ಗ್ರಾಮಿ ನಾಮನಿರ್ದೇಶಿತ ರ‍್ಯಾಪ್ ಸಂಗೀತಗಾರನ ಹತ್ಯೆ

Update: 2019-04-02 05:39 GMT

ವಾಶಿಂಗ್ಟನ್, ಎ. 2: ಗ್ರಾಮಿ ಪ್ರಶಸ್ತಿಗೆ ನಾಮನಿರ್ದೇಶನಗೊಂಡಿದ್ದ ‘ರ‍್ಯಾಪ್’ ಸಂಗೀತಗಾರ ನಿಪ್ಸಿ ಹಸಲ್‌ರನ್ನು ಅಮೆರಿಕದ ಲಾಸ್ ಏಂಜಲಿಸ್ ನಗರದಲ್ಲಿ ರವಿವಾರ ಗುಂಡಿಟ್ಟು ಕೊಲ್ಲಲಾಗಿದೆ ಎಂದು ‘ಎನ್‌ಬಿಸಿ ನ್ಯೂಸ್’ ವರದಿ ಮಾಡಿದೆ.

ರವಿವಾರ ಅಪರಾಹ್ನ ತನ್ನ ಬಟ್ಟೆ ಅಂಗಡಿಯ ಎದುರು ನಿಂತಿದ್ದ ನಿಪ್ಸಿಗೆ ಹಂತಕನು ಸಮೀಪದಿಂದ ಗುಂಡು ಹಾರಿಸಿ ಪರಾರಿಯಾದನು ಎಂಬುದಾಗಿ ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. ಹಂತಕನು ಬಳಿಕ ಕಾರಿನಲ್ಲಿ ಪರಾರಿಯಾಗಿದ್ದಾನೆ.

ಹಂತಕನನ್ನು ಈವರೆಗೆ ಬಂಧಿಸಲಾಗಿಲ್ಲ ಎಂದು ಲಾಸ್ ಏಂಜಲಿಸ್ ಪೊಲೀಸ್ ಇಲಾಖೆಯ ವಕ್ತಾರರೋರ್ವರು ತಿಳಿಸಿದರು.

ಹತ್ಯೆ ನಡೆದ ಗಂಟೆಗಳ ಮುನ್ನ ಟ್ವೀಟ್ ಮಾಡಿದ್ದ ಹಸಲ್, ‘‘ಬಲಿಷ್ಠ ಶತ್ರುಗಳನ್ನು ಹೊಂದುವುದಕ್ಕೂ ಪುಣ್ಯ ಮಾಡಿರಬೇಕು’’ ಎಂದು ಹೇಳಿದ್ದರು.

33 ವರ್ಷದ ಹಾಡುಗಾರನ ‘ವಿಕ್ಟರಿ ಲ್ಯಾಪ್’ ಆಲ್ಬಮನ್ನು ‘ಶ್ರೇಷ್ಠ ರ‍್ಯಾಪ್ ಆಲ್ಬಮ್’ ವಿಭಾಗದಲ್ಲಿ ಗ್ರಾಮಿ ಪ್ರಶಸ್ತಿಗಾಗಿ ನಾಮನಿರ್ದೇಶನ ಮಾಡಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News