ಪಿಯುಸಿ ಫಲಿತಾಂಶ: ಪತ್ರಿಕಾ ಏಜೆಂಟ್ ಪುತ್ರನಿಗೆ ಡಿಸ್ಟಿಂಕ್ಷನ್

Update: 2019-04-15 18:49 GMT

ಮಡಿಕೇರಿ,ಎ.15: ಪಿಯುಸಿ ಪರೀಕ್ಷಾ ಫಲಿತಾಂಶದಲ್ಲಿ ಕೊಡಗಿನ ಪತ್ರಿಕಾ ಏಜೆಂಟರೊಬ್ಬರ ಪುತ್ರ ಡಿಸ್ಟಿಂಕ್ಷನ್‍ನಲ್ಲಿ ಉತ್ತೀರ್ಣರಾಗಿದ್ದಾರೆ.
ಗೋಣಿಕೊಪ್ಪದಲ್ಲಿ ಪತ್ರಿಕಾ ಏಜೆಂಟರಾಗಿರುವ ನಂಗಾರು ಜಮುನಾ ವಸಂತ್ ಅವರ ಪುತ್ರ ಎನ್.ವಿ.ಅನೀಶ್ ಅಯ್ಯಪ್ಪ ಕಾಮರ್ಸ್ ವಿಭಾಗದಲ್ಲಿ 587 ಅಂಕಗಳನ್ನು ಪಡೆದಿದ್ದಾನೆ.

ಬಂಟ್ವಾಳ ತಾಲೂಕಿನ ಅಳಿಕೆ ಸತ್ಯಸಾಯಿ ಲೋಕಸೇವಾ ವಿದ್ಯಾ ಸಂಸ್ಥೆಯ ವಿದ್ಯಾರ್ಥಿಯಾಗಿರುವ ಅನೀಶ್ ಅಯ್ಯಪ್ಪ ಬಿಸ್‍ನೆಸ್ ಸ್ಟಡೀಸ್ ಹಾಗೂ ಸ್ಟಾಟಿಸ್ಟಿಕ್ಸ್ ನಲ್ಲಿ ತಲಾ 98 ಅಂಕ ಪಡೆದರೆ, ಅಕೌಂಟೆನ್ಸಿ ಹಾಗೂ ಬೇಸಿಕ್ ಮ್ಯಾಥ್ಸ್ ನಲ್ಲಿ ತಲಾ 100 ಅಂಕಗಳನ್ನು ಪಡೆದಿದ್ದಾನೆ. ಇದರೊಂದಿಗೆ ಇಂಗ್ಲೀಷ್‍ನಲ್ಲಿ 93 ಹಾಗೂ ಸಂಸ್ಕೃತದಲ್ಲಿ 98 ಅಂಕಗಳನ್ನು ಪಡೆಯುವ ಮೂಲಕ ಒಟ್ಟು 587 ಅಂಕಗಳನ್ನು ತಮ್ಮದಾಗಿಸಿಕೊಂಡಿದ್ದಾನೆ.

ಕಾಲೇಜಿನಲ್ಲಿ ಶಿಕ್ಷಣಕ್ಕೆ ನೀಡುತ್ತಿರುವ ಮಹತ್ವ, ಅಲ್ಲಿನ ವಾತಾವರಣ, ಶಿಕ್ಷಕರ ಪ್ರೋತ್ಸಾಹ, ವಿಶೇಷವಾಗಿ ‘ಟೆನ್ಷನ್ ಫ್ರೀ’ ಶಿಕ್ಷಣ ತನ್ನ ಈ ಸಾಧನೆಗೆ ಕಾರಣ ಎಂದು ಅನೀಶ್ ಅನಿಸಿಕೆ ವ್ಯಕ್ತಪಡಿಸಿದ್ದಾನೆ.

ಬೆಳಗ್ಗೆ 5ಗಂಟೆಯಿಂದ ರಾತ್ರಿ 9ಗಂಟೆವರೆಗೆ ಶಿಕ್ಷಣ ಹಾಗೂ ಮಾನಸಿಕ ನೆಮ್ಮದಿಗೆ ಭಜನೆಯೊಂದಿಗೆ ದಿನಚರಿ ನಡೆಯುತ್ತದೆ. ಟಿ.ವಿ.ಹಾಗೂ ಮೊಬೈಲ್‍ಗೆ ಅವಕಾಶವಿಲ್ಲ. ವಿವಿಧೆಡೆಯ ವಿದ್ಯಾರ್ಥಿಗಳು ಇರುವುದರಿಂದ ಪರಸ್ಪರ ವಿಚಾರ ವಿನಿಮಯದೊಂದಿಗೆ ಮನೆಯ ಯೋಚನೆಯೂ ಇಲ್ಲಿ ಬರುವುದಿಲ್ಲ. ಇದೇ ನನ್ನ ಈ ಸಾಧನೆಗೆ ಪ್ರೇರಣೆ ಎಂದು ಅವರು ತಿಳಿಸಿದರು.

ಮುಂದೆ ತಾನು ಚಾರ್ಟರ್ಡ್ ಅಕೌಂಟೆಂಟ್ ಆಗುವ ಗುರಿ ಹೊಂದಿದ್ದೆ. ಆದರೆ ಇದೀಗ ಅದಕ್ಕಿಂತ ಮ್ಯಾನೇಜ್‍ಮೆಂಟ್ (ಎಂಬಿಎ)ವಿಭಾಗದಲ್ಲಿ ಮಾನವಸಂಪನ್ಮೂಲ ವಿಷಯದಲ್ಲಿ ಆಸಕ್ತಿ ಮೂಡಿದ್ದು, ಆ ವಿಷಯದಲ್ಲಿ ಅಭ್ಯಾಸ ಮುಂದುವರಿಸುವುದಾಗಿ ತಿಳಿಸಿದರು.

ಸೈಂಟ್ ಆನ್ಸ್ ಗೆ ಶೇ.98.71 ಫಲಿತಾಂಶ

ವೀರಾಜಪೇಟೆಯ ಅಂತ ಅನ್ನಮ್ಮ ಪದವಿಪೂರ್ವ ಕಾಲೇಜು ಶೇ.98.71ರಷ್ಟು ಫಲಿತಾಂಶ ಪಡೆದಿದೆ. ವಿಜ್ಞಾನ ವಿಭಾಗದಲ್ಲಿ ಪರೀಕ್ಷೆಗೆ ಹಾಜರಾಗಿದ್ದ 55 ಮಂದಿ ಬಾಲಕರು ಹಾಗು 81 ಮಂದಿ ಬಾಲಕಿಯರ ಪೈಕಿ 54 ಬಾಲಕರು ಹಾಗೂ 80 ಬಾಲಕಿಯರು ಉತ್ತೀರ್ಣರಾಗಿದ್ದು, ಶೇ,98.5 ಫಲಿತಾಂಶ ಲಭಿಸಿದೆ. ಇವರಲ್ಲಿ ಟಿ.ಎನ್. ವೈಷ್ಣವಿ (581) ಎಂ.ಎಸ್. ಮೊಹಮ್ಮದ್ ಝೈದ್(568) ಹಾಗೂಪಿ.ಎಂ. ಚೈತ್ರಾ (563) ಅತ್ಯಧಿಕ ಅಂಕದೊಂದಿಗೆ ಡಿಸ್ಟಿಂಕ್ಷನ್‍ನಲ್ಲಿ ತೇರ್ಗಡೆಯಾಗಿದ್ದಾರೆ.

ವಾಣಿಜ್ಯ ವಿಭಾಗದಲ್ಲಿ 81 ಬಾಲಕರು ಹಾಗೂ 92 ಮಂದಿ ಬಾಲಕಿಯರ ಪೈಕಿ 80 ಬಾಲಕರು ಮತ್ತು 91 ಬಾಲಕಿಯರು ಉತ್ತೀರ್ಣರಾಗಿದ್ದು, ಶೇ.98.8 ಫಲಿತಾಂಶ ಬಂದಿದೆ. ಈ ವಿಭಾಗದಲ್ಲಿ ಎ.ಜಿ.ಸಾಕ್ಷಿ (574), ಅಫಿಯಾ ಸುಲ್ತಾನ (565) ಹಾಗೂ ಕೆ.ಎ.ತೇಜಸ್ (563)ಅತ್ಯಧಿಕ ಅಂಕದೊಂದಿಗೆ ಡಿಸ್ಟಿಂಕ್ಷನ್‍ನಲ್ಲಿ ತೇರ್ಗಡೆಯಾಗಿದ್ದಾರೆ. ಉಳಿದಂತೆ ವಿಜ್ಞಾನ ಹಾಗೂ ವಾಣಿಜ್ಯ ವಿಭಾಗದಲ್ಲಿ ತಲಾ 33 ಮಂದಿ ಡಿಸ್ಟಿಂಕ್ಷನ್‍ನಲ್ಲಿ ತೇರ್ಗಡೆಯಾಗಿದ್ದರೆ. 223 ಮಂದಿ ಪ್ರಥಮ ಶ್ರೇಣಿ ಹಾಗೂ 15 ಮಂದಿ ದ್ವಿತೀಯ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News