ನಾಶವಾದ ಜೀವಗಳಿಗಾಗಿ ಕ್ಷಮೆ ಕೋರುತ್ತೇವೆ: ಬೋಯಿಂಗ್ ಮುಖ್ಯಸ್ಥ

Update: 2019-04-05 17:15 GMT

ವಾಶಿಂಗ್ಟನ್, ಎ. 5: ಇಂಡೋನೇಶ್ಯ ಮತ್ತು ಇಥಿಯೋಪಿಯಗಳಲ್ಲಿ ಸಂಭವಿಸಿದ ಎರಡು ಬೋಯಿಂಗ್ 737 ಮ್ಯಾಕ್ಸ್ 8 ವಿಮಾನ ಅಪಘಾತಗಳಲ್ಲಿ 346 ಜನರು ಮೃತಪಟ್ಟಿರುವುದಕ್ಕಾಗಿ ಅಮೆರಿಕದ ವಿಮಾನ ನಿರ್ಮಾಣ ಕಂಪೆನಿ ಬೋಯಿಂಗ್‌ನ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ (ಸಿಇಒ) ಡೆನಿಸ್ ಮೂಲನ್‌ಬರ್ಗ್ ಕ್ಷಮೆ ಕೋರಿದ್ದಾರೆ.

‘‘ಇತ್ತೀಚೆಗೆ ಸಂಭವಿಸಿದ 737 ಮ್ಯಾಕ್ಸ್ ವಿಮಾನ ಅಪಘಾತಗಳಲ್ಲಿ ಪ್ರಾಣ ಕಳೆದುಕೊಂಡ ಜನರಿಗಾಗಿ ಬೋಯಿಂಗ್‌ನಲ್ಲಿರುವ ನಾವು ಕ್ಷಮೆ ಕೋರುತ್ತೇವೆ. ಈ ದುರಂತಗಳು ನಮ್ಮ ಹೃದಯ ಮತ್ತು ಮನಸ್ಸುಗಳಲ್ಲಿ ಯಾವತ್ತೂ ತುಂಬಿರುತ್ತವೆ. ಲಯನ್ ಏರ್ ಯಾನ 610 ಮತ್ತು ಇಥಿಯೋಪಿಯನ್ ಏರ್‌ಲೈನ್ಸ್ ಯಾನ 302ರ ಪ್ರಯಾಣಿಕರು ಮತ್ತು ಸಿಬ್ಬಂದಿಯ ಪ್ರೀತಿಪಾತ್ರರಿಗೆ ನಾವು ಸಹಾನುಭೂತಿ ವ್ಯಕ್ತಪಡಿಸುತ್ತೇವೆ’’ ಎಂದು ಬೋಯಿಂಗ್ ಬಿಡುಗಡೆ ಮಾಡಿದ ಪತ್ರವೊಂದರಲ್ಲಿ ಮೂಲನ್‌ಬರ್ಗ್ ಹೇಳಿದ್ದಾರೆ.

‘‘ನಮ್ಮ ಕಂಪೆನಿಯ ಎಲ್ಲರೂ ಈ ದುರಂತಗಳ ಗಂಭೀರತೆಯನ್ನು ಅರ್ಥಮಾಡಿಕೊಂಡಿದ್ದಾರೆ ಹಾಗೂ ಪ್ರೀತಿಪಾತ್ರರನ್ನು ಕಳೆದುಕೊಂಡ ಜನರ ದುಃಖವನ್ನು ಅರಿತುಕೊಂಡಿದ್ದಾರೆ’’ ಎಂದು ಬೋಯಿಂಗ್ ಸಿಇಒ ನುಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News