ನೀತಿ ಸಂಹಿತೆ ಉಲ್ಲಂಘನೆ: 60.22 ಕೋಟಿ ರೂ. ಮೌಲ್ಯದ ನಗದು, ಮದ್ಯ ವಶ

Update: 2019-04-05 16:20 GMT
ಸಾಂದರ್ಭಿಕ ಚಿತ್ರ

ಬೆಂಗಳೂರು, ಎ.5: ಚುನಾವಣಾ ನೀತಿ ಸಂಹಿತೆ ಉಲ್ಲಂಘಿಸಿದ ವ್ಯಕ್ತಿಗಳು, ಗುಂಪುಗಳ ಮೇಲೆ ಫ್ಲೈಯಿಂಗ್ ಸ್ಕ್ವಾಡ್, ಸ್ಪಾಟಿಕ್ ಸರ್ವೆಲೆನ್ಸ್ ಸ್ಕ್ವಾಡ್‌ಗಳು ಹಾಗೂ ಅಂಬಕಾರಿ ಅಧಿಕಾರಿಗಳು ದಾಳಿ ನಡೆಸಿ ಒಟ್ಟು 60.22 ಕೋಟಿ ರೂ. ಮೌಲ್ಯದ ನಗದು, ಮದ್ಯ, ಮಾದಕ ದ್ರವ್ಯಗಳನ್ನು ವಶಪಡಿಸಿಕೊಳ್ಳಲಾಗಿದೆ.

ಒಟ್ಟಾರೆ 95,416 ಶಸ್ತ್ರಾಸ್ತ್ರಗಳನ್ನು ಜಮೆ ಮಾಡಿಸಿಕೊಳ್ಳಲಾಗಿದೆ. 8 ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ. 8 ಶಸ್ತ್ರಾಸ್ತ್ರ ಪರವಾನಿಗೆಯನ್ನು ರದ್ದುಪಡಿಸಲಾಗಿದೆ. ಸಿಆರ್‌ಪಿಸಿ ಕಾಯ್ದೆಯಡಿ 43,004 ಪ್ರಕರಣಗಳನ್ನು ದಾಖಲಿಸಲಾಗಿದೆ. ಅವುಗಳಲ್ಲಿ 43,833 ವ್ಯಕ್ತಿಗಳಿಂದ ಮುಚ್ಚಳಿಕೆಯನ್ನು ಪಡೆಯಲಾಗಿದ್ದು, 35,600 ಜಾಮೀನು ರಹಿತ ವಾರೆಂಟ್‌ಗಳನ್ನು ಚುನಾವಣೆ ಘೋಷಣೆಯಾದ ದಿನಾಂಕದಿಂದ ಈವರೆಗೆ ಜಾರಿಗೊಳಿಸಲಾಗಿದೆ.

ಮಂಡ್ಯದಲ್ಲಿ ಪೊಲೀಸ್ ಇಲಾಖೆಯು 19.43 ಲಕ್ಷ ರೂ. ನಗದನ್ನು ವಶಪಡಿಸಿಕೊಂಡಿದೆ. ಶಿವಮೊಗ್ಗದಲ್ಲಿ ಆದಾಯ ತೆರಿಗೆ ಇಲಾಖೆಯು 6.04 ಕೋಟಿ ರೂ.ನಗದನ್ನು ಡಿ.ಟಿ.ಪರಮೇಶ್, ಪ್ರೊಪ್ರೈಟರ್, ಮೆ. ಶ್ರುತಿ ಮೋಟಾರ್ಸ್‌, ಶಂಕರಮಠ ರಸ್ತೆ, ಶಿವಮೊಗ್ಗ ಇವರಿಂದ ವಶಪಡಿಸಿಕೊಂಡಿದೆ. ಬೆಂಗಳೂರು ನಗರ ಜಿಲ್ಲೆಯಲ್ಲಿ ಆದಾಯ ತೆರಿಗೆ ಇಲಾಖೆಯು 26 ಲಕ್ಷ ರೂ. ನಗದನ್ನು ನಾಗೇಶ್‌ರೆಡ್ಡಿಯಿಂದ ವಶಪಡಿಸಿಕೊಂಡಿದ್ದು, ತನಿಖೆ ಪ್ರಗತಿಯಲ್ಲಿದೆ. ಬೆಂಗಳೂರು ಗ್ರಾಮಾಂತರದಲ್ಲಿ ಆದಾಯ ತೆರಿಗೆ ಇಲಾಖೆಯು 31 ಲಕ್ಷ ರೂ. ನಗದನ್ನು ವಿ.ಶ್ರೀಧರ್, ಹೊಸಕೋಟೆ ಇವರಿಂದ ವಶಪಡಿಸಿಕೊಂಡಿದ್ದು, ತನಿಖೆ ಪ್ರಗತಿಯಲ್ಲಿದೆ ಎಂದು ಚುನಾವಣಾ ಆಯೋಗ ಪ್ರಕಟನೆಯಲ್ಲಿ ತಿಳಿಸಿದೆ.

ಮತದಾರರ ಸಹಾಯವಾಣಿ ಮೂಲಕ ಸ್ವೀಕರಿಸಲಾದ 63,580 ಕರೆಗಳಲ್ಲಿ 55,816 ಸಾರ್ವಜನಿಕರು ಮಾಹಿತಿ ಕೋರಿದ್ದಾರೆ. 446 ಜನರು ಹಿಮ್ಮಾಹಿತಿ(ಫೀಡ್‌ಬ್ಯಾಕ್) ನೀಡಿದ್ದಾರೆ. 3762 ಸಲಹೆಗಳನ್ನು ನೀಡಿದ್ದಾರೆ. ಮತ್ತು 3556 ದೂರುಗಳನ್ನು ದಾಖಲಿಸಿದ್ದಾರೆ. ಎಲ್ಲ 63,156 ಕರೆಗಳನ್ನು ಇತ್ಯರ್ಥ ಪಡಿಸಲಾಗಿದೆ.

ಸಿ.ವಿಜಿಲ್ ಅಪ್ಲಿಕೇಶನ್ ಮೂಲಕ 1,405 ಸ್ವೀಕರಿಸಲಾಗಿದೆ. ಇದರಲ್ಲಿ ಅನುಮತಿ ಇಲ್ಲದೆ ಪೋಸ್ಟರ್, ಬ್ಯಾನರ್, ಹಣಹಂಚಿಕೆ, ಕಾಸಿಗಾಗಿ ಸುದ್ದಿ, ಉಡುಗೊರೆ, ಕೂಪನ್ ಹಂಚಿಕೆ, ಮದ್ಯ ಹಂಚಿಕೆ, ಸಾರ್ವಜನಿಕ ಸೊತ್ತುಗಳ ಅಂದಗೆಡಿಸುವಿಕೆ, ಅನುಮತಿರಹಿತ ವಾಹನ ಅಥವಾ ಬೆಂಗಾವಲು ವಾಹನಗಳು, ಇವು ಪ್ರಮುಖ ದೂರುಗಳಾಗಿವೆ. ಸುವಿಧಾ ಮೂಲಕ ಅನುಮತಿಗಾಗಿ ಸ್ವೀಕರಿಸಲಾದ 3053 ಅರ್ಜಿಗಳಲ್ಲಿ 2551 ಅರ್ಜಿಗಳಿಗೆ ಅನುಮತಿ ನೀಡಲಾಗಿದೆ. ಅವುಗಳಲ್ಲಿ 211 ಅರ್ಜಿಗಳು ನಿಗದಿತ ಅವಧಿಯೊಳಗೆ ಪ್ರಗತಿಯಲ್ಲಿದ್ದು, 291 ಅರ್ಜಿಗಳನ್ನು ತಿರಸ್ಕರಿಸಲಾಗಿದೆ ಎಂದು ಪ್ರಕಟನೆಯಲ್ಲಿ ತಿಳಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News