ಹನೂರು: ಪೊಲೀಸ್ ಇಲಾಖೆಗೆ ಸಾರ್ವಜನಿಕರು ಸಹಕಾರ ನೀಡಬೇಕು;ಡಿ.ವೈ.ಎಸ್.ಪಿ ಪುಟ್ಟಮಾದಯ್ಯ

Update: 2019-04-11 18:39 GMT

ಹನೂರು: ಗ್ರಾಮದ ಸಮುದಾಯಗಳ ಮುಖಂಡರುಗಳು ಕೋಮುಗಲಭೆಗೆ ಅವಕಾಶ ನೀಡದೆ ಶಾಂತಿ ಸೌಹಾರ್ದದಿಂದ ಪೊಲೀಸ್ ಇಲಾಖೆಗೆ ಸಾರ್ವಜನಿಕರು ಸಹಕಾರ ನೀಡಬೇಕು ಎಂದು ಡಿ.ವೈ.ಎಸ್.ಪಿ ಪುಟ್ಟಮಾದಯ್ಯರವರು ತಿಳಿಸಿದರು.

ಶಾಗ್ಯ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಎರಡು ಸಮುದಾಯದ ಮುಖಂಡರುಗಳ ಸಮ್ಮುಖದಲ್ಲಿ ನಡೆದ ಶಾಂತಿ ಸಭೆಯಲ್ಲಿ ಅವರು ಮಾತನಾಡಿದರು.
ಗ್ರಾಮದಲ್ಲಿ ಯಾವುದೇ ಕಾರಣಕ್ಕೂ ಸಮುದಾಯಗಳ ನಡುವೆ ದ್ವೇಷವನ್ನು ಉಂಟುಮಾಡುವಂತಹ, ಗಲಭೆಯನ್ನು ಸೃಷ್ಠಿಸುವಂತ ಚಟುವಟಿಕೆಗಳಿಗೆ ಭಾಗಿಯಾಗಬಾರದು ಮತ್ತು ಗಲಭೆಗೆ ಕುಮ್ಮಕ್ಕು ನೀಡಬಾರದು. ಗ್ರಾಮದಲ್ಲಿ ಎಲ್ಲಾ ಸಮುದಾಯದವರು ಒಗ್ಗೂಡಿ ಸೌಹಾರ್ದ, ಶಾಂತಿಯನ್ನು ಕಾಪಾಡಬೇಕು ಎಂದರು.

ಏನಾದರು ಅಹಿತಕರ ಘಟನೆ ಸಂಭವಿಸಿದರೆ ತಕ್ಷಣ ಸಂಬಂಧಪಟ್ಟ ಇಲಾಖೆಗೆ ಸೂಚಿಸಬೇಕು. ಸಾರ್ವತ್ರಿಕ ಲೋಕ ಸಭೆ ಚುನಾವಣೆ ಇರುವುದರಿಂದ ಚುನಾವಣೆಗೆ ಅಡ್ಡಿಯನ್ನುಂಟು ಮಾಡದೆ ಶಾಂತಿಯುತವಾಗಿ ಎಲ್ಲರೂ ಮತ ಚಲಾಯಿಸಿ ಎಂದರು.

ಸಾರ್ವನಿಕರು ಮಾಡಬಾರದು ಒಂದು ವೇಳೆ ಕಾನೂನು ಬಾಹಿರವಾಗಿ ನಡೆದುಕೊಂಡರೆ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.

ಹನೂರು ತಾಲ್ಲೂಕಿನ ತಹಶೀಲ್ಧಾರ್ ನಾಗರಾಜು ಮಾತನಾಡಿ ಚುನಾವಣೆ ಸಂದರ್ಭದಲ್ಲಿ ಗ್ರಾಮದಲ್ಲಿ ಎಲ್ಲಾ ಸಮುದಾಯದ ಮುಖಂಡರು ಶಾಂತಿಯುತವಾಗಿ ಮತದಾನ ಮಾಡಲು ಸಹಕರಿಸಬೇಕು ಎಂದು ತಿಳಿಸಿದರು.

ನಂತರ ಮಾತನಾಡಿದ ಹನೂರು ಪೊಲೀಸ್ ಠಾಣೆಯ ವೃತ್ತ ನಿರೀಕ್ಷಕರು ಮೋಹಿತ್ ಸಹದೇವ್, ಗ್ರಾಮದಲ್ಲಿ ಎರಡು ಸಮುದಾಯಗಳ ನಡುವೆ ನಡೆದ ಘಟನೆಯ ಬಗ್ಗೆ ಮಾಹಿತಿ ತಿಳಿದ ತಕ್ಷಣವೇ  ಗ್ರಾಮಕ್ಕೆ ಭೇಟಿ ನೀಡಿ ಘರ್ಷಣೆಗೆ ಮುಂದಾಗಿದ್ದ ಘಟನೆಯನ್ನು ತಡೆದು ಮುಂಜಾಗ್ರತಾ ಕ್ರಮವಾಗಿ ಪೊಲೀಸ್ ಬಂದೋಬಸ್ತ್ ಕಲ್ಪಿಸುವ ಮೂಲಕ ಗ್ರಾಮದ ಮುಖಂಡರುಗಳು ಸಹ ಪೊಲೀಸ್ ಇಲಾಖೆಗೆ ಸಹಕಾರ ನೀಡಿದ್ದಾರೆ. ಮುಂದೆ ಇಂತಹ  ಘಟನೆ ಮುರುಕಳಿಸದಂತೆ ಕ್ರಮವಹಿಸುವಂತೆ ತಿಳಿಸಿದರು.

ಇದೇ ಸಂದರ್ಭದಲ್ಲಿ ಪ್ರಭಾರ ಪಿಎಸ್‍ಐ ನವೀನ್ ಮುಖ್ಯಪೇದೆ ಸಿದ್ದೇಶ್, ವಿಶ್ವನಾಥ್, ಪೇದೆಗಳಾದ ಹರೀಶ್ ಗ್ರಾಮ ಲೆಕ್ಕಿಗರಾದ ಹೊಂಬೇಗೌಡ ಹಾಗೂ ಎರಡು ಸಮುದಾಯದ ಮುಖಂಡರು ಇದ್ದರು.
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News