ಯಡಿಯೂರಪ್ಪ ಡೈರಿ ಬಗ್ಗೆ ಲೋಕಪಾಲ್ ತನಿಖೆಯಾಗಲಿ: ಸಿದ್ದರಾಮಯ್ಯ

Update: 2019-03-23 17:10 GMT

ಬೆಂಗಳೂರು, ಮಾ.23: ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ತಮ್ಮ ಹೈಕಮಾಂಡ್‌ಗೆ ಸಾವಿರಾರು ಕೋಟಿ ರೂ.ಕಪ್ಪ ನೀಡಿರುವ ಆರೋಪದ ಕುರಿತು ಲೋಕಪಾಲ್ ತನಿಖೆ ನಡೆಯಬೇಕು ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಆಗ್ರಹಿಸಿದ್ದಾರೆ.

ನಗರದ ಗಾಂಧೀ ಭವನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಡಿಯೂರಪ್ಪ ಹಿರಿಯ ನಾಯಕರು ಸೇರಿದಂತೆ ಹಲವರಿಗೆ 1800 ಕೋಟಿ ರೂ. ನೀಡಿದ್ದಾರೆ. ಅದರ ಸಂಬಂಧ ತನಿಖೆ ನಡೆಯಲಿ ಎಂದು ಸಿದ್ದರಾಮಯ್ಯ ಒತ್ತಾಯಿಸಿದರು.

ಬಿಜೆಪಿ ಹೈಕಮಾಂಡ್‌ಗೆ ಕಪ್ಪನೀಡಿದ ಆರೋಪದ ಬಗ್ಗೆ ಡೈರಿ ಬಿಡುಗಡೆಯಾಗಿದ್ದರೂ ಚೌಕಿದಾರ್ ಪ್ರಧಾನಿ ಮೋದಿ ಮೌನವಾಗಿದ್ದಾರೆ. ಡೈರಿಯಲ್ಲಿ ಹೆಸರಿರುವ ನಾಯಕರು ಯಾರು ತಮ್ಮ ತಪ್ಪನ್ನು ಒಪ್ಪಿಕೊಳ್ಳುವುದಿಲ್ಲ. ಆಪಾದಿತರು ಇಲ್ಲ ಎಂದೇ ಹೇಳುತ್ತಾರೆ. ಹಾಗಾಗಿ ಈ ಕಪ್ಪ ಪ್ರಕರಣವನ್ನು ಲೋಕಪಾಲ್ ತನಿಖೆಗೆ ಒಳಪಡಿಸಬೇಕು ಎಂದು ಅವರು ಹೇಳಿದರು.

ಕಾಂಗ್ರೆಸ್ ಪಕ್ಷ ಬಿಡುಗಡೆ ಮಾಡಿರುವ ಡೈರಿ ನಕಲಿ. ಕಾಂಗ್ರೆಸ್ ನಾಯಕರ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡುತ್ತೇನೆ ಎಂಬ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಹೇಳಿಕೆಗೆ ಪ್ರತಿಕ್ರಿಸಿಯಿಸಿದ ಸಿದ್ಧರಾಮಯ್ಯ, ಮಾನನಷ್ಠ ಮೊಕದ್ದಮೆಗೆ ನಾವ್ಯಾರೂ ಹೆದರುವುದಿಲ್ಲ. ತನಿಖೆಯಾಗಲಿ ಸತ್ಯಾಂಶ ಹೊರ ಬರುತ್ತದೆ ಎಂದು ಸವಾಲು ಹಾಕಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News