ಆಸ್ಟ್ರೇಲಿಯದ ವಿಶ್ವಕಪ್ ಕಿಟ್ ಅನಾವರಣ

Update: 2019-04-10 02:44 GMT

ಮೆಲ್ಬೋರ್ನ್, ಎ.9: ಹಾಲಿ ಚಾಂಪಿಯನ್ ಆಸ್ಟ್ರೇಲಿಯ ಮಂಗಳವಾರ ತನ್ನ ವಿಶ್ವಕಪ್ ಕಿಟ್‌ನ್ನು ಅನಾವರಣಗೊಳಿಸಿತು. ಕ್ರೀಡಾ ಉಡುಪು ತಯಾರಕ ಕಂಪೆನಿ ಎಎಸ್‌ಐಸಿಎಸ್ ಕಿಟ್‌ಗಳನ್ನು ಉತ್ಪಾದಿಸಿದ್ದು, ಆಸೀಸ್‌ನ ಮಧ್ಯಮ ಕ್ರಮಾಂಕದ ದಾಂಡಿಗ ಗ್ಲೆನ್ ಮ್ಯಾಕ್ಸ್‌ವೆಲ್ ಧರಿಸಿದ್ದ ಹೊಸ ಜರ್ಸಿಯ ಫೋಟೊವನ್ನು ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಹಾಕಿದ್ದು, ವಿಶ್ವ ಶ್ರೇಷ್ಠ ತಂಡದ ಹೊಸ ಶರ್ಟ್‌ನ್ನು ಪರಿಚಯಿಸುತ್ತಿದ್ದೇವೆ. ವಿಶ್ವಕಪ್‌ಗೆ ದಿನಗಣನೆ ಆರಂಭವಾಗಿದೆ ಎಂದು ಇನ್‌ಸ್ಟಾಗ್ರಾಮ್‌ನಲ್ಲಿ ಬರೆಯಲಾಗಿದೆ.

 ಆಸ್ಟ್ರೇಲಿಯ ಆಟಗಾರರ ವಿಶ್ವಕಪ್ ಜರ್ಸಿ ಹಳದಿ ಹಾಗೂ ಹಸಿರು ಬಣ್ಣ ಮಿಶ್ರಿತವಾಗಿದೆ.

ಆಸ್ಟ್ರೇಲಿಯ ಜೂ.1 ರಂದು ಅಫ್ಘಾನಿಸ್ತಾನವನ್ನು ಎದುರಿಸುವ ಮೂಲಕ ತನ್ನ ವಿಶ್ವಕಪ್ ಅಭಿಯಾನ ಆರಂಭಿಸಲಿದೆ. 1992ರ ವಿಶ್ವಕಪ್‌ನ ಬಳಿಕ ಇದೇ ಮೊದಲ ಬಾರಿ ಟೂರ್ನಿಯು ರೌಂಡ್-ರಾಬಿನ್ ಮಾದರಿಯಲ್ಲಿ ನಡೆಯಲಿದೆ. ಅಗ್ರ ನಾಲ್ಕು ತಂಡಗಳು ಸೆಮಿ ಫೈನಲ್‌ಗೆ ತೇರ್ಗಡೆಯಾಗಲಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News