ಮಂಡ್ಯದಲ್ಲಿ ಕಾಂಗ್ರೆಸ್ ಕಥೆ ಮುಗಿದಂತೆ: ಕುಮಾರ್ ಬಂಗಾರಪ್ಪ

Update: 2019-04-13 17:19 GMT

ಮಂಡ್ಯ, ಎ.13: ಜೆಡಿಎಸ್-ಕಾಂಗ್ರೆಸ್‍ನ ನಾಯಕರ ಮಟ್ಟದಿಂದ ಸ್ಥಳೀಯ ಕಾರ್ಯಕರ್ತರ ಮಟ್ಟದವರೆಗೂ ನಡುವೆ ಹೊಂದಾಣಿಕೆಯಿಲ್ಲ. ಮಂಡ್ಯದಲ್ಲಿ ಕಾಂಗ್ರೆಸ್‍ನ ಕಥೆ ಮುಗಿದಂತೆ ಸ್ಪಷ್ಟ ಚಿತ್ರಣ ಕಾಣುತ್ತಿದೆ ಎಂದು ಮಾಜಿ ಶಾಸಕ ಕುಮಾರ್ ಬಂಗಾರಪ್ಪ ಟೀಕಿಸಿದ್ದಾರೆ.

ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದಿವಂಗತ ಅಂಬರೀಷ್ ಅನೇಕ ಜನಪರ ಕಾರ್ಯಕ್ರಮಗಳನ್ನು ನೀಡಿದ್ದಾರೆ. ಆದರೆ, ಇಂದು ಸುಮಲತಾ ಅವರ ಪರವಾಗಿ ಇರುವ ಅಲೆಯನ್ನು ಎದುರಿಸಲು ಅಂಬರೀಷ್ ಅವರ ಹೆಸರನ್ನು ಅಳಿಸಿ ಹಾಕುವ ಪ್ರಯತ್ನಕ್ಕೆ ಮುಂದಾಗಿದ್ದಾರೆ ಎಂದು ಆರೋಪಿಸಿದರು.

ಜಿಲ್ಲೆಯಲ್ಲಿ ಬಿಜೆಪಿ ಅಭ್ಯರ್ಥಿಯಿಂದ ಗೆಲ್ಲಲು ಸಾಧ್ಯವಿಲ್ಲ. ಆದ್ದರಿಂದ ಸುಮಲತಾ ಅವರಿಗೆ ಬಿಜೆಪಿ ಬೇಷರತ್ ಬೆಂಬಲ ಸೂಚಿಸಿದೆ. ಅವರ ಗೆಲುವಿಗೆ ಬಿಜೆಪಿ ಮತಗಳು ಸಹಕಾರಿಯಾಗಲಿವೆ ಎಂಬ ಕಾರಣಕ್ಕಾಗಿ ಸುಮಲತಾ ಅವರಿಗೆ ಬೆಂಬಲ ಘೋಷಿಸಿದೆ. ಬಿಜೆಪಿ ಸೇರುವಂತೆ ಷರತ್ತು ಹಾಕಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.

ಜನತೆಯ ಪರವಾದ ಆಶಯಗಳನ್ನು ಜೆಡಿಎಸ್ ತುಳಿಯಲು ಪ್ರಯತ್ನಿಸುತ್ತಿದ್ದೆ. ತನ್ನ ಮೂರು ದಿನಗಳ ಚುನಾವಣೆಯ ಮೇಲೆ ನಂಬಿಕೆಯನ್ನಿಟ್ಟಿದೆ. ಹಣ ಹಾಗೂ ಜಾತಿಯ ಆಧಾರದ ಮೇಲೆ ಮತ ಹಾಕುವಂತೆ ಒತ್ತಾಯ ಮಾಡುತ್ತಿದೆ ಎಂದು ದೂರಿದರು.

ಗೋಷ್ಠಿಯಲ್ಲಿ ಬಿಜೆಪಿ ಜಿಲ್ಲಾ ಉಸ್ತುವಾರಿ ಈ.ಅಶ್ವತ್‍ ನಾರಾಯಣ, ಜಿಲ್ಲಾಧ್ಯಕ್ಷ ಕೆ.ನಾಗಣ್ಣಗೌಡ, ಪ್ರಕಾಶ್, ರಮೇಶ್, ಆತ್ಮಾನಂದ, ಶಂಕರೇಗೌಡ, ಯುವರಾಜ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News