ಎ. 4ರಂದು ರಾಹುಲ್ ನಾಮಪತ್ರ ಸಲ್ಲಿಕೆ

Update: 2019-04-01 06:27 GMT

ಕಲ್‌ಪಟ್ಟ, ಎ. 1: ಲೋಕಸಭಾ ಚುನಾವಣೆಗೆ ನಾಮಪತ್ರ ಸಲ್ಲಿಸಲು ಕೊನೆಯ ದಿನವಾದ ಎಪ್ರಿಲ್ ನಾಲ್ಕರಂದು ರಾಹುಲ್ ಗಾಂಧಿ ನಾಮಪತ್ರ ಸಲ್ಲಿಸಲಿದ್ದಾರೆ. ಒಂದು ವೇಳೆ ನಾಲ್ಕರಂದು ಸಾಧ್ಯವಾಗದಿದ್ದರೆ ಎ.3ರಂದು ನಾಮಪತ್ರ ಸಲ್ಲಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ನಾಮಪತ್ರ ಸಲ್ಲಿಕೆಗೆ ಮುನ್ನುಡಿಯಾಗಿ ಕೇಂದ್ರ ಕಾಂಗ್ರೆಸ್ ಮುಖಂಡರ ಜೊತೆಗೆ ವಯನಾಡ್‌ನಲ್ಲಿ ಸಭೆ ನಡೆಯಲಿದೆ. ನಾಮಪತ್ರ ಸಲ್ಲಿಕೆಯ ಬಗ್ಗೆ ರೂಪರೇಖೆ ತಯಾರಿಸಲು ಎಐಸಿಸಿ ಜನರಲ್ ಸೆಕ್ರಟರಿ ಕೆ.ಸಿ.ವೇಣುಗೋಪಾಲ್‌ಗೆ ಜವಬ್ದಾರಿ ವಹಿಸಲಾಗಿದೆ.

ಕೇರಳದಲ್ಲಿ ನಾಮಪತ್ರ ಸಲ್ಲಿಕೆಗೆ ಗುರುವಾರ ಕೊನೆಯ ದಿನವಾಗಿದ್ದು, ಭದ್ರತಾ ಕಾರ್ಯಗಳ ಪರಿಶೀಲನೆಗೆ ಎಸ್‌ಪಿಜಿ ತಂಡ ಇಂದು ವಯನಾಡ್‌ಗೆ ಆಗಮಿಸಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News