ಕಾಣೆಯಾಗಿದ್ದ ಮಗು ಶವವಾಗಿ ಪತ್ತೆ

Update: 2019-04-13 18:03 GMT

ಕೋಲಾರ,ಎ.13: ಅಪಹರಣವಾಗಿದ್ದ ಮೂರು ವರ್ಷದ ಮಗು ಶವವಾಗಿ ಪತ್ತೆಯಾದ ಘಟನೆ ಕೋಲಾರ ಜಿಲ್ಲೆಯ ಮಾಲೂರು ಹುಲ್ಕೂರು ಗ್ರಾಮದಲ್ಲಿ ನಡೆದಿದೆ.

ಮೂರು ವರ್ಷದ ವೇದ ಮೃತ ಮಗು. ಪಚ್ಚಪ್ಪ ಹಾಗೂ ಕವಿತಾ ದಂಪತಿಯ ಮಗು, ಗುರುವಾರ ಸಂಜೆ ಕಾಣಿಯಾಗಿತ್ತು. ಇಂದು ಶವವಾಗಿ ಪತ್ತೆಯಾಗಿದೆ.

ಅದೇ ಗ್ರಾಮದ ಮುನಿರಾಜು ಎಂಬಾತ ಮಗುವನ್ನು ಕೊಲೆಗೈದಿದ್ದಾನೆ ಎನ್ನಲಾಗಿದ್ದು, ಮಾಲೂರು ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಘಟನೆ ಬಗ್ಗೆ ಸಂಪೂರ್ಣ ಮಾಹಿತಿ ಇನ್ನಷ್ಟೇ ತಿಳಿದುಬರಬೇಕಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News