ಚಿಕ್ಕಮಗಳೂರು: ಶ್ರೀ ಸಾಯಿ ಏಂಜಲ್ಸ್ ಕಾಲೇಜ್ ವಿದ್ಯಾರ್ಥಿನಿಯರು ಜಿಲ್ಲೆಗೆ ಟಾಪರ್ಸ್

Update: 2019-04-15 19:06 GMT

ಚಿಕ್ಕಮಗಳೂರು, ಎ.15: ದ್ವಿತೀಯ ಪಿಯಿಸಿ ಫಲಿತಾಂಶದಲ್ಲಿ ಸಿರಿಗಾಪುರ ಶ್ರೀ ಸಾಯಿ ಏಂಜಲ್ಸ್ ಕಾಲೇಜಿನ ವಿದ್ಯಾರ್ಥಿನಿಯರಾದ ಸ್ನೇಹಶ್ರೀ ಮತ್ತು ಅನುಶಾ ಎಸ್.ರಾವ್ ಜಿಲ್ಲೆಗೆ ಟಾಪರ್ ಆಗಿ ಹೊರಹೊಮ್ಮಿದ್ದಾರೆ ಎಂದು ಮುಖ್ಯ ಪ್ರಾಂಶುಪಾಲರಾದ ವಿಜಯಾನಾಗೇಶ್ ತಿಳಿಸಿದ್ದಾರೆ.

ಅನುಶಾ ಎಸ್.ರಾವ್ ಜೀವಶಾಸ್ತ್ರದಲ್ಲಿ 100, ಗಣಿತ 99, ರಸಾಯನಶಾಸ್ತ್ರ 98, ಭೌತಶಾಸ್ತ್ರ 97, ಕನ್ನಡ 95, ಇಂಗ್ಲೀಷ್ 94 ಹಾಗೂ ಎಸ್.ಸ್ನೇಹಶ್ರೀ ರಸಾಯನಶಾಸ್ತ್ರ 100, ಗಣಿತ 100, ಜೀವಶಾಸ್ತ್ರ 99, ಕನ್ನಡ 98, ಭೌತಶಾಸ್ತ್ರ 98, ಇಂಗ್ಲೀಷ್ 88 ಅಂಕಗಳನ್ನು ಪಡೆದು ಒಟ್ಟಾರೆ ಇಬ್ಬರು 583 ಅಂಕಗಳನ್ನು ಪಡೆದು ಶೇ 97.17 ರಷ್ಟು ಗಳಿಸಿ ಜಿಲ್ಲೆಗೆ ಟಾಪರ್‍ ಆಗಿ ಹೊರಹೊಮ್ಮಿದ್ದಾರೆ.

ಎಸ್.ಬಿ.ದೀಪಾ 579, ಆರ್.ಅಗ್ನೇಶ್, ಹೆಚ್.ಆರ್.ನೇಹಾ ದೇವಾಂಗ್ ಮತ್ತು ಎನ್.ವಿನಯಾ ಪೈ 578, ಹೆಚ್.ಎಸ್.ಅನುಶ್ರೀ, ಮೇವಿಶ್ ನಜಾಮ್ ಮತ್ತು ಸೈಯದಾ ಮಿಸ್ಬಾ ಉರೂಝ್ 577, ಆರ್.ಅಭಿಷೇಕ್, ಎಸ್.ಜೆ.ಸೃಜನ್ ಗೌಡ 576, ಬಿ.ಎ.ನಾಗಶ್ರೀ 574, ಸಿ.ಎಸ್.ಸಮೀಕ್ಷಾ 573, ಅನನ್ಯ ಆರ್ ಪ್ರಭು ಮತ್ತು ತನ್ಮಯಿ ಕೆ ಭಟ್ 570, ಸೇಜಲ್ ಬಿ ಶೆಟ್ಟಿ 568, ರಾಯಿಸ್ಟಲ್ ಲೋಬೋ 567 ಅಂಕಗಳನ್ನು ಪಡೆಯುವ ಮೂಲಕ ಟಾಪ್ ಟೆನ್ ವಿದ್ಯಾರ್ಥಿಗಳಾಗಿದ್ದಾರೆ ಎಂದು ತಿಳಿಸಿದ್ದಾರೆ.

263 ವಿದ್ಯಾರ್ಥಿಗಳು ಪರೀಕ್ಷೆಗೆ ಕುಳಿತಿದ್ದು 118 ವಿದ್ಯಾರ್ಥಿಗಳು ಅತ್ಯುನ್ನತ ಶ್ರೇಣಿ,141 ಪ್ರಥಮ ಶ್ರೇಣಿ, 2 ದ್ವಿತೀಯ ಶ್ರೇಣಿಯಲ್ಲಿ ಉತ್ತೀರ್ಣರಾಗಿ ಶೇ 99.23 ಫಲಿತಾಂಶ ಲಭಿಸಿದೆ.

ಕಳೆದ 11 ವರ್ಷಗಳ ಹಿಂದೆ ಕಾಲೇಜು ಆರಂಭವಾಗಿದ್ದು ಅಂದಿನಿಂದ ಇಂದಿನವರೆಗೂ ಜಿಲ್ಲೆಗೆ ನಮ್ಮ ಕಾಲೇಜಿನ ವಿದ್ಯಾರ್ಥಿಗಳೆ ಟಾಪರ್ ಆಗಿ ಹೊರಹೊಮ್ಮಿರುವುದು ಹೆಮ್ಮೆಯ ವಿಷಯ. ಕಾಲೇಜಿಗೆ 9 ವರ್ಷ ಶೇ.100 ರಷ್ಟು ಫಲಿತಾಂಶ ಬಂದಿದ್ದು ಈ ಸಾಲಿನಲ್ಲಿ ಶೇ 99.23 ಬಂದಿರುವುದಕ್ಕೆ ಸಂಸ್ಥೆಯ ಉಪನ್ಯಾಸಕರು ಹಾಗೂ ಆಡಳಿತ ಮಂಡಳಿಯ ಪರಿಶ್ರಮ ದೊಡ್ಡದು. ಅದರೊಂದಿಗೆ ಪೋಷಕರ ಸಹಕಾರವೂ ಹೆಚ್ಚಿತ್ತು ಎಂದು ವಿಜಯಾನಾಗೇಶ್ ತಿಳಿಸಿದ್ದಾರೆ.

ಜಿಲ್ಲೆಗೆ ಟಾಪರ್ ಆಗಿ ಹೊರಹೊಮ್ಮಿರುವ ಸ್ನೇಹಶ್ರೀ ಅವರು ಆರ್.ಸತೀಶ್ ಮತ್ತು ಅರುಣಾಕುಮಾರಿ ಯವರ ಪುತ್ರಿಯಾಗಿದ್ದು, ಅನುಶಾ ಎಸ್ ರಾವ್ ಅವರು ಎಂ.ಕೆಶ್ರೀನಿವಾಸ್‍ರಾವ್ ಮತ್ತು ಬಿ.ಎಸ್.ಹೇಮಾ ಅವರ ಪುತ್ರಿಯಾಗಿದ್ದಾಳೆ.

ಭೌತಶಾಸ್ತ್ರ ವಿಷಯದಲ್ಲಿ ರಾಜ್ಯದಲ್ಲಿ 7 ವಿದ್ಯಾರ್ಥಿಗಳು ಮಾತ್ರ ನೂರಕ್ಕೆ ನೂರು ಅಂಕಗಳಿಸಿದ್ದು ಅದರಲ್ಲಿ ನಮ್ಮ ಕಾಲೇಜಿನ ವಿದ್ಯಾರ್ಥಿನಿಯರಾದ ಸೈಯದಾ ಮಿಸ್ಬಾ ಉರೂಝ್ ಮತ್ತು ಸೃಜನ್ ಗೌಡ 100 ಅಂಕಗಳಿಸಿರುವುದು ಕಾಲೇಜಿನ ಕೀರ್ತಿ ಹೆಚ್ಚಿಸಿದೆ. ಮತ್ತು ವಿವಿಧ ವಿಷಯಗಳಲ್ಲಿ 35 ವಿದ್ಯಾರ್ಥಿಗಳು ನೂರಕ್ಕೆ ನೂರು ಅಂಕಗಳಿಸಿದ್ದಾರೆ ಎಂದರು.

ಪ್ರಾಂಶುಪಾಲರಾದ ಯಾಮಿನಿ ಸವೂರ್, ಸಂಸ್ಥೆಯ ಜಂಟಿ ಕಾರ್ಯದರ್ಶಿ ಎಂ.ಜೆ.ಕಾರ್ತಿಕ್, ಪ್ರಾಚಾರ್ಯರಾದ ಕೆ.ಕೆ.ನಾಗರಾಜ್ ಮತ್ತು ಉಪನ್ಯಾಸಕರು ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News