ಹನೂರು: ಜಿಂಕೆ ಮಾಂಸ ಮಾರುತ್ತಿದ್ದ ವ್ಯಕ್ತಿಯ ಬಂಧನ; ಮೂವರು ಪರಾರಿ

Update: 2019-03-21 11:37 GMT

ಹನೂರು,ಮಾ.21: ನಾಯಿಗಳ ದಾಳಿಗೆ ಸಿಲುಕಿ ತೀವ್ರ ಅಸ್ವಸ್ಥಗೊಂಡಿದ್ದ ಜಿಂಕೆಯನ್ನು ಮಾಂಸ ಮಾಡಿ ಹಂಚುತ್ತಿದ್ದ ವ್ಯಕ್ತಿಯನ್ನು ಅರಣ್ಯ ಇಲಾಖೆ ಅಧಿಕಾರಿಗಳು ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿ ಬಂಧಿಸಿದ ಘಟನೆ ಕೊತ್ತನೂರು ವಲಯ ವ್ಯಾಪ್ತಿಯಲ್ಲಿ ನಡೆದಿದೆ. 

ಸುಂಡ್ರಳ್ಳಿ ಗ್ರಾಮ ನಿವಾಸಿ ಕೆಂಡಪ್ಪ (45) ಬಂಧಿತ ಆರೋಪಿ. ಹನೂರಿನ ಕೊತ್ತನೂರು ಅರಣ್ಯ ವಲಯ ವ್ಯಾಪ್ತಿಯ ಚಿಕ್ಕಲೂರು ಗಸ್ತಿನಲ್ಲಿ ಈ ಘಟನೆ ನಡೆದಿದೆ. ಕೆಂಡಪ್ಪ ಇತರೆ ಮೂರು ಮಂದಿಯ ಜೊತೆ ಜಿಂಕೆಯನ್ನು ಮಾಂಸ ಮಾಡಿ ಹಂಚುತ್ತಿದ್ದಾಗ ಡಿಸಿಎಫ್‍ಒ ರಮೇಶ್‍ರವರ ಮಾರ್ಗದರ್ಶನದಲ್ಲಿ ವಲಯ ಅರಣ್ಯಾಧಿಕಾರಿ ಫರಾ ಮನಿಯರ್, ಪ್ರಭಾರ ವಲಯ ಅರಣ್ಯಾಧಿಕಾರಿ ಬಸವರಾಜ್ ಮತ್ತು ಮಧುರಾಜ್ ಮತ್ತು ಸಿಬ್ಬಂದಿ ದಾಳಿ ನಡೆಸಿದ್ದು, ಕೆಂಡಪ್ಪನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿ ನ್ಯಾಯಾಲಯಕ್ಕೆ ಒಪ್ಪಿಸಿದ್ದಾರೆ.

ಇತರೆ ಮೂವರು ಪರಾರಿಯಾಗಿದ್ದು, ಅರಣ್ಯಾಧಿಕಾರಿಗಳು ಅವರ ಶೋಧಕ್ಕೆ ಬಲೆ ಬೀಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News