ರಫೇಲ್ ಬಂದರೆ, ಪಾಕಿಸ್ತಾನ ಎಲ್‌ಒಸಿ ಬಳಿ ಸುಳಿಯದು: ಐಎಎಫ್ ವರಿಷ್ಠ ಧನೋವ

Update: 2019-03-25 16:20 GMT

ಚಂಡಿಗಢ, ಮಾ. 25: ಭಾರತ ಉಪಖಂಡದಲ್ಲಿ ರಫೇಲ್ ಜೆಟ್ ಅತ್ಯುತ್ತಮ ಯುದ್ಧ ವಿಮಾನ. ಒಂದು ಬಾರಿ ಈ ವಿಮಾನವನ್ನು ನಿಯೋಜಿಸಿದಲ್ಲಿ, ಗಡಿ ನಿಯಂತ್ರಣ ರೇಖೆ ಅಥವಾ ಅಂತಾರಾಷ್ಟ್ರೀಯ ಗಡಿ ರೇಖೆಯ ಸಮೀಪವೂ ಪಾಕಿಸ್ತಾನ ಸುಳಿಯದು ಎಂದು ಭಾರತೀಯ ವಾಯು ಪಡೆಯ ವರಿಷ್ಠ ಬಿ.ಎಸ್. ಧನೋವ ಸೋಮವಾರ ಹೇಳಿದ್ದಾರೆ.

 ಸಂದರ್ಶನವೊಂದರಲ್ಲಿ ಮಾತನಾಡಿದ ಧನೋವ, ರಫೇಲ್ ನಿಯೋಜನೆ ಯಾದರೆ, ಭಾರತದ ವಾಯು ಕ್ಷೇತ್ರ ರಕ್ಷಣೆಯ ಸಾಮರ್ಥ್ಯ ಹಲವು ಪಟ್ಟು ಹೆಚ್ಚಾಗಲಿದೆ. ಪಾಕಿಸ್ತಾನ ಎಂದಿಗೂ ಗಡಿ ನಿಯಂತ್ರಣ ರೇಖೆ ಸಮೀಪವೂ ಸುಳಿಯದು ಎಂದರು.

ಅಮೆರಿಕ ನಿರ್ಮಿತ ನಾಲ್ಕು ಚಿನೂಕ್ ಹೆಲಿಕಾಪ್ಟರ್‌ನ ನಿಯೋಜನೆಗೆ ಚಂಡಿಗಢದಲ್ಲಿ ಆಯೋಜಿಸಲಾದ ಕಾರ್ಯಕ್ರಮದ ನೇಪಥ್ಯದಲ್ಲಿ ಅವರು ಮಾತನಾಡಿದರು. ಫ್ರಾನ್ಸ್‌ನೊಂದಿಗಿನ 36 ಯುದ್ಧ ವಿಮಾನಗಳ ಖರೀದಿ ಒಪ್ಪಂದದಂತೆ ಮೊದಲ ಹಂತದಲ್ಲಿ ಕೆಲವು ರಫೇಲ್‌ಗಳು ಸೆಪ್ಟಂಬರ್‌ನಲ್ಲಿ ಭಾರತೀಯ ವಾಯು ಪಡೆಗೆ ನಿಯೋಜನೆಯಾಗಲಿದೆ ಎಂದು ಧನೋವಾ ತಿಳಿಸಿದರು. ಭಾರತೀಯ ವಾಯು ಪಡೆಯಲ್ಲಿ ರಫೇಲ್‌ಗಳು ಇದ್ದರೆ, ಪಾಕಿಸ್ತಾನದ ವಿಮಾನಗಳು ಗಡಿ ನಿಯಂತ್ರಣ ರೇಖೆಯ ಸಮೀಪ ಬರಲು ಕೂಡ ಅವಕಾಶ ನೀಡಲಾರವು. ಈ ರಫೇಲ್‌ಗಳು 150 ಕಿ.ಮೀ. ದಾಳಿ ವ್ಯಾಪ್ತಿಯಲ್ಲಿ ಶತ್ರು ವಿಮಾನಗಳನ್ನು ಹೊಡೆದುರುಳಿಸುವ ಸಾಮರ್ಥ್ಯ ಹೊಂದಿವೆ ಎಂದು ಸೇನಾ ವಲಯದಲ್ಲಿ ಚರ್ಚೆ ನಡೆಯುತ್ತಿದೆ. ಸೆಪ್ಟಂಬರ್ ತಿಂಗಳಲ್ಲಿ ನಾವು ರಫೇಲ್ ಹೊಂದಲಿದ್ದೇವೆ. ರಫೇಲ್ ನಮ್ಮ ಸಾಮರ್ಥ್ಯವನ್ನು ಹೆಚ್ಚಿಸಲಿದೆ. ಚಿನೂಕ್ ಹೆಲಿಕಾಪ್ಟರ್ ಅತಿ ಎತ್ತರದ ವಲಯದದಲ್ಲಿ ಉಪಯೋಗಕಾರಿ ಎಂದು ಧನೋವಾ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News