ನಮ್ಮ ಸರಕಾರದ ಕಾರ್ಯನಿರ್ವಹಣೆ ಚೆನ್ನಾಗಿಲ್ಲದಿದ್ದರೆ ಬೇರೆಯವರು ಗೆಲ್ಲುತ್ತಾರೆ: ಗಡ್ಕರಿ

Update: 2019-04-06 10:35 GMT

ಹೊಸದಿಲ್ಲಿ, ಎ.6: “ಈ ಬಾರಿ ನಮ್ಮ ಆಡಳಿತದ ಪರೀಕ್ಷೆಯಾಗಿದೆ. ಕಳೆದ ಐದು ವರ್ಷಗಳಲ್ಲಿನ ಆಡಳಿತ ಪಕ್ಷದ ಕಾರ್ಯನಿರ್ವಹಣೆಯನ್ನು ಪರಾಮರ್ಶಿಸಬೇಕಿದೆ. ನಾವು ಚೆನ್ನಾಗಿ ನಿರ್ವಹಿಸಿಲ್ಲ ಎಂದು ಜನರು ಅಂದುಕೊಂಡರೆ ಇತರ ಪಕ್ಷಗಳಿಗೆ ಅವಕಾಶ ದೊರೆಯುತ್ತದೆ'' ಎಂದು ಕೇಂದ್ರ ಸಚಿವ ಹಾಗೂ ಹಿರಿಯ ಬಿಜೆಪಿ ನಾಯಕ ನಿತಿನ್ ಗಡ್ಕರಿ ಹೇಳಿದ್ದಾರೆ.

“ಈ ಬಾರಿ ನಮ್ಮ ಸರಕಾರಕ್ಕೆ ಪರೀಕ್ಷೆಯಾಗಿದೆ. 5 ವರ್ಷಗಳಲ್ಲಿ ಮಾಡಿದ ಕೆಲಸಗಳ ಆಧಾರದಲ್ಲಿ ಆಡಳಿತ ಪಕ್ಷವನ್ನು ವಿಶ್ಲೇಷಿಸಬೇಕು. ನಾವು ಚೆನ್ನಾಗಿ ಕೆಲಸ ನಿರ್ವಹಿಸಿಲ್ಲ ಎಂದಾದರೆ, ಬೇರೆಯವರಿಗೆ ಅವಕಾಶ ಸಿಗುತ್ತದೆ” ಎಂದವರು ಹೇಳಿದರು.

“ರಾಜಕೀಯ ಅಧಿಕಾರಕ್ಕಾಗಿ ಅಲ್ಲ, ರಾಜಕೀಯ ಸಮಾಜಕ್ಕಾಗಿ'' ಎಂದೂ ಗಡ್ಕರಿ ಹೇಳಿದರು. ``ನಾನು ಯಾವತ್ತೂ  ಜಾತಿ ರಾಜಕೀಯದಲ್ಲಿ ತೊಡಗಿಲ್ಲ. ನಾನು ಕಳೆದ ಐದು ವರ್ಷಗಳಲ್ಲಿ ಮಾಡಿದ್ದು ಟ್ರೈಲರ್ ಮಾತ್ರ, ಸಂಪೂರ್ಣ ಚಿತ್ರವನ್ನು ಇನ್ನಷ್ಟೇ ನೋಡಬೇಕಿದೆ ಎಂದು ಕೆಲವೊಮ್ಮೆ ಜನರಲ್ಲಿ ತಮಾಷೆ ಮಾಡುತ್ತೇನೆ'' ಎಂದು ಹೇಳಿದ ಗಡ್ಕರಿ ತಮಗೆ ಪ್ರಧಾನಿಯಾಗುವ ಆಸೆಯಿಲ್ಲ ಎಂದರು.

“ಸಿದ್ಧಾಂತಗಳ ಬಗ್ಗೆ ಭಿನ್ನಾಭಿಪ್ರಾಯಗಳಿರಬಹುದು. ಆದರೆ ಜನರ ನಡುವೆ ಭಿನ್ನಾಭಿಪ್ರಾಯಗಳಿರಬಾರದು, ಇದು ರಾಜಕೀಯ ಎದುರಾಳಿಗಳಿಗೂ ಅನ್ವಯವಾಗುತ್ತದೆ. ನಾವು ಸಮಾಜವಾದ್, ಸಮ್ಯವಾದ್, ಪುಂಜಿವಾದ್ (ಸಮಾಜವಾದ, ಸಮಾನತೆ ಹಾಗೂ ಬಂಡವಾಳಶಾಹಿ) ಮೇಲೆ ನಂಬಿಕೆಯಿರಿಸಿದ್ದೇವೆ. ಜನರು ಈ ಬಗ್ಗೆ ನಿರಾಸೆ ಹೊಂದಿದ್ದಾರೆ. ಆದರೆ ನಮ್ಮ ಪಕ್ಷ ರಾಷ್ಟ್ರವಾದ ಮತ್ತು ಉತ್ತಮ ಆಡಳಿತಕ್ಕಾಗಿ ಶ್ರಮಿಸುತ್ತಿದೆ'' ಎಂದು ಗಡ್ಕರಿ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News