ಟ್ರಂಪ್‌ರ ತೆರಿಗೆ ವಿವರಗಳನ್ನು ನೀಡಲು ಪ್ರತಿಪಕ್ಷದಿಂದ ಗಡುವು

Update: 2019-04-14 16:55 GMT

ವಾಶಿಂಗ್ಟನ್, ಎ. 14: ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪಾವತಿಸಿರುವ ತೆರಿಗೆ ವಿವರಗಳನ್ನು ನೀಡಲು ಅಮೆರಿಕದ ಪ್ರತಿಪಕ್ಷ ಡೆಮಾಕ್ರಟಿಕ್ ಸಂಸದರು ಆಂತರಿಕ ಕಂದಾಯ ಇಲಾಖೆಗೆ ಎಪ್ರಿಲ್ 23ರ ಕೊನೆಯ ಗಡುವು ನೀಡಿದ್ದಾರೆ.

ಈ ಗಡುವನ್ನು ಇಲಾಖೆಯು ಶ್ರದ್ಧೆಯಿಂದ ಪರಿಶೀಲಿಸುತ್ತಿದೆ ಎಂಬುದಾಗಿ ಖಜಾನೆ ಕಾರ್ಯದರ್ಶಿ ಸ್ಟೀವನ್ ಮನುಚಿನ್ ಹೇಳಿದ್ದಾರೆ.

‘‘ನನ್ನ ಬೇಡಿಕೆ ಮತ್ತು ಸಮಿತಿಯ ಅಧಿಕಾರದ ಬಗ್ಗೆ ಕಳವಳ ವ್ಯಕ್ತವಾಗಿರುವುದು ನನ್ನ ಗಮನಕ್ಕೆ ಬಂದಿದೆ. ಆದರೆ, ಆ ಕಳವಳದಲ್ಲಿ ಹುರುಳಿಲ್ಲ’’ ಎಂದು ಹೌಸ್ ವೇಸ್ ಆ್ಯಂಡ್ ಮೀನ್ಸ್ ಸಮಿತಿ ಅಧ್ಯಕ್ಷ ರಿಚರ್ಡ್ ನಿಯಲ್ ಆಂತರಿಕ ಕಂದಾಯ ಇಲಾಖೆ  ಕಮಿಶನರ್ ಚಾರ್ಲ್ಸ್ ರೆಟಿಗ್‌ಗೆ ಬರೆದ ಪತ್ರವೊಂದರಲ್ಲಿ ಹೇಳಿದ್ದಾರೆ.

ಆರಂಭಿಕ ಎಪ್ರಿಲ್ 10ರ ಗಡುವು ಕೊನೆಗೊಂಡ ಬಳಿಕ ಅವರು ಈ ಪತ್ರ ಬರೆದಿದ್ದಾರೆ.

ತನ್ನ ತೆರಿಗೆ ವಿವರಗಳ ಪರಿಶೋಧನೆ ಆಗುತ್ತಿರುವ ಹಿನ್ನೆಲೆಯಲ್ಲಿ, ಆ ವಿವರಗಳನ್ನು ನೀಡಲು ಸಾಧ್ಯವಿಲ್ಲ ಎಂಬುದಾಗಿ ಟ್ರಂಪ್ ಹೇಳಿದ್ದಾರೆ. ಆದರೆ, ತೆರಿಗೆ ವಿವರಗಳನ್ನು ನೀಡಲು ಇದು ತಡೆಯಲ್ಲ ಎಂದು ಇಲಾಖೆ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News