ಎ.10ರಿಂದ ಎಸೆಸೆಲ್ಸಿ ಮೌಲ್ಯಮಾಪನ

Update: 2019-04-05 16:23 GMT

ಬೆಂಗಳೂರು, ಎ.5: ಎಸೆಸೆಲ್ಸಿ ಮೌಲ್ಯಮಾಪನವು ಎ.10ರಿಂದ ಪ್ರಾರಂಭವಾಗಲಿದ್ದು, ಸುಮಾರು 72 ಸಾವಿರ ಶಿಕ್ಷಕರು ಮೌಲ್ಯಮಾಪನ ಕಾರ್ಯದಲ್ಲಿ ಭಾಗವಹಿಸಲಿದ್ದಾರೆ. ಶೀಘ್ರವಾಗಿಯೆ ಮೌಲ್ಯಮಾಪನ ಮುಗಿಸಲು ನಿರ್ಧರಿಸಲಾಗಿದೆ ಎಂದು ಕರ್ನಾಟಕ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿಯ ನಿರ್ದೇಶಕಿ ವಿ.ಸುಮಂಗಲಾ ಮಾಹಿತಿ ನೀಡಿದ್ದಾರೆ. 

ಮೌಲ್ಯಮಾಪನ ಕಾರ್ಯಕ್ಕೆ ಆದೇಶ ಕಳಿಸಿರುವ 72 ಸಾವಿರ ಮೌಲ್ಯಮಾಪಕರ ಪೈಕಿ ಕೆಲವರನ್ನು ಚುನಾವಣಾ ಕಾರ್ಯಕ್ಕೂ ಬಳಸಿಕೊಳ್ಳಲಾಗುತ್ತಿದೆ. ಇದರಿಂದ ಕರ್ತವ್ಯಕ್ಕೆ ಹಾಜರಾದ ನಂತರವೆ ನಿರ್ದಿಷ್ಟವಾಗಿ ಎಷ್ಟು ಮಂದಿ ಮೌಲ್ಯಮಾಪನ ಕಾರ್ಯದಲ್ಲಿ ಭಾಗಿಯಾಗಲಿದ್ದಾರೆ ಎಂಬುದು ಗೊತ್ತಾಗಲಿದೆ. ಮೌಲ್ಯಮಾಪನ ಪ್ರಕ್ರಿಯೆ ಮುಗಿಸಿ ಶೀಘ್ರ ಫಲಿತಾಂಶ ಪ್ರಕಟಿಸುವ ನಿಟ್ಟಿನಲ್ಲಿ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿ ಕಾರ್ಯೋನ್ಮುಖವಾಗಿದೆ ಎಂದು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News