಲಿ ಪ್ರಸ್ತಾವನೆಯನ್ನು ಸಲ್ಲಿಸದಿದ್ದರೆ ಮಾನ್ಯತೆ ರದ್ದುಗೊಳಿಸಲು ಶಿಫಾರಸ್ಸು ಮಾಡಲಾಗುವುದು ಎಂದು ಪದವಿ ಪೂರ್ವ ಶಿಕ್ಷಣ ಹಾಗೂ ವೃತ್ತಿ ಶಿಕ್ಷಣ ಇಲಾಖೆಯ ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News