ಪ್ರಶ್ನೆ ಪತ್ರಿಕೆ ಸೋರಿಕೆ ಪ್ರತಿಪಾದನೆ ನಿರ್ಲಕ್ಷಿಸಿ: ವಿದ್ಯಾರ್ಥಿಗಳು, ಪಾಲಕರಿಗೆ ಸಿಬಿಎಸ್‌ಇ ಸೂಚನೆ

Update: 2019-03-23 17:36 GMT

ಹೊಸದಿಲ್ಲಿ, ಮಾ. 23: ಇಂಗ್ಲೀಷ್ ಪ್ರಶ್ನೆ ಪತ್ರಿಕೆ ಒದಗಿಸಲಾಗುವುದು ಎಂದು ಪ್ರತಿಪಾದಿಸುವ ವೀಡಿಯೊಗೆ ಅಥವಾ ಪ್ರಶ್ನೆ ಪತ್ರಿಕೆ ನೀಡುತ್ತೇವೆ ಎಂದವರಿಗೆ ಹಣ ನೀಡದಂತೆ ವಿದ್ಯಾರ್ಥಿಗಳು ಹಾಗೂ ಹೆತ್ತವರಿಗೆ ಸಿಬಿಎಸ್‌ಇ ಶುಕ್ರವಾರ ಸಲಹೆ ನೀಡಿದೆ.

ಪರೀಕ್ಷೆಗಳು ಇನ್ನಷ್ಟೇ ನಡೆಯಬೇಕಿರುವ 10 ಹಾಗೂ 12ನೇ ತರಗತಿಯ ವಿಷಯಗಳ ಪ್ರಶ್ನೆ ಪತ್ರಿಕೆಗಳು ಸೋರಿಕೆಯಾಗಿವೆ ಎಂದು ಸುಳ್ಳು ಪ್ರತಿಪಾದಿಸುವ ವಿಡಿಯೋ‌ಗಳನ್ನು ಸಿಬಿಎಸ್‌ಇ ಗುರುತಿಸಿದೆ ಎಂದು ಸಿಬಿಎಸ್‌ಇ ತನ್ನ ಸಲಹೆಯಲ್ಲಿ ತಿಳಿಸಿದೆ. ಮಾರ್ಚ್ 23 ಹಾಗೂ 29ರಂದು ನಡೆಯಲಿರುವ 10ನೇ ತರಗತಿಯ ಇಂಗ್ಲಿಷ್ ಹಾಗೂ ಸಾಮಾಜಿಕ ವಿಜ್ಞಾನ ಪರೀಕ್ಷೆಯ ಹಾಗೂ ಮಾರ್ಚ್ 27ರಂದು ನಡೆಯಲಿರುವ 12ನೇ ತರಗತಿಯ ಅರ್ಥಶಾಸ್ತ್ರ ಪರೀಕ್ಷೆಯ ಪ್ರಶ್ನೆ ಪತ್ರಿಕೆಗಳು ಸೋರಿಕೆಯಾಗಿವೆ ಎಂದು ಪ್ರತಿಪಾದಿಸುವ ಹಲವು ಲಿಂಕ್ ‌ಗಳನ್ನು ಮಂಡಳಿ ಪಟ್ಟಿ ಮಾಡಿದೆ ಎಂದು ಸಲಹೆ ತಿಳಿಸಿದೆ.

 ಪರೀಕ್ಷೆಯ ಪ್ರಶ್ನೆ ಪತ್ರಿಕೆಗಳು ಸೋರಿಕೆಯಾಗಿವೆ ಎಂದು ಪ್ರತಿಪಾದಿಸುವ ವಿವಿಧ ವೀಡಿಯೊಗಳು ಕಂಡು ಬಂದ ಹಿನ್ನೆಲೆಯಲ್ಲಿ ಸಿಬಿಎಸ್‌ಇ ದಿಲ್ಲಿ ಪೊಲೀಸ್ ಠಾಣೆಯಲ್ಲಿ ಎರಡು ಪ್ರಕರಣಗಳನ್ನು ದಾಖಲಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News