ಬ್ರಿಟನ್: ಅಮಲ್ ಕ್ಲೂನಿ ‘ವಿಶೇಷ ಮಾಧ್ಯಮ ಸ್ವಾತಂತ್ರ್ಯ ರಾಯಭಾರಿ’

Update: 2019-04-05 17:30 GMT

ಲಂಡನ್, ಎ. 5: ಪ್ರಖ್ಯಾತ ಮಾನವಹಕ್ಕುಗಳ ಹೋರಾಟಗಾರ್ತಿ ಅಮಲ್ ಕ್ಲೂನಿಯನ್ನು ಬ್ರಿಟಿಶ್ ವಿದೇಶ ಕಾರ್ಯದರ್ಶಿ ಜೆರೆಮಿ ಹಂಟ್ ಶುಕ್ರವಾರ ‘ಮಾಧ್ಯಮ ಸ್ವಾತಂತ್ರ್ಯದ ವಿಶೇಷ ರಾಯಭಾರಿ’ಯಾಗಿ ನೇಮಿಸಿದ್ದಾರೆ.

ಪತ್ರಕರ್ತರು ಕೆಲಸ ಮಾಡದಂತೆ ತಡೆಯುವುದಕ್ಕಾಗಿ ವಿವಿಧ ದೇಶಗಳಲ್ಲಿ ರೂಪಿಸಲಾಗುವ ಕಠೋರ ಕಾನೂನುಗಳನ್ನು ಎದುರಿಸವು ಕಾನೂನು ಪರಿಣತರ ಸಮಿತಿಯ ಸಹ ಅಧ್ಯಕ್ಷೆಯಾಗಿ ಅವರು ಕೆಲಸ ಮಾಡಲಿದ್ದಾರೆ.

2018 ಪತ್ರಕರ್ತರಿಗೆ ಅತ್ಯಂತ ಮಾರಕ ವರ್ಷ ಎಂಬುದಾಗಿ ವಿದೇಶ ಕಚೇರಿ ಹೇಳಿದೆ. ಈ ವರ್ಷ 99 ಪತ್ರಕರ್ತರನ್ನು ಕೊಲ್ಲಲಾಗಿದೆ, 348 ಮಂದಿಯನ್ನು ಬಂಧಿಸಲಾಗಿದೆ ಹಾಗೂ ಸರಕಾರೇತರ (ನಾನ್-ಸ್ಟೇಟ್ ಗುಂಪುಗಳು) ಗುಂಪುಗಳು 60 ಮಂದಿಯನ್ನು ಒತ್ತೆಸೆರೆಯಲ್ಲಿಟ್ಟಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News