ವಿದ್ಯಾರ್ಥಿವೇತನಕ್ಕೆ ಅರ್ಜಿ ಆಹ್ವಾನ

Update: 2019-03-29 18:32 GMT

ವಿದ್ಯಾರ್ಥಿವೇತನ
(ಆದಾಯ ಮತ್ತು ಅರ್ಹತೆ ಆಧಾರಿತ):
ಕಾಲೇಜ್ ಬೋರ್ಡ್ ಇಂಡಿಯಾ ಸ್ಕಾಲರ್ಸ್ ಪ್ರೋಗ್ರಾಂ 2019-20

 ವಿವರ: ಕಾಲೇಜು ಮಂಡಳಿಯು ಗ್ಲೋಬಲ್ ಹೈಯರ್ ಎಜುಕೇಶನ್ ಅಲಯನ್ಸ್ ಸಂಸ್ಥೆಗಳ ಸಹಯೋಗದಲ್ಲಿ ಭಾರತೀಯ ವಿವಿಯಲ್ಲಿ 12ನೇ ತರಗತಿಯ ಬಳಿಕದ ಕೋರ್ಸ್‌ಗಳಿಗೆ ಪ್ರವೇಶ ಪಡೆಯಬಯಸುವ ವಿದ್ಯಾರ್ಥಿಗಳಿಗೆ ಎಸ್‌ಎಟಿ ಆಧಾರದಲ್ಲಿ ಆರ್ಥಿಕ ನೆರವು ನೀಡಲಾಗುವುದು. ಸದಸ್ಯ ಸಂಸ್ಥೆಗಳಲ್ಲಿ ಪದವಿ ಕೋರ್ಸ್‌ಗಳಿಗೆ ಬೋಧನಾ ಶುಲ್ಕ ಪೂರ್ಣ ಉಚಿತ.
ಅರ್ಹತೆ: ಎಸ್‌ಎಟಿ ಶುಲ್ಕದಲ್ಲಿ ರಿಯಾಯಿತಿ ಪಡೆಯಲು ಅರ್ಜಿದಾರನು ಭಾರತೀಯ ನಿವಾಸಿಯಾಗಿರಬೇಕು, ವಾರ್ಷಿಕ ಆದಾಯ 10 ಲಕ್ಷ ರೂ.ಗಿಂತ ಕಡಿಮೆ ಇರಬೇಕು ಮತ್ತು 11 ಅಥವಾ 12ನೇ ತರಗತಿಯಲ್ಲಿ ಅಧ್ಯಯನ ನಡೆಸುತ್ತಿರ ಬೇಕು. ವಾರ್ಷಿಕ ಆದಾಯ 4 ಲಕ್ಷ ರೂ.ಗಿಂತ ಕೆಳಗಿರುವ ಅರ್ಜಿದಾರರು ಕಾಲೇಜು ಬೋಧನಾ ಶುಲ್ಕ ಸ್ಕಾಲರ್‌ಶಿಪ್‌ಗೆ ಅರ್ಹರು. ಎಸ್‌ಎಟಿಯಲ್ಲಿ ಉತ್ತಮ ಸಾಧನೆ ತೋರಬೇಕು ಮತ್ತು ಗ್ಲೋಬಲ್ ಹೈಯರ್ ಎಜುಕೇಶನ್ ಸಂಸ್ಥೆಯ ಸಹ ಸಂಸ್ಥೆಗಳಲ್ಲಿ ಶಿಕ್ಷಣ ಪಡೆಯಲು ಆಹ್ವಾನ ಪಡೆದಿರಬೇಕು.
 ನೆರವು: ಆಯ್ಕೆಯಾದ ಅಭ್ಯರ್ಥಿಗಳಿಗೆ ಎಸ್‌ಎಟಿ ಪರೀಕ್ಷೆ ಶುಲ್ಕದಲ್ಲಿ ಶೇ.90 ಮನ್ನಾ, ಎಸ್‌ಎಟಿ ಪರೀಕ್ಷೆಯ ಸಾಧನೆಯ ಆಧಾರದಲ್ಲಿ (1,600 ಅಂಕಗಳಲ್ಲಿ ಕನಿಷ್ಠ 1,350 ಅಂಕ) ಸದಸ್ಯ ಸಂಸ್ಥೆಗಳಲ್ಲಿ ಅಧ್ಯಯನ ನಡೆಸಲು ಪೂರ್ಣ ಬೋಧನಾ ಶುಲ್ಕ ಮನ್ನಾ. ವಾರ್ಷಿಕ ಆದಾಯ 4 ಲಕ್ಷ ರೂ.ಗಿಂತ ಕಡಿಮೆ ಇರಬೇಕು.
ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ: ಎಪ್ರಿಲ್ 4, 2019
ಅರ್ಜಿ: ಅರ್ಜಿಗಳನ್ನು ಆನ್‌ಲೈನ್ ಮೂಲಕ ಹಾಕಬೇಕು.
ಜಾಲತಾಣ: http://www.b4s.in/bharati/CBI2
******************

*ವಿದ್ಯಾರ್ಥಿವೇತನ
(ಪ್ರತಿಭೆ ಆಧಾರಿತ):
 ಎಂಎಸ್‌ಸಿ ಸ್ಕಾಲರ್‌ಶಿಪ್ ರಿಸರ್ಚ್ ಪ್ರೋಗ್ರಾಂ 2019

ವಿವರ: ಮೀನುಗಾರಿಕಾ ವಿಜ್ಞಾನ ಮತ್ತು ಆಡಳಿತ ಅಥವಾ ಸರಬರಾಜು ಸರಪಳಿ ವಿಷಯದಲ್ಲಿ ಅಧ್ಯಯನ ನಡೆಸುವ ವಿದ್ಯಾರ್ಥಿಗಳಿಗೆ ಲಂಡನ್‌ನ ಮರೈನ್ ಸ್ಟೀವರ್ಡ್‌ಶಿಪ್ ಕೌನ್ಸಿಲ್ (ಎಂಎಸ್‌ಸಿ) 5 ಸ್ಕಾಲರ್‌ಶಿಪ್ ನೀಡುತ್ತದೆ.
ಅರ್ಹತೆ: ಈ ಕ್ಷೇತ್ರದಲ್ಲಿರುವ ಸಮಸ್ಯೆಗಳು ಮತ್ತು ಅದಕ್ಕಿರುವ ಪರಿಹಾರದ ಕುರಿತು ಸಂಶೋಧನೆ ನಡೆಸ ಬಯಸುವ ಪದವಿ ಮತ್ತು ಸ್ನಾತಕೋತ್ತರ ಪದವಿ ಪಡೆದಿರುವ ಭಾರತೀಯರು ಅರ್ಜಿ ಸಲ್ಲಿಸಬಹುದು.
 ನೆರವು: ಆಯ್ಕೆಯಾದ ವಿದ್ಯಾರ್ಥಿಗಳ ಪ್ರಾಜೆಕ್ಟ್‌ಗಳಿಗೆ ಪ್ರವಾಸ ಭತ್ಯೆ ಹಾಗೂ ಸಂಶೋಧನಾ ನೆರವಿಗೆ 4000 ಗ್ರೇಟ್ ಬ್ರಿಟನ್ ಪೌಂಡ್ ಅನುದಾನ ನೀಡಲಾಗುವುದು.
ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ: ಎಪ್ರಿಲ್ 7, 2019
ಅರ್ಜಿ: ಅರ್ಜಿಗಳನ್ನು ಆನ್‌ಲೈನ್ ಮೂಲಕ ಹಾಕಬೇಕು.
ಜಾಲತಾಣ: http://www.b4s.in/bharati/MSR3

*******************
ವಿದ್ಯಾರ್ಥಿವೇತನ
(ಪ್ರತಿಭೆ ಆಧಾರಿತ):
 ಇನ್‌ಲ್ಯಾಕ್ಸ್ ಸ್ಕಾಲರ್‌ಶಿಪ್ಸ್ 2019

ವಿವರ: ಇನ್‌ಲ್ಯಾಕ್ಸ್ ಶಿವದಾಸಾನಿ ಪ್ರತಿಷ್ಠಾನವು ಅಮೆರಿಕ, ಯುರೋಪ್, ಯುಕೆಯ ಪ್ರತಿಷ್ಠಿತ ವಿವಿಗಳಲ್ಲಿ ಸ್ನಾತಕೋತ್ತರ ಅಧ್ಯಯನ ನಡೆಸ ಬಯಸುವ ಭಾರತದ ಪದವಿ ವಿದ್ಯಾರ್ಥಿಗಳಿಗೆ ಬೋಧನಾ ಶುಲ್ಕ, ಜೀವನ ವೆಚ್ಚ, ಪ್ರಯಾಣ ವೆಚ್ಚ ಸಹಿತ ಶೈಕ್ಷಣಿಕ ವೆಚ್ಚಕ್ಕೆ ಆರ್ಥಿಕ ನೆರವು ನೀಡುತ್ತದೆ.
ಅರ್ಹತೆ: ಉನ್ನತ ಸಂಸ್ಥೆಗಳಲ್ಲಿ ಪ್ರವೇಶ ಪಡೆದಿರುವ 30 ವರ್ಷದೊಳಗಿನ ಭಾರತೀಯ ಪದವೀಧರರು ಅರ್ಜಿ ಸಲ್ಲಿಸಬಹುದು.
ನೆರವು:   ಆಯ್ಕೆಯಾದ ವಿದ್ಯಾರ್ಥಿಗಳ ಪ್ರಯಾಣ ವೆಚ್ಚ, ವಾಸ್ತವ್ಯ ವೆಚ್ಚ, ಜೀವನ ವೆಚ್ಚ ಸೇರಿದಂತೆ ಸಂಪೂರ್ಣ ಬೋಧನಾ ಶುಲ್ಕ (ಗರಿಷ್ಟ 1,00,000 ಅವೆುರಿಕನ್ ಡಾಲರ್)ವನ್ನು ಒಳಗೊಂಡ ಸ್ಕಾಲರ್‌ಶಿಪ್ ನೀಡಲಾಗುವುದು.
ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ: ಎಪ್ರಿಲ್ 15, 2019
ಅರ್ಜಿ: ಅರ್ಜಿಗಳನ್ನು ಆನ್‌ಲೈನ್ ಮೂಲಕ ಸಲ್ಲಿಸಬೇಕು.
ಜಾಲತಾಣ: http://www.b4s.in/bharati/IS71

**************
ವಿದ್ಯಾರ್ಥಿವೇತನ
(ಅಂತರ್‌ರಾಷ್ಟ್ರೀಯ ಮಟ್ಟ):
 ಚರ್ಪಾಕ್ ಮಾಸ್ಟರ್ಸ್ ಪ್ರೋಗ್ರಾಂ 2019, ಫ್ರಾನ್ಸ್

ವಿವರ: ಫ್ರಾನ್ಸ್‌ನಲ್ಲಿ ಸ್ನಾತಕೋತ್ತರ ಪದವಿ ಅಧ್ಯಯನ ನಡೆಸಲು ಆಸಕ್ತಿ ಇರುವ ಭಾರತೀಯ ವಿದ್ಯಾರ್ಥಿಗಳಿಗೆ ಕ್ಯಾಂಪಸ್ ಫ್ರಾನ್ಸ್ ಕಂಪೆನಿ ನೀಡುವ ಸ್ಕಾಲರ್‌ಶಿಪ್.
ಅರ್ಹತೆ: ಫ್ರಾನ್ಸ್‌ನ ಸಂಸ್ಥೆಗಳಲ್ಲಿ ಸ್ನಾತಕೋತ್ತರ ಪದವಿ ಅಧ್ಯಯನಕ್ಕೆ ಪ್ರವೇಶ ಪಡೆದಿರುವವರು ಅಥವಾ ಅರ್ಜಿ ಹಾಕಲು ಬಯಸುವ ಪದವೀಧರ ಭಾರತೀಯ ಪೌರರು ಅಥವಾ 3 ವರ್ಷದೊಳಗಿನ ಕಾರ್ಯನಿರ್ವಹಣೆಯ ಅನುಭವ ಇರುವ ಉದ್ಯೋಗಿಗಳು ಅರ್ಜಿ ಸಲ್ಲಿಸಬಹುದು. ವಯಸ್ಸು 30 ವರ್ಷ ಮೀರಿರಬಾರದು.
ನೆರವು: ಆಯ್ದ ಅಭ್ಯರ್ಥಿಗಳಿಗೆ ಬೋಧನಾ ಶುಲ್ಕಕ್ಕೆ 5000 ಯುರೊ ನೆರವು, ವಾರ್ಷಿಕ 300 ಯುರೊ ವೈದ್ಯಕೀಯ ವಿಮಾ ಕವರೇಜ್, 700 ಯುರೊ ಜೀವನ ವೆಚ್ಚ. ಸ್ಕಾಲರ್‌ಶಿಪ್‌ನಲ್ಲಿ ಒಂದು ಸಾರಿ ಬಂದು ಹೋಗುವ ವಿಮಾನ ಪ್ರಯಾಣ ವೆಚ್ಚ, ಸ್ಟೂಡೆಂಟ್ ವೀಸಾ ವೆಚ್ಚ, ವಾಸ್ತವ್ಯಕ್ಕೆ ನೆರವು ಕೂಡಾ ಸೇರಿರುತ್ತದೆ.
ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ: ಎಪ್ರಿಲ್ 15, 2019
ಅರ್ಜಿ: ಅರ್ಜಿಗಳನ್ನು ಆನ್‌ಲೈನ್ ಮೂಲಕ ಹಾಕಬೇಕು.
ಜಾಲತಾಣ: http://www.b4s.in/bharati/CMP5

******************
ವಿದ್ಯಾರ್ಥಿವೇತನ
(ಸಂಶೋಧನಾ ಮಟ್ಟ):
ಆರ್‌ಎಸ್‌ಟಿಎಂಎಚ್ ಸ್ಮಾಲ್ ಗ್ರಾಂಟ್ಸ್ ಪ್ರೋಗ್ರಾಂ 2019

ವಿವರ: ರಾಯಲ್ ಸೊಸೈಟಿ ಆಫ್ ಟ್ರಾಫಿಕಲ್ ಡಿಸೀಸ್ ಆ್ಯಂಡ್ ಹೈಜೀನ್(ಆರ್‌ಎಸ್‌ಟಿಎಂಎಚ್) ಸಂಸ್ಥೆಯು ವೈದ್ಯಕೀಯ ಮತ್ತು ವೈಜ್ಞಾನಿಕ ಸಂಶೋಧನೆ ಅಥವಾ ಜಾಗತಿಕ ಆರೋಗ್ಯ ಅಥವಾ ಉಷ್ಣವಲಯದ ಔಷಧಿ ವಿಷಯದಲ್ಲಿ ಕ್ಷೇತ್ರಕಾರ್ಯ ನಡೆಸಲು ಸಂಶೋಧಕರಿಂದ ಹಾಗೂ ಜಾಗತಿಕ ಆರೋಗ್ಯ ವೃತ್ತಿಪರರಿಂದ ಅರ್ಜಿ ಆಹ್ವಾನಿಸಿದೆ.
ಅರ್ಹತೆ: ಭಾರತದ ಸಂಶೋಧಕರು ಅಥವಾ ಜಾಗತಿಕ ಆರೋಗ್ಯ ವೃತ್ತಿಪರರು ಅರ್ಜಿ ಸಲ್ಲಿಸಬಹುದು( ಹಿಂದಿನ ಎರಡು ವರ್ಷಗಳಲ್ಲಿ ಯಾವುದೇ ಇತರ ಆರ್‌ಎಸ್‌ಟಿಎಂಎಸ್ ಅನುದಾನ ಪಡೆದಿರಬಾರದು).
ನೆರವು: ಆಯ್ದ ಅಭ್ಯರ್ಥಿಗಳಿಗೆ 5000 ಗ್ರೇಟ್‌ಬ್ರಿಟನ್ ಪೌಂಡ್ ನೆರವು ನೀಡಲಾಗುವುದು. ಇದನ್ನು ಪ್ರಯಾಣ ವೆಚ್ಚ, ವಾಸ್ತವ್ಯ ಹಾಗೂ ಕ್ಷೇತ್ರ ಸಂಶೋಧನಾ ಕಾರ್ಯದ ವೆಚ್ಚಕ್ಕೆ ಬಳಸಬಹುದು.
ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ: ಎಪ್ರಿಲ್ 15, 2019
ಅರ್ಜಿ:  ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು.
ಜಾಲತಾಣ: http://www.b4s.in/bharati/RSG2

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News