ಅತ್ಯಾಚಾರ ಯತ್ನ ವಿಫಲಗೊಳಿಸಿದ ಮಹಿಳೆಗೆ ಬೆಂಕಿ ಹಚ್ಚಿದ ದುರುಳ

Update: 2019-04-13 16:01 GMT

ಗೋರಖ್‌ಪುರ(ಉ.ಪ್ರ),ಎ.13: ಕಾಮುಕನೋರ್ವ ತನ್ನ ಅತ್ಯಾಚಾರ ಯತ್ನವನ್ನು ವಿಫಲಗೊಳಿಸಿದ 33ರ ಹರೆಯದ ಮಹಿಳೆಯ ಮೈಗೆ ಬೆಂಕಿ ಹಚ್ಚಿ ಪರಾರಿಯಾಗಿರುವ ಘಟನೆ ಉತ್ತರ ಪ್ರದೇಶದ ದೇವರಿಯಾ ಜಿಲ್ಲೆಯ ಭಟ್ನಿ ಪ್ರದೇಶದ ಗ್ರಾಮದಲ್ಲಿ ಶನಿವಾರ ನಡೆದಿದೆ.

ಮಹಿಳೆ ನಸುಕಿನಲ್ಲಿ ಬಹಿರ್ದೆಶೆಗೆ ತೆರಳಿದ್ದಾಗ ಅದೇ ಗ್ರಾಮದ ನಿವಾಸಿ ಟಾರ್ಜಾನ್ ಎಂಬ ಯುವಕ ಆಕೆಯ ಮೇಲೆ ಅತ್ಯಾಚಾರವೆಸಗಲು ಪ್ರಯತ್ನಿಸಿದ್ದ ಎನ್ನಲಾಗಿದೆ. ಆದರೆ ಮಹಿಳೆ ಅದನ್ನು ವಿಫಲಗೊಳಿಸಿದಾಗ ಆತ ಆಕೆಯ ಮೈಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಪರಾರಿಯಾಗಿದ್ದಾನೆ ಎಂದು ಪೊಲೀಸರು ತಿಳಿಸಿದರು.

ಶೇ.85ರಷ್ಟು ಸುಟ್ಟ ಗಾಯಗಳಾಗಿರುವ ಮಹಿಳೆಯನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.

ಪ್ರಕರಣವನ್ನು ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಯ ಬಂಧನಕ್ಕಾಗಿ ವ್ಯಾಪಕ ಶೋಧ ಕಾರ್ಯಾಚರಣೆ ನಡೆಸುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News