ಮೂಡಿಗೆರೆ: ಚಿನ್ನಿಗ ಸರಕಾರಿ ಕಾಲೇಜು ವಿದ್ಯಾರ್ಥಿಗಳ ಸಾಧನೆ

Update: 2019-04-15 18:55 GMT

ಮೂಡಿಗೆರೆ, ಎ.15: ದ್ವಿತೀಯ ಪಿಯುಸಿ ಫಲಿತಾಂಶದಲ್ಲಿ ತಾಲೂಕಿನ ಚಿನ್ನಿಗ ಗ್ರಾಮದ ಸರ್ಕಾರಿ ಪದವಿಪೂರ್ವ ಕಾಲೇಜು ಶೇ.93.75 ಫಲಿತಾಂಶ ಪಡೆದಿದೆ. ಕಾಲೇಜಿನ ಒಟ್ಟು 16 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು. 15 ಮಂದಿ ಉತ್ತೀರ್ಣರಾಗಿದ್ದಾರೆ. 10 ಪ್ರಥಮ ಶ್ರೇಣಿ, ನಾಲ್ವರು ದ್ವಿತೀಯ ಹಾಗೂ ಓರ್ವ ವಿದ್ಯಾರ್ಥಿ ತೃತೀಯ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದಾರೆ. 

ಅತೀ ಹೆಚ್ಚು ಅಂಕ ಗಳಿಸಿದವರ ಪೈಕಿ ಸುಮಯ್ಯ 483 ಅಂಕಗಳು, ಶ್ವೇತಾ 477, ತುಳಸಿ 461 ಅಂಕ ಗಳಿಸಿದ್ದಾರೆ.

ಈ ಕಾಲೇಜಿನ ವಿಷಯವಾರು ಫಲಿತಾಂಶ: ಕನ್ನಡ ಶೇ.100, ಇಂಗ್ಲೀಷ್ ಶೇ.93.75, ಇತಿಹಾಸ ಶೇ.100, ಸಮಾಜಶಾಸ್ತ್ರ ಶೇ.100, ರಾಜ್ಯಶಾಸ್ತ್ರ ಶೇ.100 ಫಲಿತಾಂಶ ಪಡೆದಿದೆ. ಗ್ರಾಪಂ ಅಧ್ಯಕ್ಷ ಹಾಗೂ ಕಾಲೇಜು ಅಭಿವೃದ್ಧಿ ಮಂಡಳಿ ಅಧ್ಯಕ್ಷರೂ ಆದ ಸುನೀಲ್ ನಿಡಗೋಡು, ಸದಸ್ಯರಾದ ವನಿತಾ ವಿಶ್ವಾಮಿತ್ರ, ಸುಂದರ್‍ಕುಮಾರ್, ವಿರೇಂದ್ರ, ಪ್ರಾಚಾರ್ಯ ಧರ್ಮಶೆಟ್ಟಿ ವಿದ್ಯಾರ್ಥಿಗಳ ಸಾಧನೆಗೆ ಅಭಿನಂದನೆ ಸಲ್ಲಿಸಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News