ಲೋಕಸಭೆ ಚುನಾವಣೆ: ಜೆಡಿಎಸ್ ಅಭ್ಯರ್ಥಿಗಳ ಅಂತಿಮ ಪಟ್ಟಿ ಪ್ರಕಟ

Update: 2019-03-26 14:17 GMT

ಬೆಂಗಳೂರು, ಮಾ.26: ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುತ್ತಿರುವ ಜೆಡಿಎಸ್ ಪಕ್ಷದ 7 ಮಂದಿ ಅಭ್ಯರ್ಥಿಗಳ ಅಂತಿಮಪಟ್ಟಿಯನ್ನು ಮಂಗಳವಾರ ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ.ದೇವೇಗೌಡ ಪ್ರಕಟಿಸಿದ್ದಾರೆ.

ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರ-ಪ್ರಮೋದ್ ಮಧ್ವರಾಜ್, ಹಾಸನ-ಪ್ರಜ್ವಲ್ ರೇವಣ್ಣ, ತುಮಕೂರು-ಎಚ್.ಡಿ.ದೇವೇಗೌಡ, ಮಂಡ್ಯ-ನಿಖಿಲ್ ಕುಮಾರಸ್ವಾಮಿ, ವಿಜಯಪುರ(ಎಸ್ಸಿ)-ಡಾ.ಸುನೀತಾ ದೇವಾನಂದ ಚೌವ್ಹಾಣ್, ಉತ್ತರ ಕನ್ನಡ-ಆನಂದ್ ಆಸ್ನೋಟಿಕರ್ ಹಾಗೂ ಶಿವಮೊಗ್ಗ ಲೋಕಸಭಾ ಕ್ಷೇತ್ರದಿಂದ ಮಧು ಬಂಗಾರಪ್ಪ ಸ್ಪರ್ಧಿಸಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News