ಕೊಡಗು ಜೆಡಿಎಸ್ ಪುನರ್ ರಚನೆ: ನೂತನ ಪದಾಧಿಕಾರಿಗಳ ನೇಮಕ

Update: 2019-04-05 12:11 GMT

ಮಡಿಕೇರಿ,ಎ.5 : ಜಾತ್ಯತೀತ ಜನತಾದಳದ ಜಿಲ್ಲಾಧ್ಯಕ್ಷ ಕೆ.ಎಂ.ಗಣೇಶ್ ಅವರು ಜಿಲ್ಲಾ ಘಟಕ ಹಾಗೂ ತಾಲ್ಲೂಕು ಘಟಕಗಳನ್ನು ಪುನರ್ ರಚಿಸಿದ್ದು, ನೂತನ ಪದಾಧಿಕಾರಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದ್ದಾರೆ.

ನಗರದ ಪತ್ರಿಕಾ ಭವನದಲ್ಲಿ ನೂತನ ಅಧ್ಯಕ್ಷರು ಹಾಗೂ ಪದಾಧಿಕಾರಿಗಳ ಹೆಸರುಗಳನ್ನು ಘೋಷಿಸಿದ ಅವರು ಪಕ್ಷದ ಬಲವರ್ಧನೆಯ ದೃಷ್ಟಿಯಿಂದ ವಿವಿಧ ಘಟಕಗಳನ್ನು ಪುನರ್ ರಚಿಸಲಾಗಿದೆ ಎಂದರು.

ಜಿಲ್ಲಾ ವಕ್ತಾರರಾಗಿ ಪಾರೆಮಜಲು ಕುಸುಮ ಕಾರ್ಯಪ್ಪ, ಎಂ.ಟಿ.ಕಾರ್ಯಪ್ಪ, ಮಹಾಪ್ರಧಾನ ಕಾರ್ಯದರ್ಶಿಯಾಗಿ ಶನಿವಾರಸಂತೆಯ ಅದೀಲ್ ಪಾಷ, ಮಹಿಳಾ ಘಟಕದ ಜಿಲ್ಲಾಧ್ಯಕ್ಷರಾಗಿ ಗೋಣಿಕೊಪ್ಪದ ಅಪ್ಪನೆರವಂಡ ಶಾಂತಿ ಅಚ್ಚಪ್ಪ ಅವರು ನೇಮಕಗೊಂಡಿದ್ದಾರೆ.

ಉಪಾಧ್ಯಕ್ಷರುಗಳಾಗಿ ಸೋಮವಾರಪೇಟೆಯ ಬಗ್ಗನ ಅನಿಲ್, ನೆಲ್ಲಿಹುದಿಕೇರಿಯ ಶಿವದಾಸ್, ಹೆಬ್ಬಾಲೆ ನಾಗೇಶ್, ಮಡಿಕೇರಿಯ ಯಲದಾಳು ಕೇಶವಾನಂದ, ಶಿರಂಗಾಲದ ಎನ್.ಎಸ್.ರಮೇಶ್, ಭಾಗಮಂಡಲದ ಪಾಣತ್ತಲೆ ವಿಶ್ವನಾಥ್, ಸುಲೇಮಾನ್, ಸಿದ್ದಾಪುರದ ಪೇರುಬಾಯಿ ಪುಟ್ಟಸ್ವಾಮಿ, ವಿರಾಜಪೇಟೆಯ ಮೋಹಿನ್, ಪೊನ್ನಂಪೇಟೆಯ ಎಂ.ಸಿ.ಬೆಳ್ಳಿಯಪ್ಪ, ಶನಿವಾರಸಂತೆಯ ಪುಷ್ಪನಾಗರಾಜ್, ಬೋಜಪ್ಪ, ಬಸವನಹಳ್ಳಿಯ ಚಂದ್ರಶೇಖರ್ ಅವರನ್ನು ನೇಮಕ ಮಾಡಲಾಗಿದೆ.

ಪ್ರಧಾನ ಕಾರ್ಯದರ್ಶಿಗಳಾಗಿ ಕೊಡ್ಲಿಪೇಟೆ ಬೆಂಬಳೂರು ದೇವಪ್ಪ ಗೌಡ, ಕೊಳೆಕೇರಿ ಬಿ.ಹೆಚ್.ಅಹ್ಮದ್, ಮೂರ್ನಾಡು ಬಲ್ಲಾಚಂಡ ಗೌತಮ್, ಅಮ್ಮತ್ತಿ ಕೆ.ಪಿ.ನಾಗರಾಜು, ಸೋಮವಾರಪೇಟೆ ಟಿ.ಸಿ.ಮಂದಣ್ಣ, ಬೆಟ್ಟಗೇರಿಯ ಸೂದನ ಈರಪ್ಪ, ಕೊಡ್ಲಿಪೇಟೆ ಸಂಗಮೇಶ, ಶನಿವಾರಸಂತೆ ಹೆಚ್.ಬಿ. ನಾಗಪ್ಪ, ಸಂಘಟನಾ ಕಾರ್ಯದರ್ಶಿಗಳಾಗಿ ಶನಿವಾರಸಂತೆ ಪಾಪಣ್ಣ, ಮಡಿಕೇರಿಯ ಸುಖೇಶ್ ಚಂಗಪ್ಪ, ಬೆಟ್ಟಗೇರಿಯ ಅಬ್ದುಲ್ಲ, ಬಾಳೆಲೆ ವಿನೇಶ್, ಸಿದ್ದಲಿಂಗಪುರ ಕೋಟಿರಾಮಣ್ಣ, ಮೈತಾಡಿ ಬಾಳೆಕುಟ್ಟಿರ ದಿನಿ, ಮಹ್ಮದ್ ಹನೀಫ್, ಖಜಾಂಚಿಯಾಗಿ ಚೆಟ್ಟಳ್ಳಿಯ ಡೆನ್ನಿಬರೋಸ್ ನೇಮಕಗೊಂಡಿದ್ದಾರೆ.

ಕಾರ್ಯಕಾರಿ ಸಮಿತಿಯ ಸದಸ್ಯರುಗಳಾಗಿ ಸೋಮವಾರಪೇಟೆಯ ರಾಜೇಶ್, ಎಂ.ಟಿ. ಮಂದಣ್ಣ, ಶನಿವಾರಸಂತೆಯ ಮುತ್ತಯ್ಯಗೌಡ್ರು, ರಾಜಪ್ಪ, ಮಾದಪುರದ ಮುಸ್ತಫ ಸೀದಿ, ಗೌಡಳ್ಳಿಯ ಕೂಗೂರು ಕುಮಾರಪ್ಪ, ಕುಶಾಲನಗರದ ಕಮಲಗಣಪತಿ, ಎಸ್.ಬಿ. ನಂದಕುಮಾರ್, ಶುಂಠಿಕೊಪ್ಪದ ಕರೀಂ, ಸೋಮವಾರಪೇಟೆಯ ಜಾನಕಿ ವೆಂಕಟರಾಮ್, ಕಾಕೋಟುಪರಂಬು ಪಂದ್ಯಂಡ ರವಿ, ಚೆನ್ನಂಗಿ ಜಯಮ್ಮ, ಪೊನ್ನಂಪೇಟೆಯ ಕಳ್ಳಿಚಂಡ ನಟೇಶ್, ಅಜ್ಜಮಾಡ ಲವಕುಶಾಲಪ್ಪ, ವಾಟೇರಿರ ವೀರಾಜ್ ಅಪ್ಪಚ್ಚು, ಕೋಚಮಾಡ ಹರೀಶ್, ಮಡಿಕೇರಿ ತಾಲೂಕು ಅಧ್ಯಕ್ಷರಾಗಿ ಕುಟ್ಟನ ಸಂದೀಪ್, ಸೋಮವಾರಪೇಟೆ ಅಧ್ಯಕ್ಷರಾಗಿ ಕೆ.ಪಿ.ನಾಗರಾಜು, ವಿರಾಜಪೇಟೆ ಅಧ್ಯಕ್ಷರಾಗಿ ಹೆಚ್.ಎಸ್.ಮತೀನ್, ಕುಶಾಲನಗರ ಅಧ್ಯಕ್ಷರಾಗಿ ಸಿ.ಎಲ್.ವಿಶ್ವ ಹಾಗೂ ಪೊನ್ನಂಪೇಟೆ ಅಧ್ಯಕ್ಷರಾಗಿ ಕೋಳೆರ ದಯಾಚಂಗಪ್ಪ ಹಾಗೂ ಪರಿಶಿಷ್ಟಜಾತಿ ಘಟಕದ ಜಿಲ್ಲಾಧ್ಯಕ್ಷರಾಗಿ ಬಿ.ಡಿ.ಅಣ್ಣಯ್ಯ ಆಯ್ಕೆಯಾಗಿದ್ದಾರೆ ಎಂದು ಕೆ.ಎಂ.ಗಣೇಶ್ ಮಾಹಿತಿ ನೀಡಿದರು. 

ಭಿನ್ನಾಭಿಪ್ರಾಯವಿಲ್ಲ 

ಜಿಲ್ಲಾ ಜೆಡಿಎಸ್‍ನಲ್ಲಿ ಯಾವುದೇ ಗೊಂದಲಗಳಿಲ್ಲ, ಎಲ್ಲಾ ನಾಯಕರುಗಳು ಒಗ್ಗಟ್ಟಾಗಿ ಮೈತ್ರಿ ಅಭ್ಯರ್ಥಿಯ ಗೆಲುವಿಗಾಗಿ ಶ್ರಮಿಸುತ್ತಿದ್ದಾರೆ. ಹಿರಿಯ ನಾಯಕ ಬಿ.ಎ.ಜೀವಿಜಯ ಅವರನ್ನು ಜಿಲ್ಲಾ ಸಮಿತಿಯ ಪೋಷಕರನ್ನಾಗಿ ಆಯ್ಕೆ ಮಾಡಲಾಗಿದ್ದು, ದೂರವಾಣಿ ಮೂಲಕ ಸಂಪರ್ಕಿಸಿ ಸಹಕಾರ ಕೋರಲಾಗಿದೆ. ಸೂಕ್ತ ರೀತಿಯ ಭರವಸೆಯೂ ದೊರೆತ್ತಿದೆ ಎಂದು ಗಣೇಶ್ ಸ್ಪಷ್ಟಪಡಿಸಿದರು. ಪಕ್ಷದ ವರಿಷ್ಠರ ಆದೇಶಕ್ಕೆ ಪ್ರತಿಯೊಬ್ಬರು ಬದ್ಧರಾಗಿರುವುದು ಅನಿವಾರ್ಯವೆಂದು ತಿಳಿಸಿದರು.

ಪಕ್ಷದ ಗೌರವ ಅಧ್ಯಕ್ಷ ಸಂಕೇತ್ ಪೂವಯ್ಯ ಮಾತನಾಡಿ ಕೊಡಗು ಜಿಲ್ಲೆಗೆ ಕಾಫಿ ಬೆಳೆಗಾರರ ಕಣ್ಣೀರನ್ನು ಒರೆಸುವ ಸಂಸದರ ಅಗತ್ಯವಿದ್ದು, ನಿಷ್ಕ್ರಿಯ ಸಂಸದ ಪ್ರತಾಪ್ ಸಿಂಹ ಈ ಬಾರಿ ದೊಡ್ಡ ಅಂತರದಲ್ಲಿ ಸೋಲು ಅನುಭವಿಸಲಿದ್ದಾರೆ ಎಂದು ಭವಿಷ್ಯ ನುಡಿದರು. ನೂತನ ಜಿಲ್ಲಾಧ್ಯಕ್ಷ ಕೆ.ಎಂ.ಗಣೇಶ್ ಅವರು ಪಕ್ಷ ಸಂಘಟನೆಯನ್ನು ಚುರುಕುಗೊಳಿಸಿದ್ದು, ಅಲ್ಪಾವಧಿಯಲ್ಲೇ ಪಕ್ಷವನ್ನು ಪುನರ್ ರಚಿಸುವ ಮೂಲಕ ಬಲವರ್ಧನೆಗೆ ಕ್ರಮ ಕೈಗೊಂಡಿರುವುದು ಸ್ವಾಗತಾರ್ಹವೆಂದರು.

ಸುದ್ದಿಗೋಷ್ಠಿಯಲ್ಲಿ ರಾಜ್ಯ ಸಂಘಟನಾ ಕಾರ್ಯದರ್ಶಿ ಸಿ.ವಿ.ನಾಗೇಶ್, ಪ್ರಧಾನ ಕಾರ್ಯದರ್ಶಿ ಮನ್ಸೂರ್ ಆಲಿ, ಉಪಾಧ್ಯಕ್ಷರುಗಳಾದ ಪಾಣತ್ತಲೆ ವಿಶ್ವನಾಥ್ ಹಾಗೂ ಕೊಂಡಂಗೇರಿ ಯೂಸುಫ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News