ಜಾತ್ಯತೀತತೆಯ ಬಗ್ಗೆ ಭಾಷಣ ಬಿಗಿಯುವವರು ಪಾಕಿಸ್ತಾನಕ್ಕೆ ಹೋಗಲಿ ಎಂದ ಉಮಾ ಭಾರತಿ

Update: 2019-03-26 10:31 GMT

ಮುಝಫ್ಫರನಗರ್, ಮಾ.26: ಕಾಂಗ್ರೆಸ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿರುವ ಕೇಂದ್ರ ಸಚಿವೆ ಉಮಾ ಭಾರತಿ, ಜಾತ್ಯತೀತೆಯ ಬಗ್ಗೆ ಭಾಷಣ ಬಿಗಿಯಲು ಬಯಸುವವರು ಪಾಕಿಸ್ತಾನಕ್ಕೆ ಹೋಗಬೇಕೆಂದು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

“2014ರ ಲೋಕಸಭಾ ಚುನಾವಣೆಯಲ್ಲಿ ನರೇಂದ್ರ ಮೋದಿ ಅಭಿವೃದ್ಧಿಯನ್ನು ತಮ್ಮ ಅಜೆಂಡಾ ಮಾಡಿಕೊಂಡಿದ್ದರು. ಅದಕ್ಕಿಂತ ಮುಂಚೆ ಅಂತಹ ಅಜೆಂಡಾ ಇರಲಿಲ್ಲ. ನಾವು ರಾಷ್ಟ್ರಭಕ್ತಿ ಅಥವಾ ರಾಮನ ಹೆಸರೆತ್ತಿದರೆ ಯಾ ಭಾರತ್ ಮಾತಾಕಿ ಜೈ ಅಂದರೆ ನಮ್ಮನ್ನು ಕೋಮುವಾದಿಗಳು ಎನ್ನುತ್ತಿದ್ದರು. ಅವರು ರಾಮ್ ಮತ್ತು ರೋಟಿ ಬಗ್ಗೆ ಏನೂ ಹೇಳಿಲ್ಲ. ಅವರು ಕೇವಲ ಜಾತ್ಯತೀತತೆ ಹಾಗೂ ಕೋಮುವಾದದ ಬಗ್ಗೆ ಮಾತನಾಡುತ್ತಾರೆ'' ಎಂದು ಇಲ್ಲಿ ನಡೆದ ವಿಜಯ್ ಸಂಕಲ್ಪ್ ಸಭಾ ಉದ್ದೇಶಿಸಿ ಮಾತನಾಡುತ್ತಾ ಉಮಾ ಭಾರತಿ ಹೇಳಿದ್ದಾರೆ.

``ಜಾತ್ಯತೀತತೆಯನ್ನು ಪಾಲಿಸುವ ಏಕೈಕ ದೇಶ ಭಾರತ. ಜಾತ್ಯತೀತತೆ ಏನೆಂದು ನಮಗೆ ಯಾರೂ ಹೇಳಿಕೊಡಬೇಕಾಗಿಲ್ಲ. ಜಾತ್ಯತೀತತೆಯ ಬಗ್ಗೆ ಭಾಷಣ ಬಿಗಿಯಬೇಕೆಂದು ನಿಮಗೆ ಮನಸ್ಸಿದ್ದರೆ ಪಾಕಿಸ್ತಾನಕ್ಕೆ ಹೋಗಿ'' ಎಂದು ಹೇಳಿದರು.

``ನಾನು ಇತ್ತೀಚೆಗೆ ಆಜ್ಮೀರ್ ಶರೀಫ್ ದರ್ಗಾ ಹಾಗೂ ಮುಂಬೈಯ ಹಾಜಿ ಆಲಿ ದರ್ಗಾಕ್ಕೆ ಹೋಗಿದ್ದೆ. ನಾವು ಎಲ್ಲಾ ದೇವರುಗಳನ್ನು ಗೌರವಿಸುತ್ತೇವೆ'' ಎಂದೂ ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News