ಮಾ.24: ಕೋಡಿಕಲ್ ಅಲ್ ಅಮೀನ್ ಫ್ರೆಂಡ್ಸ್ ವತಿಯಿಂದ ಸಾಮೂಹಿಕ ವಿವಾಹ

Update: 2019-03-23 17:02 GMT

ಮಂಗಳೂರು, ಮಾ.23: ಅಲ್ ಅಮೀನ್ ಫ್ರೆಂಡ್ಸ್ ಕೋಡಿಕಲ್ ಇದರ ವಾರ್ಷಿಕೋತ್ಸವದ ಅಂಗವಾಗಿ 2 ಜೋಡಿಗಳ ಸಾಮೂಹಿಕ ವಿವಾಹ ಕಾರ್ಯಕ್ರಮವು ಮಾ.24ರಂದು ಕೋಡಿಕಲ್‌ನ ಜೆ.ಎಂ.ರೋಡ್‌ನಲ್ಲಿ ನಡೆಯಲಿದೆ.

ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಉಳ್ಳಾಲ ಸೈಯದ್ ಮದನಿ ಕಾಲೇಜಿನ ಪ್ರೊಫೆಸರ್ ಉಸ್ಮಾನುಲ್ ಫೈಝಿ ತೋಡಾರು ನಿಖಾಃ ನೆರವೇರಿಸಲಿದ್ದಾರೆ. ಸಮಾರಂಭದಲ್ಲಿ ಉಲಮಾ ಉಮರಾಗಳು, ಧಾರ್ಮಿಕ ನೇತಾರರು ಭಾಗವಹಿಸಲಿದ್ದಾರೆ ಎಂದು ಅಲ್ ಅಮೀನ್ ಫ್ರೆಂಡ್ಸ್ ಕೋಡಿಕಲ್‌ನ ಅಧ್ಯಕ್ಷರಾದ ಇಮ್ತಿಯಾಝ್, ಹಯಾತುದ್ದೀನ್ ಜುಮಾ ಮಸೀದಿಯ ಅಧ್ಯಕ್ಷ ಅಬ್ದುಲ್ ಖಾದರ್ ಕೋಡಿಕಲ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News