ಕಂಬಾರ, ರಾಹುಲ್ ದ್ರಾವಿಡ್ ಚುನಾವಣಾ ರಾಯಭಾರಿಗಳಾಗಿ ನೇಮಕ

Update: 2019-04-13 16:42 GMT

ಬೆಂಗಳೂರು, ಎ.13: 2019ರ ಲೋಕಸಭಾ ಚುನಾವಣೆಯಲ್ಲಿ ಮತದಾನದ ಪ್ರಮಾಣ ಹೆಚ್ಚಿಸಲು ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿ ಚಂದ್ರಶೇಖರ ಕಂಬಾರ, ಕ್ರಿಕೆಟಿಗ ರಾಹುಲ್ ದ್ರಾವಿಡ್ ಸೇರಿದಂತೆ ದಿವ್ಯಾಂಗರನ್ನು ಹಲವು ಕ್ಷೇತ್ರದ ಕಲಾವಿದರನ್ನು ರಾಯಭಾರಿಯಾಗಿ ನೇಮಿಸಿಕೊಳ್ಳಲಾಗಿದೆ.

ಸಾರ್ವಜನಿಕ ಸ್ಥಳಗಳಲ್ಲಿ ಪೋಸ್ಟರ್, ಕರಪತ್ರ, ಬ್ಯಾನರ್‌ಗಳಲ್ಲಿ ಪ್ರಚಾರ ಫಲಕ, ವಿದ್ಯುತ್ ಬಿಲ್, ನೀರಿನ ಬಿಲ್, ತೆರಿಗೆ ಬಿಲ್‌ಗಳಲ್ಲಿ ಮತದಾನದ ಮಹತ್ವದ ಕುರಿತು ಪ್ರಚಾರ ಮಾಡುವುದು ಸೇರಿದಂತೆ ಹತ್ತು ಹಲವು ಕಾರ್ಯಕ್ರಮಗಳನ್ನು ಚುನಾವಣಾ ಆಯೋಗ ಹಮ್ಮಿಕೊಂಡಿದೆ. 2019 ಲೋಕಸಭಾ ಚುನಾವಣೆಗೆ 5 ರಾಷ್ಟ್ರಮಟ್ಟದ 39 ಜಿಲ್ಲಾಮಟ್ಟದ ರಾಯಭಾರಿಗಳನ್ನು ನಾಮಕರಣ ಮಾಡಲಾಗಿದೆ. ಇವರ ಸಂದೇಶಗಳನ್ನೊಳಗೊಂಡ ವಿಡಿಯೋ ತುಣುಕುಗಳು, ಭಾವಚಿತ್ರಗಳು ಸಂದೇಶಗಳನ್ನು ಜಾಹಿರಾತು ಫಲಕ, ಭಿತ್ತಿಪತ್ರಗಳು ಹಾಗೂ ಕರಪತ್ರಗಳ ಮೂಲಕ ಬಳಕೆ ಮಾಡಲಾಗುತ್ತಿದೆ.

ಚುನಾವಣೆಯ ಬಗ್ಗೆ ಅರಿವು ಮೂಡಿಸಲು ಇಸಿಐ ನಿರ್ಮಿಸಿದ ವಿಡಿಯೋ ತುಣುಕನ್ನು 7ದಿನಗಳ ಕಾಲ 700ಸಿನೆಮಾ ಹಾಲ್‌ಗಳಲ್ಲಿ ಪ್ರದರ್ಶಿಸಲಾಗಿದ್ದು, 9,75,600 ಜನರಿಗೆ ತಲುಪಿದೆ. 35,184 ಶಿಕ್ಷಣ ಸಂಸ್ಥೆಗಳಲ್ಲಿ ಪ್ರಬಂಧ ರಚನೆ, ಕಾಲೇಜು ಭಿತ್ತಿಪತ್ರ ರಚನೆ, ರಸಪ್ರಶ್ನೆ ಕಾರ್ಯಕ್ರಮಗನ್ನು ಆಯೋಜಿಸಲಾಗಿದೆ. 3,81,923 ವಿದ್ಯಾರ್ಥಿಗಳು ಮತ್ತು ಅಧ್ಯಾಪಕರು ಪಾಲ್ಗೊಂಡು ಮಾಹಿತಿ ಪಡೆದಿದ್ದಾರೆ. ಬುಡಕಟ್ಟು ಪ್ರದೇಶಗಳಲ್ಲಿ 39ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. ಈ ಬೂತ್‌ಗಳನ್ನು ಪಾರಂಪರಿಕ ಶೈಲಿಯಲ್ಲಿ ಆಲಂಕರಿಸಲು ನಿರ್ಧರಿಸಲಾಗಿದೆ ಹಾಗೂ ಬುಡಕಟ್ಟು ಜನಾಂಗದ ನಿರ್ದೇಶನಾಲಯದ ನೇತೃತ್ವದಲ್ಲಿ ಇದನ್ನು ಮಾಡಲಾಗುತ್ತಿದೆ. ರಾಜ್ಯಾದ್ಯಂತ 98 ದಿವ್ಯಾಂಗರ ಮತಗಟ್ಟೆಗಳನ್ನು ಸ್ಥಾಪಿಸಲಾಗುತ್ತಿದ್ದು, ಈ ಮತಗಟ್ಟೆಗಳನ್ನು ಪೂಣರ್ ದಿವ್ಯಾಂಗರೇ ನಿರ್ವಹಿಸುತ್ತಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News