ಎಸೆಸೆಲ್ಸಿ ಕನ್ನಡ ಪರೀಕ್ಷೆ: ದಾವಣಗೆರೆಯಲ್ಲಿ 815 ವಿದ್ಯಾರ್ಥಿಗಳು ಗೈರು

Update: 2019-03-21 11:41 GMT

ದಾವಣಗೆರೆ,ಮಾ.21: ಎಸೆಸೆಲ್ಸಿ ಮೊದಲ ದಿನದ ಕನ್ನಡ ಪರೀಕ್ಷೆಯಲ್ಲಿ 815 ವಿದ್ಯಾರ್ಥಿಗಳು ಗೈರಾಗಿದ್ದರು. ಜಿಲ್ಲೆಯ ಎಲ್ಲಾ 92 ಕೇಂದ್ರಗಳಲ್ಲೂ ಪರೀಕ್ಷೆ ಸುಗಮವಾಗಿ ನಡೆದಿದ್ದು, ಯಾವುದೇ ಅಹಿತಕರ ಘಟನೆಗಳಿಗೆ ಅವಕಾಶ ನೀಡದಂತೆ ಕಟ್ಟುನಿಟ್ಟಿನ ಕ್ರಮ ವಹಿಸಲಾಗಿತ್ತು ಎಂದು ಡಿಡಿಪಿಐ ಸಿ.ಆರ್ ಪರಮೇಶ್ವರಪ್ಪ ತಿಳಿಸಿದರು.

ಈ ಬಾರಿ ಪರೀಕ್ಷೆ ನೊಂದಾಯಿಸಿದ್ದ 24,956 ವಿದ್ಯಾರ್ಥಿಗಳಲ್ಲಿ 815 ಮಂದಿ ಗೈರಾಗಿದ್ದು ಉಳಿದಂತೆ 24,141 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದಾರೆ. ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲೂ ಪರೀಕ್ಷೆ ಸುಗಮವಾಗಿ ನಡೆದಿದೆ ಎಂದು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News