ವಿದ್ಯಾರ್ಥಿವೇತನಕ್ಕೆ ಅರ್ಜಿ ಆಹ್ವಾನ

Update: 2019-04-05 18:34 GMT

ವಿದ್ಯಾರ್ಥಿವೇತನ

(ಸಂಶೋಧನಾ ಮಟ್ಟ):
ವಿದ್ಯಾರ್ಥಿವೇತನ: ಗೂಗಲ್ ಭಾರತ ಪಿಎಚ್‌ಡಿ ವಿದ್ಯಾರ್ಥಿವೇತನ 2019

ವಿವರ: ಕಂಪ್ಯೂಟರ್ ಸೈನ್ಸ್ ಮತ್ತು ಸಂಬಂಧಿತ ವಿಷಯಗಳಲ್ಲಿ ಸ್ನಾತಕೋತ್ತರ ಪದವಿ ಹೊಂದಿರುವವರಿಗೆ ಗೂಗಲ್ ಇಂಡಿಯಾ ವಿದ್ಯಾರ್ಥಿವೇತನ ಘೋಷಿಸಿದೆ. ಈ ಬಹುವಾರ್ಷಿಕ ವಿದ್ಯಾರ್ಥಿ ವೇತನ ಗೂಗಲ್‌ನಲ್ಲಿ ಬೋಧನೆ, ಸಂಶೋಧನೆ ಮತ್ತು ಇಂಟರ್ನ್ ಶಿಪ್‌ಗೆ ಅವಕಾಶ ನೀಡುತ್ತದೆ.
ಅರ್ಹತೆ: ಸ್ನಾತಕೋತ್ತರ ಪದವಿ ಹೊಂದಿದ್ದು ಭಾರತೀಯ ಸಂಸ್ಥೆಯಲ್ಲಿ ಪಿಎಚ್‌ಡಿಗೆ ಅರ್ಜಿ ಹಾಕಿರುವ ಜೊತೆಗೆ ಭಾರತೀಯ ಸಂಸ್ಥೆಯಲ್ಲಿ ಉದ್ಯೋಗಿಯಾಗಿರುವವರು ಈ ವಿದ್ಯಾರ್ಥಿವೇತನಕ್ಕೆ ಅರ್ಜಿ ಹಾಕಬಹುದು.
ನೆರವು: ಆಯ್ದ ಅಭ್ಯರ್ಥಿಗಳಿಗೆ ಮಾಸಿಕ ವಿದ್ಯಾರ್ಥಿವೇತನ, ತುರ್ತು ವೆಚ್ಚ ಮತ್ತು ಪ್ರಯಾಣ ವೆಚ್ಚ ಸೇರಿದಂತೆ ಗರಿಷ್ಠ ನಾಲ್ಕು ವರ್ಷದ ಅವಧಿಗೆ 50,000 ಡಾಲರ್ (34,55,000ರೂ.) ನೀಡಲಾಗುವುದು.
ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ: ಎಪ್ರಿಲ್ 13, 2019
ಅರ್ಜಿ: ಅರ್ಜಿಗಳನ್ನು ಆನ್‌ಲೈನ್ ಮೂಲಕ ಹಾಕಬೇಕು.
ಜಾಲತಾಣ: http://www.b4s.in/bharati/GPF2

****************

ವಿದ್ಯಾರ್ಥಿವೇತನ
(ಪ್ರತಿಭೆ ಆಧಾರಿತ):
ಸೈನ್ಸ್ ವಿದೌಟ್ ಬಾರ್ಡರ್ಸ್ ಚಾಲೆಂಜ್ 2019

ವಿವರ: ಸಮುದ್ರ ಮತ್ತು ಸಾಗರಜೀವಿಗಳ ರಕ್ಷಣೆಯ ಬಗ್ಗೆ ಸಾರ್ವಜನಿಕ ರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಖಾಲಿದ್ ಬಿನ್ ಸುಲ್ತಾನ್ ಲಿವಿಂಗ್ ಓಸಿಯನ್ಸ್ಸ್ ಪ್ರತಿಷ್ಠಾನ ಶಾಲಾ ಮಕ್ಕಳಿಗಾಗಿ ಅಂತರ್ ರಾಷ್ಟ್ರೀಯ ಚಿತ್ರಕಲಾ ಸ್ಪರ್ಧೆಯನ್ನು ಆಯೋಜಿಸಿದೆ. ಈ ಪ್ರತಿಭಾ ಸ್ಪರ್ಧೆಯಲ್ಲಿ ಮಕ್ಕಳು ಚಿತ್ರಿಸಿದ ಚಿತ್ರಗಳ ವೌಲ್ಯಮಾಪನದ ಆಧಾರದಲ್ಲಿ ಉಡುಗೊರೆಗಳನ್ನು ಗೆಲ್ಲುವ ಅವಕಾಶವಿದೆ.
ಅರ್ಹತೆ: ಯಾವುದೇ ದೇಶದ ಪ್ರಾಥಮಿಕ ಅಥವಾ ಪ್ರೌಢ ಶಿಕ್ಷಣ ಪಡೆಯುತ್ತಿರುವ ನೋಂದಾಯಿಸಿಕೊಂಡಿರುವ 11ರಿಂದ 19ರ ವಯಸ್ಸಿನ ಮಕ್ಕಳು ಈ ಸ್ಪರ್ಧೆಯಲ್ಲಿ ಭಾಗವಹಿಸಬಹುದು.
ನೆರವು: ಪ್ರಥಮ ಬಹುಮಾನವಾಗಿ 500 ಡಾಲರ್ (34,550ರೂ.) ಹಾಗೂ ಎರಡನೇ ಮತ್ತು ಮೂರನೇ ಬಹುಮಾನ ಕ್ರಮವಾಗಿ 350 (24,000ರೂ.) ಮತ್ತು 250 (17,000ರೂ.) ಡಾಲರ್ ಬಹುಮಾನ ನೀಡಲಾಗುವುದು.
ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ: ಎಪ್ರಿಲ್ 22, 2019
ಅರ್ಜಿ: ಅರ್ಜಿಗಳನ್ನು ಆಫ್‌ಲೈನ್‌ನಲ್ಲಿ ಸಲ್ಲಿಸತಕ್ಕದ್ದು.
ಜಾಲತಾಣ: http://www.b4s.in/bharati/SWB5

****************
ವಿದ್ಯಾರ್ಥಿವೇತನ
(ಅರ್ಹತೆ ಆಧಾರಿತ):
ಜಿಐಐಡಿಎಇ ಅಂತರ್‌ರಾಷ್ಟ್ರೀಯ ವಿದ್ಯಾರ್ಥಿ ವೇತನ 2019

ವಿವರ: ಅಂತರ್‌ರಾಷ್ಟ್ರೀಯ ಅಭಿವೃದ್ಧಿ, ಕೃಷಿ ಅಥವಾ ಆನ್ವಯಿಕ ಅರ್ಥಶಾಸ್ತ್ರದಲ್ಲಿ ಸ್ನಾತಕೋತರ ಪದವಿ ಪಡೆಯುತ್ತಿರುವ ವಿದ್ಯಾರ್ಥಿಗಳಿಗಾಗಿ ರೀಡಿಂಗ್, ಗ್ರಾಜುವೇಟ್ ಇನ್‌ಸ್ಟಿಟ್ಯೂಟ್ ಆಫ್ ಇಂಟರ್‌ನ್ಯಾಶನಲ್ ಡೆವಲಪ್ಮೆಂಟ್, ಕೃಷಿ ಮತ್ತು ಅರ್ಥಶಾಸ್ತ್ರ (ಜಿಐಐಡಿಎಇ) ವಿದ್ಯಾರ್ಥಿವೇತನ ನೀಡುತ್ತಿದೆ.
ಅರ್ಹತೆ: ಜಿಐಐಡಿಎಇಯಲ್ಲಿ ಆಯ್ದ ಮಾಸ್ಟರ್ಸ್ ಪದವಿಗೆ ಅರ್ಜಿ ಹಾಕಿರುವ ಮತ್ತು ಭಾಷಾ ಪ್ರಾವೀಣ್ಯ ಪರೀಕ್ಷೆ ಗಳಲ್ಲಿ ಅಗತ್ಯ ನಿರ್ವಹಣೆ ತೋರಿರುವ ಭಾರತೀಯ ನಾಗರಿಕರು ಈ ವಿದ್ಯಾರ್ಥಿವೇತನಕ್ಕೆ ಅರ್ಜಿ ಹಾಕಬಹುದು.

ನೆರವು: ಆಯ್ದ ಅಭ್ಯರ್ಥಿಗಳಿಗೆ ಜಿಐಐಡಿಎಇಯಲ್ಲಿ ಮಾಸ್ಟರ್ಸ್ ಪದವಿ ಪಡೆಯಲು 3,000 ಪೌಂಡ್ (2,70,000ರೂ.) ನೀಡಲಾಗುವುದು.
ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ: ಎಪ್ರಿಲ್ 23, 2019
ಅರ್ಜಿ: ಅರ್ಜಿಗಳನ್ನು ಆನ್‌ಲೈನ್ ಮೂಲಕ ಸಲ್ಲಿಸಬೇಕು.
ಜಾಲತಾಣ:  http://www.b4s.in/bharati/GIS1

****************
ವಿದ್ಯಾರ್ಥಿವೇತನ
(ಸಂಶೋಧನಾ ಮಟ್ಟ):
ಎನ್‌ಎಡಬ್ಲೂಎ ಉಲಮ್ ಕಾರ್ಯಕ್ರಮ, ಪೋಲೆಂಡ್ 2019

ವಿವರ: ಪೋಲೆಂಡ್‌ನ ನ್ಯಾಶನಲ್ ಏಜೆನ್ಸಿ ಫೋರ್ ಅಕಾಡಮಿಕ್ ಎಕ್ಸ್‌ಚೇಂಜ್ (NAWA) ಡಾಕ್ಟರೇಟ್ ಪದವಿ ಹೊಂದಿರುವ ವಿಜ್ಞಾನಿಗಳಿಗೆ, ಪೋಲೆಂಡ್ ವಿಶ್ವವಿದ್ಯಾನಿಲಯಗಳ ವಿಜ್ಞಾನಿ ಸಮುದಾಯ ಮತ್ತು ಅಂತರ್‌ರಾಷ್ಟ್ರೀಯ ಸಂಸ್ಥೆಗಳ ಮಧ್ಯೆ ಸಮನ್ವಯತೆಯನ್ನು ಹೆಚ್ಚಿಸುವ ಉದ್ದೇಶದಿಂದ, ಅಂತರ್‌ರಾಷ್ಟ್ರೀಯ ಜೊತೆಗಾರ ಸಂಸ್ಥೆಗಳಲ್ಲಿ ಡಾಕ್ಟರೇಟ್‌ನಂತರದ ಸಂಶೋಧನೆಗಳನ್ನು ನಡೆಸಲು ವಿದ್ಯಾರ್ಥಿವೇತನ ನೀಡುತ್ತಿದೆ.
ಅರ್ಹತೆ: ಯಾವುದೇ ಕ್ಷೇತ್ರದಲ್ಲಿ ಡಾಕ್ಟರೇಟ್ ಪದವಿ ಹೊಂದಿರುವ, ಉದ್ಯೋಗಸ್ಥ ಅಥವಾ ಯೋಜಕರು ವಿಧಿಸಿರುವ ಮಾರ್ಗಸೂಚಿಗಳಂತೆ ವಿಶ್ವಾಸನೀಯ ಸಂಶೋಧನಾ ಸಾಧನೆಗಳನ್ನು ಮಾಡಿದ್ದು ವಿದೇಶಿ ಸಂಸ್ಥೆಗಳಲ್ಲಿ ಸಂಶೋಧನಾ ಅಧ್ಯಯನಕ್ಕಾಗಿ ನಿರೀಕ್ಷಿಸುತ್ತಿರುವವರು ಈ ವಿದ್ಯಾರ್ಥಿವೇತನಕ್ಕೆ ಅರ್ಜಿ ಹಾಕಬಹುದು.
ನೆರವು: ವಿದೇಶಗಳಲ್ಲಿ ಸಂಶೋಧನಾ ಅಧ್ಯಯನ ನಡೆಸಲು ಭತ್ತೆ ಮತ್ತು 10,000 ಪಿಎಲ್‌ಎನ್ (1,80,000ರೂ.) ನೀಡಲಾಗುವುದು. ಆಯ್ಕೆಗೊಂಡ ಅಭ್ಯರ್ಥಿ ತನ್ನ ಜೊತೆ ಪತ್ನಿ ಮತ್ತು ಮಕ್ಕಳನ್ನು ಕರೆದೊಯ್ಯಲು ಬಯಸಿದರೆ ಹೆಚ್ಚುವರಿ ಅನುದಾನ ನೀಡಲಾಗುವುದು.
ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ: ಎಪ್ರಿಲ್ 23, 2019
ಅರ್ಜಿ: ಅರ್ಜಿಗಳನ್ನು ಆನ್‌ಲೈನ್ ಮೂಲಕ ಹಾಕಬೇಕು.
ಜಾಲತಾಣ:  http://www.b4s.in/bharati/NUP3
****************

ವಿದ್ಯಾರ್ಥಿವೇತನ
(ಅರ್ಹತೆ ಆಧಾರಿತ):
ಯುಪಿಇಎಸ್-ಡಿಎಟಿ ವಿನ್ಯಾಸ ಕೋರ್ಸ್ ಗಳ ವಿದ್ಯಾರ್ಥಿವೇತನ, ಯುಪಿಇಎಸ್ 2019

ವಿವರ: ಎಂ.ಡಿಇಎಸ್ ಮತ್ತು ಬಿ.ಡಿಇಎಸ್ ವ್ಯಾಸಂಗ ಮಾಡುತ್ತಿರುವ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪೆಟ್ರೋಲಿಯಂ ಮತ್ತು ಇಂಧನ ಅಧ್ಯಯನಗಳ ವಿಶ್ವವಿದ್ಯಾನಿಲಯ (ಯುಪಿಇಎಸ್) ವಿದ್ಯಾರ್ಥಿವೇತನ ಘೋಷಿಸಿದೆ.
 ಅರ್ಹತೆ: ಹಿಂದಿನ ಎಲ್ಲ ಸೆಮಿಸ್ಟರ್‌ಗಳಲ್ಲಿ ಕನಿಷ್ಠ 7.5 ಎಸ್‌ಜಿಪಿಎ/ಸಿಜಿಪಿಎ ಪಡೆದಿರುವ ಎಂ.ಡಿಇಎಸ್ ವಿದ್ಯಾರ್ಥಿಗಳು ಮತ್ತು ಸಿಬಿಎಸ್‌ಇ, ಐಸಿಎಸ್‌ಇ ಅಥವಾ ಪರಿಗಣಿತ ರಾಜ್ಯ ಶಿಕ್ಷಣ ಮಂಡಳಿಗಳಲ್ಲಿ 10ನೇ ಅಥವಾ 12ನೇ ತರಗತಿಯಲ್ಲಿ ಕನಿಷ್ಠ ಶೇ.80 ಅಂಕ ಪಡೆದಿರುವ ಬಿ.ಡಿಇಎಸ್ ವಿದ್ಯಾರ್ಥಿಗಳು ಈ ವಿದ್ಯಾರ್ಥಿವೇತನಕ್ಕೆ ಅರ್ಜಿ ಹಾಕಬಹುದು.
ನೆರವು: ಎಂ.ಡಿಇಎಸ್ ಅರ್ಜಿದಾರರಿಗೆ ಸಹಾಯಕ ಶಿಕ್ಷಕ ವೇತನ ಜೊತೆಗೆ ಮಾಸಿಕ 3,000ರೂ. ಹಾಗೂ ಬಿ.ಡಿಇಎಸ್ ಅರ್ಜಿದಾರರಿಗೆ ಟ್ಯೂಶನ್ ಶುಲ್ಕದ ಶೇ.50 ನೀಡಲಾಗುವುದು.
ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ: ಎಪ್ರಿಲ್ 25, 2019
ಅರ್ಜಿ: ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು.
ಜಾಲತಾಣ: http://www.b4s.in/bharati/UAD1

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News