ಬಂಗಾಳದಲ್ಲಿ ಮೊಟ್ಟಮೊದಲ ಬಾರಿ ಮುಸ್ಲಿಂ ಮಹಿಳೆಯನ್ನು ಕಣಕ್ಕಿಳಿಸಿದ ಬಿಜೆಪಿ!

Update: 2019-03-24 03:50 GMT

ಕೊಲ್ಕತ್ತಾ, ಮಾ.24: ಪಶ್ಚಿಮ ಬಂಗಾಳದಲ್ಲಿ ಮೊಟ್ಟಮೊದಲ ಬಾರಿಗೆ ಬಿಜೆಪಿ ಮುಸ್ಲಿಂ ಮಹಿಳೆಯೊಬ್ಬರನ್ನು ಲೋಕಸಭಾ ಕಣಕ್ಕೆ ಇಳಿಸಿದೆ. ಮುರ್ಶಿದಾಬಾದ್ ಜಿಲ್ಲೆಯ ಜಗನಿಪುರ ಕ್ಷೇತ್ರದಿಂದ ಕಾಂಗ್ರೆಸ್ ಮುಖಂಡ ಹಾಗೂ ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿಯವರ ಪುತ್ರ ಅಭಿಜಿತ್ ಮುಖರ್ಜಿ ವಿರುದ್ಧ ಮಫೂಜಾ ಖಾತೂನ್ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಲಿದ್ದಾರೆ.

ಮಫೂಜಾ ಅವರ ಉಮೇದುವಾರಿಕೆಯನ್ನು ಬಿಜೆಪಿ ಶನಿವಾರ ಪ್ರಕಟಿಸಿದೆ.

"ನಮ್ಮ ಕ್ಷೇತ್ರದಲ್ಲಿ ಎಷ್ಟು ಮಂದಿ ತ್ರಿವಳಿ ತಲಾಖ್ ಸಂತ್ರಸ್ತರಿದ್ದಾರೆ ಎಂದು ತಿಳಿಯಲು ಸಮೀಕ್ಷೆ ನಡೆಸುತ್ತೇವೆ. ಪುರುಷ ಸಹಾಯಕರ ನೆರವು ಇಲ್ಲದೇ ಮಹಿಳೆಯರೇ ಸ್ವತಃ ಹಜ್ ಯಾತ್ರೆ ಕೈಗೊಳ್ಳಲು ಮೋದಿ ಸರ್ಕಾರ ಅವಕಾಶ ಮಾಡಿಕೊಟ್ಟ ವಿಚಾರವನ್ನು ಕೂಡಾ ಪ್ರಮುಖವಾಗಿ ಪ್ರಸ್ತಾಪಿಸಲಿದ್ದೇವೆ" ಎಂದು ಮಫೂಜಾ ಹೇಳಿದ್ದಾರೆ.

"ಕೋಮು ಲೇಪನದ ಯಾವ ಹೇಳಿಕೆಯನ್ನೂ ನೀಡುವುದಿಲ್ಲ" ಎಂದು ಮಫೂಜಾ ಅವರ ಎದುರಾಳಿ ಅಭಿಜಿತ್ ಮುಖರ್ಜಿ ಸ್ಪಷ್ಟಪಡಿಸಿದ್ದಾರೆ. ಆದರೆ ತ್ರಿವಳಿ ತಲಾಖ್ ಸುಶಿಕ್ಷಿತ ಮುಸ್ಲಿಂ ಮಹಿಳೆಯರ ಮೇಲೆ ಪ್ರಭಾವ ಬೀರಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News