ಲೋಕಸಭಾ ಚುನಾವಣೆ: ಅರುಣಾಚಲ ಪ್ರದೇಶದಲ್ಲಿ ಮೊದಲ ಮತದಾನ

Update: 2019-04-06 11:58 GMT

ಹೊಸದಿಲ್ಲಿ, ಎ.6: ಇಂಡೋ-ಟಿಬೆಟಿಯನ್ ಬಾರ್ಡರ್ ಪೊಲೀಸ್(ಐಟಿಬಿಪಿ)ಎಟಿಎಸ್ ಮುಖ್ಯಸ್ಥ ಡಿಐಜಿ ಸುಧಾಕರ ನಟರಾಜನ್ ಅರುಣಾಚಲ ಪ್ರದೇಶದಿಂದ ಈ ವರ್ಷದ ಲೋಕಸಭಾ ಚುನಾವಣೆಯ ಮೊದಲ ಮತ ಚಲಾಯಿಸಿದ್ದಾರೆ.

ಲೋಕಸಭಾ ಚುನಾವಣೆಯ ಮೊದಲ ಹಂತ ಎ.11ರಂದು ಆರಂಭವಾಗಲಿದ್ದು, ಏಳು ಹಂತಗಳಲ್ಲಿ ನಡೆಯಲಿರುವ ಚುನಾವಣೆಯು ಮೇ 19ರಂದು ಕೊನೆಗೊಳ್ಳಲಿದೆ. ಮೇ 23 ರಂದು ಫಲಿತಾಂಶ ಪ್ರಕಟವಾಗಲಿದೆ. ಚುನಾವಣೆಗೆ ಐದು ದಿನಗಳಿಗಿಂತ ಮೊದಲು ಶುಕ್ರವಾರ ಬೆಳಗ್ಗೆ 10 ಗಂಟೆಗೆ ಸರ್ವಿಸ್ ವೋಟರ್‌ಗಳು ತಮ್ಮ ಮತಗಳನ್ನು ಚಲಾಯಿಸಲು ಆರಂಭಿಸಿದ್ದಾರೆ.

ಈ ಬಾರಿಯ ಚುನಾವಣೆಯಲ್ಲಿ ಸುಮಾರು 30 ಲಕ್ಷ ಸರ್ವಿಸ್ ವೋಟರ್‌ಗಳು ತಮ್ಮ ಮತ ಚಲಾಯಿಸಲಿದ್ದಾರೆ. ಅಸ್ಸಾಂ ರೈಫಲ್ಸ್, ಸಿಆರ್‌ಪಿಎಫ್, ಬಿಎಸ್‌ಎಫ್, ಐಟಿಬಿಎಫ್, ಜಿಆರ್‌ಇಎಫ್ ಸಹಿತ ಭಾರತದ ಸಶಸ್ತ್ರ ಪಡೆಯ ಯೋಧರು, ಭಾರತೀಯ ಸರಕಾರದ ಅಡಿಯಲ್ಲಿ ದೇಶದ ಹೊರಗಿರುವ ಅಥವಾ ರಾಜ್ಯದ ಹೊರಗೆ ಸೇವೆಯಲ್ಲಿರುವವರು ಸರ್ವಿಸ್ ವೋಟರ್ ಆಗಿರುತ್ತಾರೆ.

ದಿಲ್ಲಿಯಿಂದ 2600 ಕಿ.ಮೀ.ದೂರದಲ್ಲಿರುವ ಅರುಣಾಚಲ ಪ್ರದೇಶದ ಲೋಹಿತ್‌ಪುರ್‌ನ ಅನಿಮಲ್ ಟ್ರೈನಿಂಗ್ ಸ್ಕೂಲ್‌ನಲ್ಲಿ ಶುಕ್ರವಾರ ಬೆಳಗ್ಗೆ 10ಕ್ಕೆ ಐಟಿಬಿಪಿ ಎಟಿಎಸ್ ಮುಖ್ಯಸ್ಥ ಡಿಐಜಿ ಸುಧಾಕರ ನಟರಾಜನ್ ಮತ ಚಲಾಯಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News