ತುಮಕೂರು ಲೋಕಸಭಾ ಕ್ಷೇತ್ರ: 17 ನಾಮಪತ್ರ ಸಲ್ಲಿಕೆ

Update: 2019-03-25 14:47 GMT

ತುಮಕೂರು.ಮಾ.25: ತುಮಕೂರು ಲೋಕಸಭಾ ಚುನಾವಣೆಗೆ ಸ್ಪರ್ಧಿಸಲು ಐದನೇ ದಿನವಾದ ಮಾರ್ಚ್ 25ರಂದು ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ, ಸಂಸದ ಎಸ್.ಪಿ.ಮುದ್ದಹನುಮೇಗೌಡ, ಮಾಜಿ ಸಂಸದ ಜಿ.ಎಸ್.ಬಸವರಾಜ್, ಮಾಜಿ ಶಾಸಕ ಡಿ. ನಾಗರಾಜಯ್ಯ ಸೇರಿದಂತೆ ವಿವಿಧ ಅಭ್ಯರ್ಥಿಗಳು ಹಾಗೂ 7 ಪಕ್ಷೇತರ ಸೇರಿ 11 ಅಭ್ಯರ್ಥಿಗಳಿಂದ ಒಟ್ಟು 17 ನಾಮಪತ್ರಗಳು ಸಲ್ಲಿಕೆಯಾಗಿವೆ. 

ಬಿಜೆಪಿ ಅಭ್ಯರ್ಥಿಯಾಗಿ ತುಮಕೂರು ಗಾಂಧಿ ನಗರದ ಜಿ.ಎಸ್ ಬಸವರಾಜ್, ಸಿದ್ದರಾಮೇಗೌಡ, ಎಸ್.ಪಿ ಮುದ್ದಹನುಮೇಗೌಡ (2 ನಾಮಪತ್ರ); ಕಪನಿಗೌಡ, ಸಿ.ಪಿ. ಮಹಾಲಕ್ಷ್ಮಿ, ಡಿ.ಶರಧಿಶಯನ, ಕೆ.ಎನ್.ರಾಜಣ್ಣ, ಹೆಚ್.ಡಿ ದೇವೇಗೌಡ (4 ನಾಮಪತ್ರ), ಪ್ರಕಾಶ್ ಆರ್.ಎ.ಜೈನ್, ಕೆ.ಸಿ.ಹನುಮಂತರಾಯ, ಡಿ.ನಾಗರಾಜಯ್ಯ (2) ನಾಮಪತ್ರ ಸಲ್ಲಿಸಿದ್ದಾರೆ.

ನಾಮಪತ್ರ ಸಲ್ಲಿಕೆಯ ಮೊದಲನೇ ದಿನ(ಮಾ.19) ಯಾವುದೇ ನಾಮಪತ್ರ ಸಲ್ಲಿಕೆಯಾಗಿರುವುದಿಲ್ಲ. ಎರಡನೇ ದಿನ 2 ನಾಮಪತ್ರ, ಮಾ.21ರಂದು 3 ನಾಮಪತ್ರ, ಮಾ.22ರಂದು 4 ಹಾಗೂ ಮಾ.25 ರಂದು 17 ನಾಮಪತ್ರ ಸೇರಿ ಒಟ್ಟು 26 ನಾಮಪತ್ರಗಳು ಸಲ್ಲಿಕೆಯಾಗಿವೆ ಎಂದು ಜಿಲ್ಲಾ ಚುನಾವಣಾಧಿಕಾರಿ ಡಾ.ಕೆ.ರಾಕೇಶ್ ಕುಮಾರ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News