ಹನೂರು: ಅಪರಿಚಿತ ವ್ಯಕ್ತಿಯ ಶವ ಪತ್ತೆ; ಕೊಲೆ ಶಂಕೆ

Update: 2019-03-19 18:03 GMT

ಹನೂರು,ಮಾ.19: ತಾಲೂಕಿನ ಮಾರ್ಟಳ್ಳಿಯ ಸಮೀಪದ ನಾಲ್‍ರೋಡ್‍ನ ಗರಿಕೆಕಂಡಿ ಹಳ್ಳದ ಸೇತುವೆಯ ಅಡಿ ಭಾಗದಲ್ಲಿ ಅಪರಿಚಿತ ಶವ ಪತ್ತೆಯಾಗಿದೆ.

ಸಾರ್ವಜನಿಕರು ಮಂಗಳವಾರ ಬೆಳಿಗ್ಗೆ ಅಪರಿಚಿತ ಶವವನ್ನು ಗಮನಿಸಿ ಪೋಲಿಸರಿಗೆ ಮಾಹಿತಿ ನೀಡಿದ್ದು, ರಾಮಾಪುರ ಪೋಲಿಸರು ಸ್ಥಳಕ್ಕಾಗಮಿಸಿ ಪ್ರಕರಣ ದಾಖಲಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ. ಮೇಲ್ನೋಟಕ್ಕೆ ಇದು ಕೊಲೆ ಎಂದು ಶಂಕಿಸಿದ್ದು, ತನಿಖೆಯ ನಂತರವಷ್ಟೇ ಸತ್ಯಾಂಶ ಹೊರಬರಲಿದೆ. 

ಮೃತ ವ್ಯಕ್ತಿ ಎದೆಯ ಭಾಗದಲ್ಲಿ ಲಕ್ಷ್ಮಿ ಮತ್ತು ಜಯಂತಿ ಹಾಗೂ ಕೈಯಲ್ಲಿ ಪಿ.ಎಸ್ ಎಂದು ಬರೆದಿದ್ದು, ಕತ್ತಿಗೆ ಮಣಿ ಧರಿಸಿದ್ದಾನೆ ಎಂದು ಪೋಲಿಸರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News