ಖಾಸಗಿ ಬಸ್‍ಗಳ ಮುಖಾಮುಖಿ ಢಿಕ್ಕಿ: ಹಲವರಿಗೆ ಗಾಯ

Update: 2019-04-01 18:51 GMT

ಹನೂರು,ಎ.1: ಖಾಸಗಿ ಬಸ್‍ಗಳ ನಡುವೆ ಮುಖಾಮುಖಿ ಢಿಕ್ಕಿ ಸಂಭವಿಸಿದ ಪರಿಣಾಮ ಹಲವರಿಗೆ ಗಾಯವಾಗಿರುವ ಘಟನೆ ತಾಲೂಕಿನ ಮಲೈಮಹದೇಶ್ವರಬೆಟ್ಟದ ಸಮೀಪ ಇಂದು ಬೆಳಗ್ಗೆ ನಡೆದಿದೆ.

ತಾಲೂಕಿನ ಮಲೈಮಹದೇಶ್ವರಬೆಟ್ಟಕ್ಕೆ ಹಾದು ಹೋಗುವ ಮಾರ್ಗ ಮದ್ಯೆ ಬೆಟ್ಟದ ತಿರುವಿನ ಹಾಳಹಳ್ಳ ಬಳಿ ಹನೂರಿನಿಂದ ಬೆಟ್ಟಕ್ಕೆ ಹೋಗುತ್ತಿದ್ದ ಬಸ್ ಹಾಗೂ ಕೊಳ್ಳೇಗಾಲದ ಕಡೆ ಆಗಮಿಸುತ್ತಿದ್ದ ಬಸ್ ನಡುವೆ ಢಿಕ್ಕಿ ಸಂಭವಿಸಿದೆ. ಪರಿಣಾಮ ಎರಡು ಬಸ್‍ಗಳ ಮುಂಬಾಗ ಜಖಂ ಆಗಿದ್ದು, ಬಸ್‍ನಲ್ಲಿ  ಪ್ರಯಾಣಿಸುತ್ತಿದ್ದ ಹಲವರಿಗೆ ಗಾಯಾಗಳಾಗಿದೆ.

ಗಾಯಾಳುಗಳನ್ನು ಸ್ಥಳೀಯರ ಸಹಾಯದಿಂದ ಸಮೀಪದ ಮಲೈಮಹದೇಶ್ವರ ಬೆಟ್ಟ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಮಮ ಬೆಟ್ಟ ಪೊಲೀಸರು ಸ್ಥಳಕ್ಕೆ ಭೇಟಿದರು.
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News