ರಾಜ್ಯದ ಮೊದಲ ಹಂತದ ಮತದಾನ: ಅಂತಿಮ ಕಣದಲ್ಲಿ 241 ಅಭ್ಯರ್ಥಿಗಳು

Update: 2019-03-30 11:38 GMT

ಬೆಂಗಳೂರು, ಮಾ.30: ಮೊದಲನೆ ಹಂತದ ಚುನಾವಣೆ ನಡೆಯಲಿರುವ 14 ಲೋಕಸಭಾ ಕ್ಷೇತ್ರಗಳ ಅಂತಿಮ ಕಣದಲ್ಲಿ 241 ಅಭ್ಯರ್ಥಿಗಳಿದ್ದು, ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದಲ್ಲಿ ಅತ್ಯಧಿಕ ಅಭ್ಯರ್ಥಿಗಳು ಸ್ಪರ್ಧೆಯಲ್ಲಿದ್ದಾರೆ. ನಾಮಪತ್ರ ಹಿಂಪಡೆಯಲು ಶುಕ್ರವಾರ ಕೊನೆ ದಿನಾಂಕವಾಗಿತ್ತು. 274 ಕ್ರಮಬದ್ಧ ನಾಮಪತ್ರಗಳ ಪೈಕಿ 32 ನಾಮಪತ್ರಗಳನ್ನು ಹಿಂಪಡೆದಿದ್ದು, ಅಂತಿಮ ಕಣದಲ್ಲಿ 241 ಅಭ್ಯರ್ಥಿಗಳಿದ್ದಾರೆ. ಈ ಪೈಕಿ ಬಿಜೆಪಿ 13 ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದು, ಮಂಡ್ಯದಲ್ಲಿ ಸುಮಲತಾ ಅಂಬರೀಶ್‌ಗೆ ಬೆಂಬಲ ನೀಡಿದೆ. ಮೈತ್ರಿ ಪಕ್ಷದ 14 ಅಭ್ಯರ್ಥಿಗಳ ಪೈಕಿ 4 ಜೆಡಿಎಸ್, 10 ಕಾಂಗ್ರೆಸ್ ಅಭ್ಯರ್ಥಿಗಳಿದ್ದಾರೆ.

ಉಡುಪಿ-ಚಿಕ್ಕಮಗಳೂರು ಕ್ಷೇತ್ರದಿಂದ 14 ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದು, ಇಬ್ಬರು ನಾಮಪತ್ರ ಹಿಂಪಡೆದಿದ್ದರಿಂದ 12 ಅಭ್ಯರ್ಥಿಗಳು ಸ್ಪರ್ಧೆಯಲ್ಲಿದ್ದಾರೆ. ದಕ್ಷಿಣ ಕನ್ನಡ ಕ್ಷೇತ್ರದಿಂದ 13 ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದು, ಯಾರೂ ಹಿಂಪಡೆದಿಲ್ಲ. ಹಾಸನ ಕ್ಷೇತ್ರದಿಂದ 7 ನಾಮಪತ್ರಗಳು ಸಲ್ಲಿಕೆಯಾಗಿದ್ದು, 1 ಹಿಂಪಡೆದಿದ್ದರಿಂದ 6 ಜನ ಕಣದಲ್ಲಿದ್ದಾರೆ. ಚಿತ್ರದುರ್ಗ ಕ್ಷೇತ್ರದಿಂದ 23 ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದು, 4 ಜನರು ಹಿಂಪಡೆದಿದ್ದರಿಂದ 19 ಜನ ಅಂತಿಮ ಕಣದಲ್ಲಿದ್ದಾರೆ.

ತುಮಕೂರು ಕ್ಷೇತ್ರದಿಂದ 19 ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದು, 4 ಜನ ವಾಪಸ್ಸು ಪಡೆದಿದ್ದು, 15 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಮಂಡ್ಯ ಕ್ಷೇತ್ರದಿಂದ 26 ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದು, 4 ಜನ ವಾಪಸ್ಸು ಪಡೆದಿದ್ದರಿಂದ 22 ಜನ ಕಣದಲ್ಲಿದ್ದಾರೆ. ಮೈಸೂರು ಕ್ಷೇತ್ರದಿಂದ 25 ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದು, 3 ಜನ ಹಿಂಪಡೆದಿದ್ದು, 22 ಜನ ಕಣದಲ್ಲಿದ್ದಾರೆ. ಚಾಮರಾಜನಗರ ಕ್ಷೇತ್ರದಿಂದ 12 ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದು, 2 ವಾಪಸ್ಸು ಪಡೆದಿದ್ದರಿಂದ 10 ಜನ ಕಣದಲ್ಲಿದ್ದಾರೆ.

ಬೆಂಗಳೂರು ಗ್ರಾಮಾಂತರದಿಂದ 17 ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದು, 2 ಜನ ಹಿಂಪಡೆದಿದ್ದರಿಂದ 15 ಜನ ಕಣದಲ್ಲಿದ್ದಾರೆ. ಬೆಂಗಳೂರು ಉತ್ತರ ಕ್ಷೇತ್ರದಿಂದ 32 ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದು, ಒಬ್ಬರು ವಾಪಸ್ಸು ಪಡೆದಿದ್ದರಿಂದ 31 ಜನ ಕಣದಲ್ಲಿದ್ದಾರೆ. ಬೆಂಗಳೂರು ಕೇಂದ್ರ ಕ್ಷೇತ್ರದಿಂದ 24 ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದು, ಇಬ್ಬರು ಹಿಂಪಡೆದಿದ್ದರಿಂದ 22 ಜನ ಕಣದಲ್ಲಿದ್ದಾರೆ. ಬೆಂಗಳೂರು ದಕ್ಷಿಣದಿಂದ 25 ಜನರು, ಚಿಕ್ಕಬಳ್ಳಾಪುರ ಕ್ಷೇತ್ರದಿಂದ 15, ಕೋಲಾರ ಕ್ಷೇತ್ರದಿಂದ 14 ಜನರು ಅಂತಿಮ ಕಣದಲ್ಲಿದ್ದಾರೆ.

ಯಾರ ಯಾರ ನಡುವೆ ಹಣಾಹಣಿ:

ಉಡುಪಿ-ಚಿಕ್ಕಮಗಳೂರು: ಪ್ರಮೋದ್ ಮಧ್ವರಾಜ್(ಜೆಡಿಎಸ್), ಶೋಭಾ ಕರಂದ್ಲಾಜೆ(ಬಿಜೆಪಿ)

ದಕ್ಷಿಣ ಕನ್ನಡ: ಮಿಥುನ್‌ ರೈ(ಕಾಂಗ್ರೆಸ್), ನಳೀನ್ ಕುಮಾರ್ ಕಟೀಲ್(ಬಿಜೆಪಿ)

ಹಾಸನ: ಪ್ರಜ್ವಲ್ ರೇವಣ್ಣ(ಜೆಡಿಎಸ್), ಎ.ಮಂಜು(ಬಿಜೆಪಿ)

ಚಿತ್ರದುರ್ಗ: ಬಿ.ಎನ್.ಚಂದ್ರಪ್ಪ(ಕಾಂಗ್ರೆಸ್), ಎ.ನಾರಾಯಣಸ್ವಾಮಿ(ಬಿಜೆಪಿ)

ತುಮಕೂರು: ಎಚ್.ಡಿ.ದೇವೇಗೌಡ(ಜೆಡಿಎಸ್), ಜಿ.ಎಸ್.ಬಸವರಾಜು(ಬಿಜೆಪಿ)

ಮಂಡ್ಯ: ನಿಖಿಲ್ ಕುಮಾರಸ್ವಾಮಿ(ಜೆಡಿಎಸ್), ಸುಮಲತಾ ಅಂಬರೀಶ್(ಪಕ್ಷೇತರ)

ಮೈಸೂರು: ಪ್ರತಾಪ್ ಸಿಂಹ(ಬಿಜೆಪಿ), ಸಿ.ಎಚ್.ವಿಜಯಶಂಕರ್(ಕಾಂಗ್ರೆಸ್)

ಚಾಮರಾಜನಗರ: ಧ್ರುವನಾರಾಯಣ(ಕಾಂಗ್ರೆಸ್), ವಿ.ಶ್ರೀನಿವಾಸಪ್ರಸಾದ್(ಬಿಜೆಪಿ)

ಬೆಂಗಳೂರು ಗ್ರಾಮಾಂತರ: ಡಿ.ಕೆ.ಸುರೇಶ್(ಕಾಂಗ್ರೆಸ್), ಅಶ್ವತ್ಥನಾರಾಯಣ(ಬಿಜೆಪಿ)

ಬೆಂಗಳೂರು ಉತ್ತರ: ಡಿ.ವಿ.ಸದಾನಂದಗೌಡ(ಬಿಜೆಪಿ), ಕೃಷ್ಣಭೈರೇಗೌಡ(ಕಾಂಗ್ರೆಸ್)

ಬೆಂಗಳೂರು ಕೇಂದ್ರ: ರಿಝ್ವಾನ್ ಅರ್ಶದ್(ಕಾಂಗ್ರೆಸ್), ಪಿ.ಸಿ.ಮೋಹನ್(ಬಿಜೆಪಿ), ಪ್ರಕಾಶ್ ರೈ(ಪಕ್ಷೇತರ)

ಬೆಂಗಳೂರು ದಕ್ಷಿಣ: ಬಿ.ಕೆ.ಹರಿಪ್ರಸಾದ್(ಕಾಂಗ್ರೆಸ್), ತೇಜಸ್ವಿ ಸೂರ್ಯ(ಬಿಜೆಪಿ)

ಚಿಕ್ಕಬಳ್ಳಾಪುರ: ವೀರಪ್ಪ ಮೊಯ್ಲಿ(ಕಾಂಗ್ರೆಸ್), ಬಿ.ಎನ್.ಬಚ್ಚೇಗೌಡ(ಬಿಜೆಪಿ), ಎಸ್.ವರಲಕ್ಷ್ಮಿ(ಸಿಪಿಎಂ), ಸಿ.ಎಸ್.ದ್ವಾರಕಾನಾಥ್(ಬಿಎಸ್‌ಪಿ)

ಕೋಲಾರ : ಕೆ.ಎಚ್.ಮುನಿಯಪ್ಪ(ಕಾಂಗ್ರೆಸ್), ಮುನಿಸ್ವಾಮಿ(ಬಿಜೆಪಿ) 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News